ವಿಜಯಪುರ:ನಾಲ್ಕು ವರ್ಷದ ಆಡಳಿತಾವಧಿಯಲ್ಲಿ ಜನರ ಬದುಕು ಕಟ್ಟಿಕೊಡುವ ಬದಲಾಗಿ ಹಿಜಾಬ್, ಹಲಾಲ್, ಆಜಾನ್ ಎಂದೆಲ್ಲಾ ಕೋಮು ಸೌಹಾರ್ದತೆ ಕದಡಲು ಯತ್ನಿಸಿದ ಬಿಜೆಪಿಯ ಎಲ್ಲ ಭ್ರಷ್ಟಾಚಾರಗಳನ್ನು ಬಯಲಿಗೆಳೆಯುವುದಾಗಿ ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಸಚಿವ ಎಂ.ಬಿ. ಪಾಟೀಲ ಹೇಳಿದರು.
ರಾಜ್ಯದ ಎಲ್ಲ ಜನ, ಜನಾಂಗ ಹಾಗೂ ಧರ್ಮದ ಜನರನ್ನು ಒಳಗೊಂಡು ಸುಭದ್ರ ಆಡಳಿತ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಶ್ರಮಿಸಲಿದೆ. ಕುವೆಂಪು ಅವರು ಕಂಡ ಸರ್ವಜನಾಂಗದ ಶಾಂತಿಯ ತೋಟ ಮರುಸ್ಥಾಪಿಸಲಾಗುವುದು. ಎಲ್ಲ ಜಾತಿ, ಧರ್ಮದವರನ್ನು ಒಳಗೊಂಡು ಯೋಜನೆ ರೂಪಿಸಲಾಗುವುದು. ದೀನ-ದಲಿತರು ಹಾಗೂ ಶೋಷಿತರ ಪರ ಆಡಳಿತ ನೀಡುವುದಾಗಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಇದನ್ನೂ ಓದಿ:ಒಡಿಶಾ ರೈಲು ದುರಂತದಲ್ಲಿ ಮನುಷ್ಯರ ಕೈವಾಡ ಇದೆಯಾ? ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಿಷ್ಟು…
ಸದ್ಯ ರಾಜ್ಯದಲ್ಲಿ ಹಿಟ್ಲರ್ ಆಡಳಿತ ಜಾರಿಯಲ್ಲಿದೆ ಎಂಬ ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ಸಂಬಂಧಿಸಿದ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲ, ನಾಲ್ಕು ವರ್ಷ ಸೂಲಿಬೆಲೆ ಏನು ಮಾಡಿದ್ದಾರೆಂಬುದು ಗೊತ್ತಿದೆ. ಪಠ್ಯ ಪರಿಷ್ಕರಣೆ ಹೆಸರಲ್ಲಿ ವಿವಾದ ಎಬ್ಬಿಸಿದರು. ಹಿಜಾಬ್, ಹಲಾಲ್, ಆಜಾನ್ ಎಂದೆಲ್ಲಾ ಶಾಂತಿ ಕದಡುವ ಯತ್ನ ಮಾಡಿದರು. ನಮ್ಮ ಸರ್ಕಾರದಲ್ಲಿ ಬಾಲ ಬಿಚ್ಚಿದರೆ ಕಂಬಿ ಎಣಿಸುವುದ ಗ್ಯಾರಂಟಿ ಎಂದರು.
ಬಿಜೆಪಿ ಸರ್ಕಾರದಲ್ಲಾದ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ಮಾಡಲಾಗುವುದು. ಪಿಎಸ್‌ಐ ಅಕ್ರಮ ನೇಮಕ ಪ್ರಕರಣದ ತನಿಖೆ ನಡೆಸಲಾಗುವುದು. ಅಂದಾಜು ಪತ್ರಿಕೆ (ಎಸ್ಟಿಮೇಟ್) ಹೆಚ್ಚಳ ಮಾಡಿ ಕಮೀಷನ್ ಹೊಡೆದಿದ್ದು ಈ ಬಗ್ಗೆಯೂ ತನಿಖೆ ಮಾಡಲಾಗುವುದು. ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಗಳಲ್ಲಾದ ಅಕ್ರಮಗಳನ್ನು ಬಯಲಿಗೆಳೆಯುವುದು ನಿಶ್ಚಿತ ಎಂದರು.
ಇನ್ನು ಬಿಜೆಪಿ ಆಡಳಿತದಲ್ಲಿ ಪಠ್ಯಪುಸ್ತಕದಲ್ಲಿ ತಮ್ಮದೇ ಅಜೆಂಡಾ ಹೇರುವ ಪ್ರಯತ್ನ ನಡೆಯಿತು. ಇಲ್ಲದೇ ಇರುವ ಉರಿಗೌಡ, ನಂಜೇಗೌಡರ ಇತಿಹಾಸ ಸೃಷ್ಠಿಸಲಾಯಿತು. ಇಂಥ ಪಠ್ಯಗಳನ್ನು ಪರಿಷ್ಕರಿಸಲಾಗುವುದು. ಮಹಾತ್ಮ ಗಾಂಧಿ, ಬಸವೇಶ್ವರ, ಜೋತಿಬಾ ಫುಲೆ, ಡಾ.ಅಂಬೇಡ್ಕರ್, ಭಗತ್ ಸಿಂಗ್ ಹೀಗೆ ಮಹಾತ್ಮರ ಬಗ್ಗೆ ಪಠ್ಯದಲ್ಲಿ ಅಳವಡಿಸಬೇಕಿದ್ದು ಆ ನಿಟ್ಟಿನಲ್ಲಿ ಕಾಂಗ್ರೆಸ್ ಶ್ರಮಿಸಲಿದೆ ಎಂದರು.
ಇನ್ನು ಮೀಸಲಾತಿ ಹೆಚ್ಚಳ ವಿಚಾರ ಅವೈಜ್ಞಾನಿಕ. ಕಾಂಗ್ರೆಸ್ ಕೂಡ ಕೇಂದ್ರಕ್ಕೆ ಪತ್ರ ಬರೆಯಲಿದ್ದು ತಮಿಳುನಾಡು ಮಾದರಿಯಲ್ಲಿ ಮೀಸಲಾತಿ ಹೆಚ್ಚಿಸಲು ಪತ್ರದಲ್ಲಿ ತಿಳಿಸಲಾಗುವುದು. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ರಾಜಕೀಯ ಬೆರೆಸಲ್ಲ ಎಂದರು. ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಕುರಿತ ಪಶುಸಂಗೋಪನಾ ಸಚಿವರ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಕೈಗಾರಿಕೆ ಕ್ಷೇತ್ರದಲ್ಲಿ ಕರ್ನಾಟಕ ಇಂದು ರಾಜ್ಯ ನಂ. 1 ಸ್ಥಾನದಲ್ಲಿದೆ. ತಮಿಳುನಾಡು, ಗುಜರಾತ್ ಮುಂತಾದ ರಾಜ್ಯಗಳು ಮೂಲ ಸೌಕರ್ಯದಿಂದ ವಂಚಿತವಾಗಿವೆ. ಆದರೆ ಕರ್ನಾಟಕದಲ್ಲಿ ಬೃಹತ್ ಕೈಗಾರಿಕೆ ಸ್ಥಾಪನೆಗೆ ಪೂರಕ ವಾತಾವರಣ ಇದೆ. ನೈಸರ್ಗಿಕ ವಾತಾವರಣ ಇದೆ. ಹೀಗಾಗಿ ಇನ್ನೂ ಹೆಚ್ಚಿನ ಒತ್ತು ನೀಡಿದರೆ ಕೈಗಾರಿಕೆ ಕ್ಷೇತ್ರ ಪ್ರಗತಿ ಕಾಣಲಿದೆ ಎಂದರು.
ಬೆಂಗಳೂರು ಬಿಟ್ಟು ಪ್ರತಿಯೊಂದು ಜಿಲ್ಲೆಗಳಲ್ಲಿ ಕೈಗಾರಿಕೆಗಳ ಸ್ಥಾಪನೆಯಾಗಬೇಕಾಗಿದೆ. ಆ ಮೂಲಕ ಆ ಭಾಗದ ಅಭಿವೃದ್ಧಿ ಆಗಬೇಕು. ಜನರಿಗ ಉದ್ಯೋಗ ಸಿಗಬೇಕೆಂಬ ನಿಟ್ಟಿನಲ್ಲಿ ಈಗಾಗಲೇ ಸಭೆ ನಡೆಸಿ ಮಾಹಿತಿ ಕಲೆ ಹಾಕಲಾಗಿದೆ. ಸ್ಪಷ್ಟವಾದ ರೂಪುರೇಷೆ ಸಿದ್ದಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಏಕ ಗವಾಕ್ಷಿ ಪದ್ದತಿಯಡಿ ಒಂದೇ ವೇದಿಕೆಯಲ್ಲಿ ಕೈಗಾರಿಕೆ ಯೋಜನೆ ಜಾರಿಗೆ ತರಲು ಸೂಚಿಸಲಾಗಿದೆ. ತೆಲಂಗಾಣ ಮಾದರಿಯಲ್ಲಿ ಏಕಗವಾಕ್ಷಿ ಪದ್ದತಿ ಜಾರಿಗೆ ತರಲು ತಿಳಿಸಲಾಗಿದೆ ಎಂದರು.
ಇದನ್ನೂ ಓದಿ:ಗ್ಯಾರಂಟಿ ಲಾಭದ ಬಗ್ಗೆ ಜನರಲ್ಲಿ ಬಿಸಿಬಿಸಿ ಚರ್ಚೆ: ಉಚಿತ ವಿದ್ಯುತ್ ವಿಚಾರದಲ್ಲಿ ನೂರೆಂಟು ಪ್ರಶ್ನೆ
ಕೈಗಾರಿಕೆ ಸ್ಥಾಪನೆಗೆ ನೀರಿನ ವ್ಯವಸ್ಥೆ ಅಗತ್ಯ. ಉತ್ತರ ಕರ್ನಾಟಕದಲ್ಲಿ ಇದೀಗ ಆ ನೀರಿನ ಸೌಲಭ್ಯವಿದೆ. ಜಿಲ್ಲೆಯ ಪರಿಸರಕ್ಕೆ ಅನುಗುಣವಾಗಿ ಕೈಗಾರಿಕೆ ಸ್ಥಾಪಿಸಬೇಕಿದೆ. ಜಿಲ್ಲೆ ಹಾಗೂ ರಾಜ್ಯ ಸಮಗ್ರ ಅಭಿವೃದ್ಧಿ ಆಗಬೇಕೆಂಬ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಜೂ. 5 ರಂದು ಮೂಲ ಸೌಕರ್ಯ ಇಲಾಖೆ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಇನ್ನಷ್ಟು ಮಾಹಿತಿ ಕಲೆ ಹಾಕಿ ಸಲಹೆ ಸೂಚನೆ ನೀಡಲಾಗುವುದು. ಜನರಿಗೆ ಆರೋಗ್ಯ, ಶಿಕ್ಷಣದ ಜೊತೆಗೆ ಉದ್ಯೋಗ ಕೊಡಬೇಕಿದ್ದು ಆ ನಿಟ್ಟಿನಲ್ಲಿ ಸರ್ಕಾರ ಶ್ರಮಿಸಲಿದೆ ಎಂದರು.
ಕೈಗಾರಿಕೆ ಹಾಗೂ ಶಿಕ್ಷಣ ಇಲಾಖೆ ಜಂಟಿಯಾಗಿ ವಿಶೇಷ ಸಮಿತಿ ರಚಿಸಲಾಗುವುದು. ಭವಿಷ್ಯದ ಕೈಗಾರಿಕೆಗಳನ್ನು ಆಧರಿಸಿ ತರಬೇತಿ ನೀಡಲು ಮತ್ತು ಪೂರಕ ಪಠ್ಯ ಸಿದ್ದಪಡಿಸಲು ಚರ್ಚಿಸಲಾಗುವುದು ಎಂದರು. ದೇಶದ ಎಲ್ಲ ರಾಜ್ಯಗಳಲ್ಲಿರುವ ಉತ್ತಮ ಯೋಜನೆಗಳನ್ನು ಅಧ್ಯಯನ ಮಾಡಿ ಅಳವಡಿಸಿಕೊಳ್ಳಲಾಗುವುದು. ವಿದೇಶದ ಕೈಗಾರಿಕೆಗಳ ಕ್ಷೇತ್ರದ ಉತ್ತಮ ಅಂಶಗಳನ್ನು ಅಳವಡಿಸಿಕೊಂಡು ಇಡೀ ವಿಶ್ವದಲ್ಲಿಯೇ ಕರ್ನಾಟಕ ಪ್ರಗತಿ ಸಾಧಿಸಲು ಶ್ರಮ ವಹಿಸಲಾಗುವುದು ಎಂದರು.
ಒಡಿಶಾ ರೈಲು ದುರಂತ: ತಜ್ಞರ ಸಮಿತಿಯಿಂದ ಸೂಕ್ತ ತನಿಖೆ ಕೋರಿ ಸುಪ್ರೀಂಗೆ ಪಿಐಎಲ್​ ಸಲ್ಲಿಕೆ

ಮಂಡ್ಯದಲ್ಲಿ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ: ಸ್ಥಳದಲ್ಲೇ ನಾಲ್ವರು ದುರಂತ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + nine =
Remember me
