ಚಿಕ್ಕಬಳ್ಳಾಪುರ: ಉಮೇದುವಾರಿಕೆ ಜತೆಗಿನ ಅಫಿಡವಿಟ್​ನಂತೆ ಸಚಿವ ಡಾ.ಕೆ.ಸುಧಾಕರ್​ಗಿಂತಲೂ ಅವರ ಪತ್ನಿಯೇ ಶ್ರೀಮಂತೆ!
ಸಚಿವರು 2.79 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 2.65 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದು, 1.60 ಕೋಟಿ ರೂ. ಸಾಲ ತೋರಿಸಿದ್ದಾರೆ. ಪತ್ನಿ ಡಾ.ಜಿ.ಎ. ಪ್ರೀತಿ 6.59 ಕೋಟಿ ರೂ.ಮೌಲ್ಯದ ಚರಾಸ್ತಿ, 16.10 ಕೋಟಿ ರೂ.ಮೌಲ್ಯದ ಸ್ಥಿರಾಸ್ತಿ, ಜತೆಗೆ 19.08 ಕೋಟಿ ರೂ. ಸಾಲ ಹೊಂದಿದ್ದಾರೆ. ಇಬ್ಬರ ಆದಾಯ ಪ್ರಮಾಣವು 5 ವರ್ಷದಲ್ಲಿ ಏರಿಕೆಯಾಗಿದೆ.
ಇದನ್ನೂ ಓದಿ:ಪಕ್ಷೇತರ ನಿಲ್ಲಿ, ಇಲ್ಲವೇ ನಮಗೊಂದಿಷ್ಟು ವಿಷ ಕೊಡಿ! ಮಾಡಾಳು ಮಲ್ಲಿಕಾರ್ಜುನ್‌ಗೆ ಕಾರ್ಯಕರ್ತರಿಂದ ಒತ್ತಡ
2017-18 ನೇ ಸಾಲಿನಲ್ಲಿ ಸಚಿವರ ಆದಾಯ 14.37 ಲಕ್ಷ ರೂ.ಇತ್ತು. 2021-22ನೇ ಸಾಲಿನಲ್ಲಿ 33.47 ಲಕ್ಷ ರೂ., ಪ್ರೀತಿ ಅವರು 2017-18ನೇ ಸಾಲಿನಲ್ಲಿ 32.79 ಲಕ್ಷ ರೂ., 2021-22 ನೇ ಸಾಲಿನಲ್ಲಿ 61.91 ಲಕ್ಷ ರೂ.ಆದಾಯ ತೋರಿಸಿದ್ದಾರೆ. ಸಚಿವರು 160 ಗ್ರಾಂ ಬಂಗಾರ ಮತ್ತು 9 ಕೆ.ಜಿ.ಬೆಳ್ಳಿ, ಪ್ರೀತಿ 1 ಕೆ.ಜಿ.ಚಿನ್ನ, 4 ವಜ್ರ ಹರಳು, 21 ಕೆ. ಜಿ.ಬೆಳ್ಳಿ ಹೊಂದಿದ್ದಾರೆ. ಸಚಿವರು ಪತ್ನಿಯಿಂದ ಸಾಲ ಪಡೆದಿದ್ದಾರೆ.
ಮಲ್ಲಿಕಾರ್ಜುನ್ 152 ಕೋಟಿ ರೂ. ಒಡೆಯ!
ದಾವಣಗೆರೆ: ದಾವಣಗೆರೆ ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಎಸ್.ಮಲ್ಲಿಕಾರ್ಜುನ್ ಆಸ್ತಿ ಮೌಲ್ಯ 152.70 ಕೋಟಿ ರೂ! ನಾಮಪತ್ರದ ಜತೆಗೆ ಮಲ್ಲಿಕಾರ್ಜುನ್ ನೀಡಿರುವ ಅಫಿಡೆವಿಟ್​ನಲ್ಲಿ ಈ ಮಾಹಿತಿ ನೀಡಿದ್ದಾರೆ. ಮಲ್ಲಿಕಾರ್ಜುನ್ ಬ್ಯಾಂಕ್​ಗಳಲ್ಲಿ 1.56 ಕೋಟಿ ರೂ. ಠೇವಣಿ ಹೊಂದಿದ್ದು, ಷೇರ್, ಡಿಬೆಂಚರ್ ಇತ್ಯಾದಿಗಳಲ್ಲಿ 54.40 ಕೋಟಿ ರೂ. ಹೂಡಿದ್ದಾರೆ. ವಿಮಾ ಪಾಲಿಸಿ, ಎನ್​ಎಸ್​ಎಸ್ ಇತ್ಯಾದಿಗಳಲ್ಲಿ 4.15 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. 23.60 ಕೋಟಿ ರೂ. ಸಾಲವಿದೆ. 226 ಎಕರೆ ಕೃಷಿ ಭೂಮಿ, 53.02 ಕೋಟಿ ರೂ. ಮೌಲ್ಯದ ಕೃಷಿಯೇತರ ಭೂಮಿಯಿದೆ. 97.50 ಲಕ್ಷ ರೂ. ಮೌಲ್ಯದ ವಾಣಿಜ್ಯ ಕಟ್ಟಡಗಳು, 9.20 ಕೋಟಿ ರೂ. ಮೌಲ್ಯದ ವಸತಿ ಕಟ್ಟಡಗಳಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
