ಬೆಂಗಳೂರು:ಪ್ರತಿ ಕ್ಷೇತ್ರದಲ್ಲೂ ಸಾಧನೆ ಮೂಲಕ ಸಾಮರ್ಥ್ಯ ನಿರೂಪಿಸುತ್ತಿರುವ ಸ್ತ್ರೀಯರು ನಿಸ್ವಾರ್ಥದಿಂದ ಸಮಾಜದ ಒಳಿತಿಗಾಗಿ ದುಡಿಯುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ತಿಳಿಸಿದರು,
ಕಬ್ಬನ್​ಪಾರ್ಕ್​ನ ಜವಾಹರ ಬಾಲ ಭವನದಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸ್ತ್ರೀಯರ ಸ್ಥಾನಮಾನ ಬದಲಾಗುತ್ತಿದೆ. ಆಕೆ ಯಾವುದಾದರೊಂದು ಕ್ಷೇತ್ರದಲ್ಲಿ ಇಲ್ಲ ಎಂದರೆ, ಆ ಕ್ಷೇತ್ರ ಇನ್ನೂ ಅಭಿವೃದ್ಧಿ ಹೊಂದಿಲ್ಲ ಎಂದರ್ಥ. ಪ್ರತಿಕ್ಷಣದ ಹೋರಾಟದ ನಡುವೆಯೇ ಪರಿಶ್ರಮದಿಂದ ದುಡಿಯುವ ಮೂಲಕ ಸಾರ್ಥಕ ಬದುಕು ಕಟ್ಟಿಕೊಳ್ಳುತ್ತಿದ್ದು, ಶಿಕ್ಷಣದ ಕಾರಣದಿಂದ ಉನ್ನತ ಸ್ಥಾನಕ್ಕೇರಲು ಸಾಧ್ಯವಾಗುತ್ತಿದೆ ಎಂದರು.
ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿರುವ 6 ಸಂಸ್ಥೆಗಳಿಗೆ, 20 ಸಾಧಕಿಯರಿಗೆ ಕಿತ್ತೂರು ರಾಣಿ ಚನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಾಗಲಕೋಟೆಯ ವಚನ ವೈಭವ ಮಹಿಳಾ ಜಾನಪದ ಸಾಂಸತಿಕ ಕಲಾ ಸಂಘ, ಧಾರವಾಡದ ಕಲ್ಕಿ ಎಜುಕೇಷನಲ್​ ಆ್ಯಂಡ್​ ಡೆವಲಪ್​ಮೆಂಟ್​ ಸೊಸೈಟಿ, ಬೀದರ್​ನ ಮಂಗಲಾ ಮಹಿಳಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ದಕ್ಷಿಣ ಕನ್ನಡದ ಮಹಿಳಾ ಮಂಡಲ, ಶಿವಮೊಗ್ಗದ ದಿ ಶಿವಮೊಗ್ಗ ಮಲ್ಟಿ ಪರ್ಪಸ್​ ಸೋಶಿಯಲ್​ ಸರ್ವೀಸ್​ ಸೊಸೈಟಿ, ಧಾರವಾಡದ ಹ್ಯಾಪಿ ಹೋಮ್​ ಇಂಡಿಯಾ ಟ್ರಸ್ಟ್​ಗಳು 50 ಸಾವಿರ ರೂ.ನಗದು ಒಳಗೊಂಡ ಪ್ರಶಸ್ತಿಗೆ ಭಾಜನವಾಗಿವೆ.
ಮಹಿಳಾ ಅಭಿವೃದ್ಧಿ:ಬಿ.ಮಂಜುಳಾ ಇಟಗಿ, ಪಿ.ಆಶಾಲತಾ, ದೇವಿ ಸತೀಶ, ದೀಪಾ ಶಿವಕುಮಾರ, ನಾಗವ್ವಾ ಸಿದ್ದಪ್ಪಾ, ಪಿ.ಜಿ.ಅನಿತಾಲಕ್ಷ್ಮಿ, ನಿರ್ಮಾ ಡಿಸೋಜಾ, ಸ್ನೇಹಾ ಜಾಧವ್​, ವೀಣಾ ಬಿರಾದಾರ.ಕಲೆ:ಎಂ.ಶಾರದಾ, ಸರಸ್ವತಿ, ಎಸ್​. ಸಿಂಧು, ವೀಣಾ ಉಮೇಶ್​, ಎಂ.ಸವಿತಾ ಕುಲಕರ್ಣಿ.ಕ್ರೀಡೆ:ರುಮಾನ ಕೌಸರ್​, ಸಾಯೀಶ್ವರಿ ಗಂಗಾರಾಮಶಿಕ್ಷಣ:ಕಾವೇರಿ ಶಿವಶಂಕರಯ್ಯಸಾಹಿತ್ಯ:ಶುಭಾ, ಶಕುಂತಲಾ ಹಿರೇಮಠ, ಡಾ.ವಿ.ವಿ. ಹಿರೇಮಠ. (ಪ್ರಶಸ್ತಿಯು 25 ಸಾವಿರ ರೂ. ನಗದು ಒಳಗೊಂಡಿದೆ)
ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 3 ಸ್ತ್ರೀ ಶಕ್ತಿ ಗುಂಪು, 3 ಸ್ತ್ರೀ&ಶಕ್ತಿ ಒಕ್ಕೂಟ ಹಾಗೂ ವಿಭಾಗೀಯ ಮಟ್ಟದಲ್ಲಿ 4 ಸ್ತ್ರೀ ಶಕ್ತಿ ಗುಂಪುಗಳಿಗೆ ಯಶೋಧರಮ್ಮ ದಾಸಪ್ಪ ಪ್ರಶಸ್ತಿ ನೀಡಲಾಯಿತು. ಇದೇ ಸಂದರ್ಭದಲ್ಲಿ ಮಹಿಳೆಯರ ಆದಾಯೋತ್ಪನ್ನ ಚಟುವಟಿಕೆಗಳ ಸಾಧನೆ ತಿಳಿಸುವ ‘ಅಂತರಾಳ’ ಕಿರುಹೊತ್ತಗೆ ಬಿಡುಗಡೆ ಮಾಡಲಾಯಿತು.
ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ, ಕಾಂಗ್ರೆಸ್​ ಮುಖಂಡ ಉದಯ ಕುಮಾರ್​ ಶೆಟ್ಟಿ, ಇಲಾಖೆಯ ಕಾರ್ಯದರ್ಶಿ ಡಾ.ಜಿ.ಎಸ್​. ಪ್ರಕಾಶ್​, ಬಾಲ ಭವನದ ಕಾರ್ಯದರ್ಶಿ ಬಿ.ಎಚ್​.ನಿಶ್ಚಲ್​, ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಎಚ್​. ಪುಷ್ಪಲತಾ, ಡಾ.ಮೈತ್ರಿ ಮತ್ತಿತರರಿದ್ದರು.
ಮಹಿಳೆ ನಾಲ್ಕು ಗೋಡೆಗಳ ಮಧ್ಯೆ ಇರಬೇಕೆಂಬ ಪರಿಸ್ಥಿತಿ ಈಗಿಲ್ಲ. ಶಿಕ್ಷಣದಿಂದಾಗಿ ಬದಲಾವಣೆ ಸಾಧ್ಯವಾಗಿದೆ. ರಾಜಕೀಯ, ಉದ್ಯಮ, ಸರ್ಕಾರಿ ನೌಕರಿ, ಕಲೆ ಸೇರಿ ವಿವಿಧ ರಂಗಗಳಲ್ಲಿ ತನ್ನದೇ ಛಾಪು ಮೂಡಿಸುತ್ತಿದ್ದಾರೆ.-ಪದ್ಮಾವತಿ, ಮಹಿಳಾ ಅಭಿವೃದ್ಧಿ ನಿಗಮ ಅಧ್ಯಕ್ಷೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
