ಬೆಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಗೃಹಲಕ್ಷ್ಮಿ ಯೋಜನೆ ಅರ್ಜಿ ನಮೂನೆ ಅಸಲಿಯಾಗಿದ್ದು, ಅರ್ಜಿಯಲ್ಲಿರುವ ಒಂದೆರಡು ಅಂಶಗಳನ್ನು ಮತ್ತು ಡಿಸೈನ್​​​ನ್ನು ಸ್ವಲ್ಪ ಬದಲಿಸಲಾಗುವುದು ಎಂದು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಗೃಹಲಕ್ಷ್ಮಿ ಅರ್ಜಿ ನಮೂನೆ ಅಸಲಿ ನಮೂನೆಯಾಗಿದೆ, ಅದು ನಕಲಿ ಅಲ್ಲ. ಅರ್ಜಿಯಲ್ಲಿರುವ ಒಂದೆರಡು ಅಂಶಗಳನ್ನು ಬದಲಿಸಲಾಗುವುದು, ಜಾತಿ ಕಾಲಂ ತೆಗೆದು ವರ್ಗ ಎಂದು ಹಾಕಲಾಗುವುದು, ಅರ್ಜಿಯ ಡಿಸೈನ್ ಸ್ವಲ್ಪ ಬದಲಾಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ:20 ವರ್ಷಗಳ ನಂತರ ವಿದ್ಯಾರ್ಥಿ ಕಳುಹಿಸಿದ ಸಂದೇಶ ನೋಡಿ ಭಾವುಕರಾದ ಶಿಕ್ಷಕರು.. ಸಂದೇಶದಲ್ಲಿ ಏನಿದೆ?
ಗೃಹಲಕ್ಷ್ಮೀ ಯೋಜನೆಗೆ ಮಗ ತೆರಿಗೆ ಕಟ್ಟುವುದು ಅನ್ವಯ ಆಗಲ್ಲ. ಫಲಾನುಭವಿಯ ಗಂಡ ತೆರಿಗೆ ಕಟ್ಟಿದರೆ ಪತ್ನಿಗೆ ಗೃಹಲಕ್ಷ್ಮೀ ಯೋಜನೆ ಸಿಗುವುದಿಲ್ಲ. 90% ಬಿಪಿಎಲ್ ಕಾರ್ಡ್​​​ನಲ್ಲಿ ಮಹಿಳೆಯರೇ ಪ್ರಮುಖರಾಗಿದ್ದಾರೆ, ಯಜಮಾನಿ ಎಂದೇ ನಮೂದಾಗಿದೆ. ವೃದ್ದಾಶ್ರಮದಲ್ಲಿರುವ ಮಹಿಳೆಯರ ಹೆಸರಿನಲ್ಲಿ ಬಿಪಿಎಲ್ ಕಾರ್ಡ್ ಇದ್ದರೆ ಅವರಿಗೂ ಯೋಜನೆ ಸಿಗಲಿದೆ ಎಂದು ಹೆಬ್ಬಾಳಕರ್ ಹೇಳಿದರು.
ಮತ್ತೇನಾದರೂ ಮಾರ್ಪಾಡುಗಳು ಅಗತ್ಯವೆನಿಸಿದರೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಸಾಧ್ಯವಾದಷ್ಟು ಹೆಚ್ಚು ಜನರಿಗೆ ಯೋಜನೆಯ ಪ್ರಯೋಜನ ಸಿಗಬೇಕೆನ್ನುವುದು ನಮ್ಮ ಉದ್ದೇಶ ಎಂದು ಅವರು ಹೇಳಿದರು.
ಕಲ್ಲಿದ್ದಲು ಗಣಿ ಕುಸಿತ; 3 ಮೃತದೇಹ ಪತ್ತೆ, ಹಲವರು ಸಿಲುಕಿರುವ ಶಂಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + one =
Remember me
