ಶಿವಮೊಗ್ಗ:ಸಿಕ್ಕ ಅವಕಾಶ ಸದ್ಬಳಕೆ ಮಾಡಿಕೊಳ್ಳದೆ ಈಗ ಮತ್ತೊಮ್ಮೆ ಸಿಎಂ ಆಗುತ್ತೇನೆ ಎನ್ನುತ್ತಿದ್ದಾರೆ. ಆದರೆ ಹಣೆಯಲ್ಲಿ ಬರೆದಿರಬೇಕಲ್ಲ… ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿಗೆ ಸಚಿವ ಕೆ.ಸಿ.ನಾರಾಯಣ ಗೌಡ ಲೇವಡಿ ಮಾಡಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣ ಗೌಡ, ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದರು. ಒಂದು ಬಾರಿ ಅವಧಿ ಪೂರ್ಣಗೊಳಿಸುವ ಅವಕಾಶವಿತ್ತು. ಆದರೆ ಅದನ್ನು ಅವರು ಸದುಪಯೋಗ ಮಾಡಿಕೊಳ್ಳಲಿಲ್ಲ. ಈಗ ಮತ್ತೊಮ್ಮೆ ಸಿಎಂ ಆಗುತ್ತೇನೆ ಎನ್ನುತ್ತಿದ್ದಾರೆ. ಸಿಎಂ ಆಗಬೇಕೆಂದು ಎಲ್ಲರಿಗೂ ಆಸೆಯಿರುತ್ತದೆ. ಆದರೆ ಹಣೆಯಲ್ಲಿ ಬರೆದಿರಬೇಕಲ್ಲ. ಅವರ ಬಗ್ಗೆ ನಾನು ಹೆಚ್ಚು ಟೀಕೆ ಮಾಡುವುದಿಲ್ಲ. ಎಂದು ಟಾಂಗ್​ ನೀಡಿದರು. ಅವರು ನಡೆಸಲಿರುವ ಪಂಚರತ್ನ ಯಾತ್ರೆ ಬಗ್ಗೆಯೂ ನಮಗೆ ಚಿಂತೆಯಿಲ್ಲ ಎಂದರು
ನನಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ನೀಡಿರುವ ಬಗ್ಗೆ ಯಾವುದೇ ಬೇಸರವಿಲ್ಲ. ಅಸಹನೆಯೂ ಇಲ್ಲ. ಅಗತ್ಯವಿದ್ದಾಗ ಇಲ್ಲಿಗೆ ಬರುತ್ತೇನೆ. ಅಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸುತ್ತೇನೆ. ಜಿಲ್ಲೆಗೆ ಅಗತ್ಯವಿರುವ ಕೆಲಸಗಳನ್ನು ಸರ್ಕಾರದ ಮಟ್ಟದಲ್ಲೂ ಗಮನಿಸುತ್ತೇನೆ. ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಬಗ್ಗೆ ನಾನು ಬೇಸರ ವ್ಯಕ್ತಪಡಿಸಿದ್ದೇನೆ ಎಂಬ ಸುದ್ದಿ ಸತ್ಯಕ್ಕೆ ದೂರ ಎಂದು ಕನಾರಾಯಣ ಗೌಡ ಹೇಳಿದರು.
ಸರ್ಕಾರಿ ಮಹಿಳಾ ನಿಲಯದ ಹುಡುಗಿಯ ಕೈಹಿಡಿದ ದಾವಣಗೆರೆ ಯುವಕ! ಶಾಸ್ತ್ರೋಕ್ತವಾಗಿ ಮದ್ವೆ ನಡೆಸಿಕೊಟ್ಟ ಅಧಿಕಾರಿಗಳು- ಶಾಸಕರು

ಇನ್​ಸ್ಪೆಕ್ಟರ್ ನಂದೀಶ್ ಸತ್ತದ್ದು ಬರೀ ಹೃದಯಾಘಾತದಿಂದಲ್ಲ… ಎನ್ನುತ್ತಲೇ ಸರ್ಕಾರದ ವಿರುದ್ಧ ಸಿಡಿದೆದ್ದ ಎಚ್​ಡಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two − 1 =
Remember me
