ಬೆಂಗಳೂರು:ಸದಾಶಿವನಗರದಲ್ಲಿ ಸಚಿವರೊಬ್ಬರ ಮನೆ ಮುಂದೆ ಇಂದು ಮಾರಾಮಾರಿ ನಡೆದಿದ್ದು, ವಿಡಿಯೋ ವೈರಲ್​ ಆಗಿದೆ.
ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ. ಸುಧಾಕರ್​ರ ನಿವಾಸದ ಬಳಿ ಶುಕ್ರವಾರ ಬೆಳಗ್ಗೆ ಸಿಬ್ಬಂದಿಗಳ ನಡುವೆ ಗಲಾಟೆ ಆಗಿದೆ. ಸಚಿವರ ಗನ್​ಮಾನ್ ತಿಮ್ಮಯ್ಯರಿಂದ ಸೋಮಶೇಖರ್ ಮೇಲೆ ಹಲ್ಲೆ ನಡೆದಿದೆ. ಸೋಮಶೇಖರ್​ ಸಚಿವರ ಮನೆಯ ಖಾಸಗಿ ಡ್ರೈವರ್​. ಇವರಿಬ್ಬರು ಮನೆ ಮುಂದೆ ಉರುಳಾಡಿಕೊಂಡು, ಅಂಗಿ ಕಿತ್ತು ಬರುವಂತೆ ಕಿತ್ತಾಡಿಕೊಂಡಿದ್ದಾರೆ.
ನಿನ್ನೆ ಚಹಾ ಮಾರುತ್ತಿದ್ದ ಅಂಗವಿಕಲನಿಗೆ ತಿಮ್ಮಯ್ಯ ಹೊಡೆದಿದ್ದರು. ಇದನ್ನು ಸೋಮಶೇಖರ್ ವಿರೋಧಿಸಿದ್ದರು. ಇದೇ ವಿಚಾರವಾಗಿ ಇಂದು ಗಲಾಟೆ ಆಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಗರಂ ಆದ ಸಚಿವರು ಗನ್​ಮ್ಯಾನ್ ತಿಮ್ಮಯ್ಯನನ್ನು ತಮ್ಮ ಬಳಿ ಕೆಲಸಕ್ಕೆ ಬಾರದಂತೆ ಸೂಚಿಸಿದ್ದಾರೆ.(ಸಚಿವರ ಮನೆ ಮುಂದೆ ಸಿಬ್ಬಂದಿ ಗಲಾಟೆಯ ವಿಡಿಯೋಗೆ ಕೆಳಗೆ ಕೊಟ್ಟಿರುವ ವಿಜಯವಾಣಿ ಫೇಸ್​ಬುಕ್​ ಲಿಂಕ್​ ಕ್ಲಿಕ್​ ಮಾಡಿ. ಹೆಗಲಲ್ಲಿ ಬ್ಯಾಗ್​ ಹಾಕಿರುವ ವ್ಯಕ್ತಿ ಸೋಮಶೇಖರ್, ಮತ್ತೊಬ್ಬ ಗನ್​ಮ್ಯಾನ್ ತಿಮ್ಮಯ್ಯ)
ಒಬ್ಬನೊಂದಿಗೇ ಅಮ್ಮ-ಮಗಳ ಅಕ್ರಮ ಸಂಬಂಧ! ಪ್ರಿಯಕರನೊಟ್ಟಿಗೆ ಆ ರಾತ್ರಿ ನಡೆಯಿತು ಘೋರ ಕೃತ್ಯ

ಸಿಡಿ ಕೇಸ್​: ಹೆಗಲು ಮುಟ್ಟಿ ನೋಡಿಕೊಂಡದ್ದಕ್ಕೂ ಈ ಫೋಟೋಗೂ ಸಂಬಂಧವಿದೆಯಾ?

ಅತ್ತ ತೋಟದಲ್ಲಿ ಪೂಜೆ ನಡೆಯುತ್ತಿತ್ತು, ಇತ್ತ ಮನೆಯಲ್ಲಿ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ!

ತವರು ಮನೆಯಲ್ಲಿ ಮಗಳು ಆತ್ಮಹತ್ಯೆ! ಸಾವಿಗೂ ಮುನ್ನ ಮನದ ದುಃಖ ಅಕ್ಷರಕ್ಕಿಳಿಸಿದ ಸುಂದರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 4 =
Remember me
