ತೆಲಂಗಾಣ:ಚುನಾವಣೆ ಸಂದರ್ಭದಲ್ಲಿ ಏನೋ ಮಾಡಲು ಹೋಗಿ ಏನೋ ಮಾಡಿದೆ ಎಂಬಂಥ ಪ್ರಕರಣಗಳು ಆಗುತ್ತಿರುತ್ತವೆ. ಅದರಲ್ಲೂ ಸಣ್ಣ ಎಡವಟ್ಟು ಅನಾಹುತಕ್ಕೆ ಎಡೆಮಾಡಿಕೊಡುತ್ತದೆ. ಇಂಥದ್ದೇ ಒಂದು ಪ್ರಕರಣ ಇಂದು ತೆಲಂಗಾಣದಲ್ಲಿ ನಡೆದಿದೆ.
ಅದರಲ್ಲೂ ಇಲ್ಲೊಂದು ಕಡೆ ಸಚಿವ, ಸಂಸದ ಹಾಗೂ ಶಾಸಕ ಸೇರಿದಂತೆ ಎಲ್ಲರೂ ಕ್ಯಾಂಪೇನ್ ವಾಹನದ ಮೇಲಿನಿಂದ ಕೆಳಕ್ಕೆ ಮುಗ್ಗರಿಸಿಬಿದ್ದಿದ್ದು, ಆ ಕುರಿತ ವಿಡಿಯೋ ವೈರಲ್ ಕೂಡ ಆಗಿದೆ. ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ಈ ಅವಘಡ ಸಂಭವಿಸಿದೆ.
ಇದನ್ನೂ ಓದಿ:ದೀಪಾವಳಿ, ಪಟಾಕಿ ಸಂಭ್ರಮ: ಕಣ್ಣುಗಳ ಬಗ್ಗೆ ಏನೇನು ಎಚ್ಚರಿಕೆ ವಹಿಸಬೇಕು?
ತೆಲಂಗಾಣದ ಅರ್ಮೋರ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ, ಶಾಸಕ ಜೀವನ್ ರೆಡ್ಡಿ ಅವರು ನಾಮಪತ್ರ ಸಲ್ಲಿಕೆ ಮಾಡಲು ಕ್ಯಾಂಪೇನ್ ವಾಹನದಲ್ಲಿ ತೆರಳುವಾಗ ಈ ಅವಘಡ ಸಂಭವಿಸಿದೆ. ತೆಲಂಗಾಣ ಸಚಿವ ಕೆ.ಟಿ.ರಾಮರಾವ್, ರಾಜ್ಯಸಭಾ ಸದಸ್ಯ ಸುರೇಶ್ ರೆಡ್ಡಿ, ಶಾಸಕ-ಅಭ್ಯರ್ಥಿ ಜೀವನ್ ರೆಡ್ಡಿ ಮುಂತಾದವರು ತೆರೆದ ವಾಹನದಲ್ಲಿ ಹೋಗುತ್ತಿರುವಾಗ ಒಮ್ಮೆಲೇ ಬ್ರೇಕ್ ಹಾಕಿದ್ದರಿಂದ ಈ ಅನಾಹುತವಾಗಿದೆ.
ಬ್ರೇಕ್ ಹಾಕಿದ್ದರಿಂದ ವಾಹನ ಒಮ್ಮೆ ಮುಂದಕ್ಕೆ ಮುಗ್ಗರಿಸಿದ್ದರಿಂದ ಮೇಲಿದ್ದ ಇವರೆಲ್ಲ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ರಸ್ತೆ ಮೇಲೆ ಬಿದ್ದ ಇವರಿಗೆಲ್ಲ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಥಮಿಕಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
VIDEO | Telangana minister KT Rama Rao fell down from the campaign vehicle in Armoor in Nizamabad district during MLA Jeevan Reddy's nomination rally earlier today.
(Source: Third Party)pic.twitter.com/GXCfS5PYY9
— Press Trust of India (@PTI_News)November 9, 2023

ರಾಷ್ಟ್ರೀಯ ಹೆದ್ದಾರಿಯಲ್ಲೇ ಸ್ಟೂಲ್ ಇಟ್ಟು ಕುಳಿತು ಬಸ್​ಗೆ ತಡೆ; ಸಿನಿಮೀಯ ರೀತಿಯಲ್ಲಿ ಸ್ಥಳೀಯ ಪ್ರಯಾಣಿಕರಿಗೆ ನೆರವಾದ ಉದ್ಯಮಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − two =
Remember me
