ಮೈಸೂರು:ಮಹಿಷ ದಸರಾ ವಿಚಾರದಲ್ಲಿ ವಿವಾದವಿದ್ದು ಆಚರಿಸಬೇಕೋ ಬಾರದೋ ಎನ್ನುವ ತಿಕ್ಕಾಟ ಆಗಾಗ ನಡೆಯುತ್ತಿರುತ್ತದೆ. ಇದೀಗ ಮತ್ತೊಮ್ಮೆ ಮಹಿಷ ದಸರಾ ಆಚರಣೆ ವಿಚಾರ ಮುನ್ನೆಲೆಗೆ ಬಂದಿದ್ದು ಈ ಕಾರ್ಯಕ್ರಮ ನಡೆಯಲಿದೆ ಎನ್ನುವ ಸುಳಿವನ್ನು ಸಚಿವ ಡಾ. ಎಚ್.ಸಿ. ಮಹದೇವಪ್ಪ ನೀಡಿದ್ದಾರೆ.
ಇದನ್ನೂ ಓದಿ:ಸಾವರ್ಕರ್, ಗೋಡ್ಸೆಗಿಂತ ಮಹಿಷ ಕೆಟ್ಟವನಾ?; ಪುಷ್ಪಾರ್ಚನೆಗೆ ಸೀಮಿತವಾದ ಮಹಿಷ ದಸರಾ
ಈ ಹಿಂದೆ, ಸಾಹಿತಿ ಪ್ರೊ. ಕೆ.ಎಸ್‌. ಭಗವಾನ್‌, ”ದೇಶದಲ್ಲಿ ಬೌದ್ಧರು ಒಂದು ಕಾಲದಲ್ಲಿ ಪ್ರಮುಖರಾಗಿದ್ದರು. ವಿವೇಕಾನಂದರು ಕೂಡ ತಾವು ಬೌದ್ಧರೆಂದೇ ಹೇಳಿದ್ದಾರೆ. ಆದರೂ ರಾಮಾಯಣದಲ್ಲಿ ರಾಮನ ಬಾಯಿಯಿಂದ ಬುದ್ಧ ಕಳ್ಳ ಎಂದು ಹೇಳಿಸಲಾಗಿದೆ. ಇನ್ನು, ಮಹಿಷ ಸಹ ಬೌದ್ಧನಾಗಿದ್ದು, ಆತ ಒಳ್ಳೆಯ ರಾಜನಾಗಿದ್ದ ಕಾರಣದಿಂದಲೇ ನಗರಕ್ಕೆ ಆತನ ಹೆಸರನ್ನು ಇರಿಸಲಾಗಿದೆ,” ಎಂದು ಮಹಿಷ ದಸರಾ ಪರವಾಗಿ ಹೇಳಿಕೆ ನೀಡಿದ್ದರು.
ಇದನ್ನೂ ಓದಿ:ಜಿಲ್ಲಾಡಳಿತದ ವಿರೋಧದ ನಡುವೆಯೂ ಮಹಿಷ ದಸರಾ ಆಚರಣೆ
ಸುದ್ದಿಗಾರರೊಂದಿಗೆ ಜಿಲ್ಲಾ ಉಸ್ತುವಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ “ಧಾರ್ಮಿಕ ಸ್ವಾತಂತ್ರ್ಯ ಸಂವಿಧಾನಬದ್ಧವಾದ ಹಕ್ಕು. ಯಾರು ಯಾವ ಆಚರಣೆಯನ್ನು ಬೇಕಾದರೂ ಮಾಡಬಹುದು. ಯಾವ ಆಚರಣೆ ಮಾಡಬೇಕು, ಯಾವುದನ್ನು ಮಾಡಬಾರದು ಅಂತ ಸರ್ಕಾರ ತೀರ್ಮಾನಿಸಲು ಅವಕಾಶ ಇಲ್ಲ.
ಮಹಿಷಾ ದಸರಾಕ್ಕೆ ಅವಕಾಶ ನೀಡುವ ವಿಚಾರ ಇನ್ನೂ ನಮ್ಮ ಮುಂದೆ ಬಂದಿಲ್ಲ. ಮೈಸೂರು ದಸರಾಕ್ಕೆ ಸಿದ್ಧತೆ ಮಾಡಿಕೊಳ್ಳಲು ಸಿಎಂ ಸೂಚನೆ ನೀಡಿದ್ದಾರೆ. ಈ ತಿಂಗಳ ಅಂತ್ಯದಲ್ಲಿ ಉನ್ನತ ಮಟ್ಟದ ಸಮಿತಿ ಸಭೆ ನಡೆಯಲಿದೆ. ಅದಕ್ಕೆ ಬೇಕಾದ ಪೂರ್ವ ತಯಾರಿ ಮಾಡಿಕೊಳ್ಳಲಾಗುತ್ತಿದೆ” ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:ಹಿಂದು ಎಂಬುದು ಧರ್ಮವೇ ಅಲ್ಲ; ಮತ್ತೊಂದು ವಿವಾದದ ಕಿಡಿ ಹಚ್ಚಿದ ಪ್ರೊ.ಭಗವಾನ್​
ಇದೇ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಎತ್ತಿರುವ ಪೆನ್‌ಡ್ರೈವ್ ವಿಚಾರವಾಗಿ ಮಾತನಾಡಿದ್ದು, “ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ. ಪೆನ್‌ಡ್ರೈವ್‌ನಲ್ಲಿ ಏನಿದೆ ಅಂತ ಗೊತ್ತಿಲ್ಲ. ದಾಖಲೆ ಬಿಡುಗಡೆ ಮಾಡಿ ಅಂತ ವಿಧಾನಸಭೆಯಲ್ಲೇ ಒತ್ತಾಯ ಮಾಡಿದ್ದೇವೆ” ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿಕೆ ನೀಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + twenty =
Remember me
