ಬೆಂಗಳೂರು:ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಮಾರಪ್ಪನ ಪಾಳ್ಯ ವಾರ್ಡ್​ನಲ್ಲಿರುವ ಆರ್​ಎಂಸಿ ಯಾರ್ಡ್​ನಲ್ಲಿ ಬಿಜೆಪಿ ಅಭ್ಯರ್ಥಿ ಕೆ. ಗೋಪಾಲಯ್ಯ ಗುರುವಾರ ಮಾರುಕಟ್ಟೆ ವರ್ತಕರು ಹಾಗೂ ಕೂಲಿ ಕಾರ್ವಿುಕರ ಸಭೆಯಲ್ಲಿ ಭಾಗವಹಿಸಿ ಮತಯಾಚನೆ ಮಾಡಿದರು.
ಮಾರುಕಟ್ಟೆ ತೆರವು ಮಾಡಬೇಕೆಂದು ಪ್ರಸ್ತಾಪ ಬಂದಾಗ ನಾನು ಮುಂದೆ ನಿಂತು ಹೆದ್ದಾರಿ ತಡೆ ಮಾಡಿ ನಿಮ್ಮೆಲ್ಲರ ಅಂಗಡಿ ಮುಗ್ಗಟ್ಟುಗಳು ತೆರವು ಮಾಡದಂತೆ ಹೋರಾಟ ಮಾಡಿ ಉಳಿಸಿರುವೆ ಎಂದು ಹೇಳಿದರು.
ಇದನ್ನೂ ಓದಿ:ಕೋವಿಡ್, ಪ್ರವಾಹದ ಸಮಯದಲ್ಲಿ ನೆನಪಾಗಲಿಲ್ಲವೇ?: ಶ್ರೀರಂಗಪಟ್ಟಣ ಜೆಡಿಎಸ್ ಅಭ್ಯರ್ಥಿ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ
ನಿಮ್ಮ ಮಕ್ಕಳ ಶೈಕ್ಷಣಿಕ ಉದ್ಧಾರಕ್ಕಾಗಿ ಕ್ಷೇತ್ರದಲ್ಲಿ ಶಾಲೆಗಳನ್ನು ಅಭಿವೃದ್ಧಿ ಮಾಡಿ ಉಚಿತ ಶಿಕ್ಷಣ ನೀಡುವಲ್ಲಿ ನಾನು ಹಾಗೂ ಬಸವರಾಜ ಬೊಮ್ಮಾಯಿ ಸರ್ಕಾರ ಶ್ರಮಿಸಿದ್ದೇವೆ. ಕರೊನಾ ಸಂಕಷ್ಟದಲ್ಲಿ ಫುಡ್ ಕಿಟ್, ಔಷಧ ಕಿಟ್, ಆಕ್ಸಿಜನ್ ಸೇರಿ ಹಲವು ರೀತಿಯ ಸಹಾಯ ಮಾಡಿದ್ದೇನೆ. ಬುಧವಾರ (ಮೇ 10) ತಾವೆಲ್ಲರೂ ತಪ್ಪದೆ ಭಾರತೀಯ ಜನತಾ ಪಕ್ಷದ ಚಿನ್ಹೆ ಕಮಲದ ಗುರುತಿಗೆ ಮತ ಚಲಾಯಿಸುವ ಮೂಲಕ ನನ್ನನ್ನು ಅತಿ ಹೆಚ್ಚಿನ ಮತಗಳಿಂದ ಗೆಲ್ಲಿಸಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳ ಮಾಡಲಿಕ್ಕೆ ಅನುವು ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ನರೇಂದ್ರಬಾಬು, ಬಿಬಿಎಂಪಿ ಮಾಜಿ ಸದಸ್ಯ ಎಂ ಮಹದೇವ್, ವಾರ್ಡ್ ಅಧ್ಯಕ್ಷ ಡಾ. ನಾಗೇಂದ್ರ, ಸ್ಥಳೀಯ ಮುಖಂಡರಾದ ಮಲ್ಲಪ್ಪ, ಉಮಾಪತಿ ನಾಯ್ಡು, ಸಾಯಿ ರೆಡ್ಡಿ, ಪುಟ್ಟಸ್ವಾಮಿ, ರಾಘವೇಂದ್ರ, ಸುರೇಶ್ ಸೇರಿ ಆರ್​ಎಂಸಿ ಯಾರ್ಡ್​ನ ಹಲವು ಪ್ರಮುಖರು ಉಪಸ್ಥಿತರಿದ್ದರು.
ಮಹಾಲಕ್ಷ್ಮಿ ಲೇಔಟ್​ ಅಭಿವೃದ್ಧಿಯೇ ನನ್ನ ಧ್ಯೇಯ: ಸಚಿವ ಕೆ. ಗೋಪಾಲಯ್ಯ ಹೇಳಿಕೆ

ಬೆಂ. ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಕೃಷ್ಣಪ್ಪ ಮೆರವಣಿಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 9 =
Remember me
