ಬೆಂಗಳೂರು:ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮದ ವಸತಿ ಯೋಜನೆಗಳಲ್ಲಿ ಫಲಾನುಭವಿಗಳ ವಂತಿಗೆ ಪಾವತಿ ಆಗುತ್ತಿಲ್ಲ, ಹೀಗಾಗಿ 2015 ರಿಂದ ಒಂದೇ ಒಂದು ಮನೆ ಕೊಡಲು ಸಾಧ್ಯವಾಗಿಲ್ಲ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಮುಖ್ಯಮಂತ್ರಿ ಸಮ್ಮುಖದಲ್ಲಿ ನೇರವಾಗಿಯೇ ಹೇಳಿದರು.
ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳ ಸಭೆಯಲ್ಲಿ ವಸತಿ ಇಲಾಖೆ ಯೋಜನೆ ಬಗ್ಗೆ ಪ್ರಸ್ತಾಪಿಸಿ, ಅತ್ತ ಫಲಾನುಭವಿಗಳು ವಂತಿಗೆ ಪಾವತಿಸುತ್ತಿಲ್ಲ, ಇತ್ತ ಯೋಜನೆ ಪೂರ್ಣ ಗೊಳ್ಳುತ್ತಿಲ್ಲ ಎಂಬಂತಾಗಿದೆ ಎಂದು ಸಚಿವರು ಹಾಗೂ ಅಧಿಕಾರಿಗಳ ಮುಂದೆಯೇ ಹೇಳಿದರು.
ಕೊಳಗೇರಿ ಅಭಿವೃದ್ಧಿ ಮಂಡಳಿಯಲ್ಲಿ 2015 ರಿಂದ 2023 ರವರೆಗೆ 1.80 ಲಕ್ಷ ಮನೆ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ. ಪ್ರತಿ ಮನೆಗೆ 7.50 ಲಕ್ಷ ರೂ. ವೆಚ್ಚ ಆಗುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಬ್ಸಿಡಿ 3.50 ಲಕ್ಷ ರೂ. ಮೊತ್ತದ ಕೆಲಸ ಆಗಿರುವುದು ಬಿಟ್ಟರೆ ಫಲಾನುಭವಿಗಳ ವಂತಿಗೆ ಪಾವತಿ ಆಗದೆ ಮನೆಗಳು ಅರ್ಧ ದಲ್ಲೇ ನಿಂತಿವೆ. 6690 ಕೋಟಿ ರೂ. ಫಲಾನುಭವಿಗಳ ವಂತಿಗೆ ಬರಬೇಕಿದ್ದು 310 ಕೋಟಿ ರೂ. ಮಾತ್ರ ಬಂದಿದೆ ಎಂದು ವಿವರಣೆ ನೀಡಿದರು.
310 ಕೋಟಿ ರೂ.ನಲ್ಲಿಯೂ ಎಸ್‌ಸಿ/ಎಸ್‌ಟಿ ನಿಗಮ, ಕಾರ್ಮಿಕ ಇಲಾಖೆ, ನಗರ ಸ್ಥಳೀಯ ಸಂಸ್ಥೆಯ ಮೊತ್ತ ಸೇರಿದ್ದು ಫಲಾನುಭವಿಗಳು ಕೊಟ್ಟಿರುವುದು ಕೇವಲ 110 ಕೋಟಿ ರೂ. ಮಾತ್ರ ಎಂದು ಅಂಕಿ-ಸಂಖ್ಯೆ ಸಹಿತ ತಿಳಿಸಿದರು.
ರಾಜೀವ್ ಗಾಂಧಿ ವಸತಿ ನಿಗಮದಲ್ಲೂ2013 ರಿಂದ ಇದುವರೆಗೆ 53 ಸಾವಿರ ಮನೆಗಳು ಫಲಾನುಭವಿಗಳ ವಂತಿಗೆ ಪಾವತಿ ಮಾಡದೆ ಪೂರ್ಣಗೊಂಡಿಲ್ಲ. 2.33 ಲಕ್ಷ ಮನೆ ಪೂರ್ಣಗೊಳಿಸಲು 7500 ಕೋಟಿ ರೂ. ಬೇಕಿದ್ದು ಸರ್ಕಾರದಿಂದಲೇ ನೆರವು ನೀಡಿದರೆ ಮಾತ್ರ ಯೋಜನೆ ಪೂರ್ಣಗೊಳಿಸಿ ಬಡವರಿಗೆ ಮನೆ ಕೊಡಲು ಸಾಧ್ಯ ಎಂದು ಪ್ರತಿಪಾದಿಸಿದರು.
ಬೆಂಗಳೂರಿನಲ್ಲಿ 1 ಲಕ್ಷ ಮನೆ ಪೂರ್ಣ ಗೊಳಿಸಲು 250 ಕೋಟಿ ರೂ. ಅಗತ್ಯವಿದೆ. ಅಷ್ಟು ನೆರವು ದೊರೆತರೆ ಹತ್ತು ಸಾವಿರ ಮನೆ ಕೊಡಬಹುದು ಎಂದು ತಿಳಿಸಿದರು. ವಸತಿ ಇಲಾಖೆ ಸಮಸ್ಯೆ ಬಗೆಹರಿಸಲು ಪ್ರತ್ಯೇಕ ಸಭೆ ಕರೆಯೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
