ಬಾಗಲಕೋಟೆ:ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಲೈಂಗಿಕ ದೌರ್ಜನ್ಯದ ಪ್ರಕರಣ ರಾಷ್ಟ್ರವ್ಯಾಪಿ ಸದ್ದು ಮಾಡುತ್ತಿದ್ದಂತೆ ಇದೀಗ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಸಿಡಿ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಾತನಾಡಿ, ಹರಿದಾಡುತ್ತಿರುವ ವದಂತಿಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:ಒಂದು ಪ್ಲೇಟ್ ಪಾನಿಪುರಿಗೆ 333 ರೂ.; ಎಲ್ಲಿ ಅಂತ ಮೊದಲೇ ಹೇಳಿ ನಾನು ಆ ಅಂಗಡಿಗೆ ಹೋಗುವುದೇ ಇಲ್ಲ ಎಂದ್ರು ನೆಟ್ಟಿಗರು
ಇಂದು ಬಾಗಲಕೋಟೆಯಲ್ಲಿ ಮಾತನಾಡಿದ ಸಹಕಾರ ಸಚಿವ ಕೆ.ಎನ್. ರಾಜಣ್ಣ, ಸ್ಟುಡಿಯೋಗೆ ಬರ್ತೆನೆ, ಎಲ್ಲ ವಿಡಿಯೋ ಕಾಪಿಗಳನ್ನೂ ತಗೊಂಡು ಬಂದು ಮಾತಾಡ್ತೇನೆ ಎಂದರು. ಶಾಸಕ ಇಕ್ಬಾಲ್ ಹುಸೇನ್, ಡಿಸಿಎಂ ಡಿಕೆಶಿ ಆಪ್ತ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಹಾಗಾದ್ರೆ ನಾನು ಡಿಕೆಶಿ ಅಪ್ತನೇ. ನಂದೂ ಒಂದು ಸಿಡಿ ಇರಬೇಕು ಬನ್ನಿ, ಎಲ್ಲಾ ಒಟ್ಟಿಗೆ ನೋಡೋಣ” ಎಂದು ಹಾಸ್ಯಸ್ಪದವಾಗಿ ಹೇಳಿದರು.
“ರಾಮನಗರ ಶಾಸಕ ಪಾಪ ಸಂಭಾವಿತ ವ್ಯಕ್ತಿ. ಮಕ್ಕಳ ಸಮಾನರಾದ ಹೆಣ್ಣುಮಕ್ಕಳ ಜೊತೆ ನಾವು ಆತ್ಮೀಯತೆಯಿಂದ ಮಾತನಾಡ್ತೀವಿ, ಅದಕ್ಕೆ ಸಂಬಂಧ ಕಟ್ಟಿಬಿಟ್ಟರೆ ಹೇಗೆ? ಈ ರಾಮನಗರ ಶಾಸಕ ಅವರ ಆಪ್ತ ಸ್ನೇಹಿತರೊಂದಿಗೆ ಸಲಿಗೆಯಿಂದ ಮಾತಾಡಿದ್ದಾರೆ ಅಂತಾ ನೀವು ಹೇಳ್ತಿದ್ದೀರಾ, ಆದರೆ ಅದನ್ನು ನಾನು ನೋಡಿಲ್ಲ, ಕೇಳಿಲ್ಲ. ನಾನು ಹೇಳೋದು ಏನಂದ್ರೆ, ಯಾರೇ ಆಗಲಿ ನಾವು ನೋಡುವ ದೃಷ್ಟಿಕೋನದ ಮೇಲೆ ಹೋಗುತ್ತದೆ” ಎಂದರು.
ಇದನ್ನೂ ಓದಿ:ನಿಮಗೆ ಸ್ವಲ್ಪವಾದರೂ ಮಾನವೀಯತೆ ಇದೆಯೇ? ಸಿಎಂ ವಿರುದ್ಧ ಆರ್​. ಅಶೋಕ ವಾಗ್ದಾಳಿ
“ಚಿಕ್ಕ ಹೆಣ್ಣುಮಕ್ಕಳು ಬಂದಾಗ ಆಶೀರ್ವಾದ ಮಾಡೋಕೆ ತಲೆ ಮುಟ್ಟಿದ್ರೆ, ಅದಕ್ಕೆ ರಾಜಣ್ಣ ಹೆಣ್ಣುಮಕ್ಕಳನ್ನೇ ಮುಟ್ಟಿದ್ದಾನೆ ಅಂದ್ರೆ ಏನು ಹೇಳೋದು?” ಎಂದರು. ಇನ್ನು ಪ್ರಜ್ವಲ್ ರೇವಣ್ಣ ಮಾದರಿಯ ಸಿಡಿ ಇದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನೋಡಿ ಅನಾಗರಿಕ ರೀತಿಯ ಕ್ಲಿಪಿಂಗ್ಸ್​ಗಳು ಅವು. ಅದನ್ನು ತಗೊಂಡು ಹೋಗಿ, ಪಾಪ ರಾಮನಗರ ಶಾಸಕನಿಗೆ ಯಾಕೆ ಹೋಲಿಸ್ತೀರಿ” ಎಂದು ಹೇಳಿದರು.
ಇಬ್ಬರ ಜೀವನದಲ್ಲಿ ಮಧ್ಯಪ್ರವೇಶಿಸುವ ಹಕ್ಕು ಯಾವನಿಗೂ ಇಲ್ಲ: ಸಿಡಿದೆದ್ದ ಗೌತಮ್​ ಗಂಭೀರ್

ಟೀಂ ಇಂಡಿಯಾದಲ್ಲಿ ಧೋನಿ ಸ್ಥಾನವನ್ನು ಈತ ತುಂಬಲಿದ್ದಾನೆ: ಯುವ ಸ್ಟಾರ್​​ ಆಟಗಾರನ ಮೇಲೆ ಸಿದ್ದು ಭರವಸೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 14 =
Remember me
