ಬಳ್ಳಾರಿ:ಗ್ಯಾರಂಟಿ ವಿಚಾರದಲ್ಲಿ ಸಚಿವ ಸಂಪುಟದ ಸದಸ್ಯರ ಭಿನ್ನಾಭಿಪ್ರಾಯ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಬಳ್ಳಾರಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡ, ಅವರವರ ಅಭಿಪ್ರಾಯ ಹೇಳುವುದಕ್ಕೆ ಎಲ್ಲರೂ ಸ್ವತಂತ್ರರು. ಹೇಳೋದು ತಪ್ಪಾ? ಇದ್ಯಾವುದು ಸಚಿವ ಸಂಪುಟದ ನಿರ್ಧಾರವಲ್ಲ. ಅಭಿಪ್ರಾಯ ಹೇಳಿಕೊಳ್ಳುವದರಲ್ಲಿ ಯಾವುದೇ ತಪ್ಪಿಲ್ಲ. ಸಚಿವ ಸಂಪುಟದಲ್ಲಿ ನಿರ್ಧಾರವಾದರೆ ಮಾತ್ರ ಪರಿಷ್ಕರಣೆಯ ಬಗ್ಗೆ ಯೋಚನೆ ಎಂದರು.
ಇದನ್ನೂ ಓದಿ:ಮೃತ ವೈದ್ಯೆ ಡೈರಿಯಲ್ಲಿತ್ತು ಅದೊಂದು ಆಸೆ! ಕಡೆಯ ಪುಟದಲ್ಲಿ ಮಗಳು ಬರೆದಿದ್ದನ್ನು ಓದಿದ ತಂದೆ ಕಣ್ಣೀರು
ಇನ್ನು ಗ್ಯಾರಂಟಿ ಯೋಜನೆ ಪರ ಬ್ಯಾಟ್ ಬೀಸಿದ ಸಚಿವರು, “ನನ್ನ ಅಭಿಪ್ರಾಯ ಹೇಳುವ ಸ್ಥಳದಲ್ಲಿ ಹೇಳ್ತೇನೆ. ಬಜೆಟ್ ಗಾತ್ರ ಹೆಚ್ಚು ಮಾಡಿದ್ದೇವೆ. ಬಜೆಟ್ ಕಡಿತ ಮಾಡಿ ಗ್ಯಾರಂಟಿಯನ್ನು ಎಂದಿಗೂ ಕೊಟ್ಡಿಲ್ಲ. ಗ್ಯಾರಂಟಿ ಯೋಜನೆ ಎಲ್ಲರಿಗೂ ಸಹಾಯಕವಾಗ್ತಿದೆ. ರಾಜ್ಯದ ಅಭಿವೃದ್ಧಿಗೆ ಹಣದ ಅಗತ್ಯವಿದೆ. ಶಕ್ತಿ ಯೋಜನೆಯಿಂದ ಕೋಟ್ಯಾಂತರ ಮಹಿಳೆಯರು ಲಾಭ ಪಡೆದಿದ್ದಾರೆ. ಎರಡು ಸಾವಿರ ಹಣ ಮನೆ ಖರ್ಚನ್ನು ತೂಗುತ್ತಿದೆ. ಗ್ಯಾರಂಟಿಯಿಂದ ಸರ್ಕಾರದ ಯಾವ ಯೋಜನೆಗೆ ಹಿನ್ನಡೆಯಾಗಿಲ್ಲ” ಎಂದು ಹೇಳಿದರು.
“ಕೇಂದ್ರ ಸರ್ಕಾರದಿಂದ ಬರುವ ಅನುದಾನ ಕಡಿತ ಹಿನ್ನಲೆ ರಾಜ್ಯಕ್ಕೆ ಸಾಕಷ್ಟು ತೊಂದರೆಯಾಗ್ತಿದೆ. ಹಣಕಾಸು ಆಯೋಗದವರು ಶಿಫಾರಸ್ಸು ಮಾಡಿದರು ಕೇಂದ್ರ ಸರ್ಕಾರ ಹಣ ನೀಡ್ತಿಲ್ಲ. ದೇಶದಲ್ಲಿ ಅತಿ ಹೆಚ್ಚು ತೆರಿಗೆ ಕಟ್ಟುವ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿ ಕರ್ನಾಟಕವಿದೆ. ನಮ್ಮ ತೆರಿಗೆಯಲ್ಲಿ ನಮ್ಮ ಪಾಲು ಬರುತ್ತಿಲ್ಲ. ರಾಜ್ಯಕ್ಕೆ ತೆರಿಗೆ ವಿಚಾರದಲ್ಲಿಯೂ ಅನ್ಯಾಯವಾಗ್ತಿದೆ. ಮಧ್ಯ ಕರ್ನಾಟಕ್ಕೆ ಅನುಕೂಲವಾಗುವ ಭದ್ರ ಮೇಲ್ದಂಡೆ ಯೋಜನೆಗೆ 5300 ರೂ. ಕೋಟಿಯಲ್ಲಿ ಒಂದು ರೂಪಾಯಿ ಕೊಟ್ಟಿಲ್ಲ. ಮೇಕೇದಾಟು ಯೋಜನೆಗೆ ಇಂದಿಗೂ ಅನುದಾನ ನೀಡಿಲ್ಲ” ಎಂದು ದೂರಿದರು.
ಇದನ್ನೂ ಓದಿ:ಕೋಲಾರದಲ್ಲಿ ಸಂಭ್ರಮ ಸಡಗರದಿಂದ ಸ್ವಾತಂತ್ರ‍್ಯ ದಿನಾಚರಣೆ/ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ/ಒಳಚರಂಡಿ ಜಾಲ, ಗೃಹ ಸಂಪರ್ಕ ಕ್ಕಾಗಿ ಕೋಲಾರ ನಗರಕ್ಕೆ ೬೦ ಕೋಟಿಗಳ ಅನುದಾನ.
“ಪ್ರಧಾನಿ, ಗೃಹ ಸಚಿವರಿಗೆ ಹಲವು ಭಾರಿ ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ನೀಡುವಂತೆ ಮನವಿ ಮಾಡಿದರು ಪ್ರಯೋಜನವಾಗಿಲ್ಲ. ಬರ ಪರಿಹಾರ ವಿಷಯ ಮಲತಾಯಿ ಧೋರಣೆ ತೋರುತ್ತಿದ್ದಾರೆ” ಎಂದು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
1 ಗ್ಲಾಸ್​ ಜ್ಯೂಸ್​… ಒಲಿಂಪಿಕ್ ಫೈನಲ್​ ಹಿಂದಿನ ರಾತ್ರಿ ನಡೆದಿದ್ದೇನು? ಅಚ್ಚರಿ ಮೂಡಿಸುತ್ತೆ ಈ ವರದಿ

ಮೃತ ವೈದ್ಯೆ ಡೈರಿಯಲ್ಲಿತ್ತು ಅದೊಂದು ಆಸೆ! ಕಡೆಯ ಪುಟದಲ್ಲಿ ಮಗಳು ಬರೆದಿದ್ದನ್ನು ಓದಿದ ತಂದೆ ಕಣ್ಣೀರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + nine =
Remember me
