ತುಮಕೂರು:ಜಿಲ್ಲಾ ಕೇಂದ್ರದಲ್ಲಿ ಇಂದು(ಶುಕ್ರವಾರ) ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ಸಚಿವ ಮಾಧುಸ್ವಾಮಿ ಮತ್ತು ಕುಣಿಗಲ್​ ಶಾಸಕ ಡಾ.ರಂಗನಾಥ್ ನಡುವಿನ ವಾಕ್ಸಮರ ಮಿತಿಮೀರಿತ್ತು. ಏರುಧ್ವನಿಯಲ್ಲೇ ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ಇಡೀ ಸಭಾಂಗಣ ಮೂಕಪ್ರೇಕ್ಷಕವಾಗಿತ್ತು.
ಕ್ಷೇತ್ರದ ಬಡ ಜನರಿಗೆ ಮನೆ ಕಟ್ಟಲು ಹಣ ಬಿಡುಗಡೆ ಮಾಡಿ ಎಂದ ಕುಣಿಗಲ್​ ಶಾಸಕ ಡಾ.ರಂಗನಾಥ್​ರನ್ನ ತರಾಟೆಗೆ ತೆಗೆದುಕೊಂಡ ಸಚಿವ ಮಾಧುಸ್ವಾಮಿ, ‘ರಂಗನಾಥ್, ಯುವರ್ ಫ್ರಾಡ್.. ಯುವರ್ ಕಮಿಟೆಡ್ ಫ್ರಾಡ್..’ ಎಂದರು.
ಇದನ್ನೂ ಓದಿರಿಜುಟ್ಟನಹಳ್ಳಿ ಮಾರಮ್ಮನ ಹುಂಡಿ ಹಣ ಕದ್ದ ಪೂಜಾರಿಯನ್ನು ಅಟ್ಟಾಡಿಸಿದ ಬಸವ, ದೇವರ ಹಣ ವಾಪಸ್​!
ರಣಾಂಗಣವಾಯ್ತು ಕೆಡಿಪಿ ಸಭೆ:ಕೆಡಿಪಿ ಸಭೆ ಆರಂಭವಾಗುತ್ತಿದ್ದಂತೆ ‘ಎಸ್ಸಿ-ಎಸ್ಟಿ ಸೇರಿದಂತೆ ಇತರ ವರ್ಗದ ಜನ್ರಿಗೆ ಮನೆ ಕಟ್ಟಲು ಹಣ ಕೊಟ್ಟಿಲ್ಲ. ಬಡವರು ಬೀದಿಗೆ ಬಂದಿದ್ದಾರೆ. ಕರೊನಾ ಸಂಕಷ್ಟ ಕಾಲದಲ್ಲಿ ಸರ್ಕಾರದ ಬಳಿ ಹಣ ಇಲ್ಲ ಎಂದು ಒಪ್ಪಿಕೊಳ್ಳಿ.. ಸುಮ್ಮನೆ ಹಣ ಕೊಟ್ಟಿದ್ದೇವೆ ಎನ್ನಬೇಡಿ’ ಎಂದು ರಂಗನಾಥ್​ ಹೇಳುತ್ತಿದ್ದಂತೆ ಗರಂ ಆದ ಮಾಧುಸ್ವಾಮಿ, ‘ಕುಣಿಗಲ್​ನಲ್ಲಿ 38 ಮನೆಯನ್ನು ಫ್ರಾಡ್​ ಮಾಡ್ತಿದ್ದೀರಿ, ರಂಗನಾಥ್ ಯುವರ್ ಫ್ರಾಡ್.. ಯುವರ್ ಕಮಿಟೆಡ್ ಫ್ರಾಡ್..’ ಎಂದು ನೇರವಾಗಿಯೇ ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಏರುಧ್ವನಿಯಲ್ಲೇ ಪ್ರತಿಕ್ರಿಯಿಸಿದ ಶಾಸಕರು,’ ಯುವರ್​ ಓನ್ಲೀ ಗ್ರೇಟ್​.. ಅಧಿಕಾರಿಗಳಿಗೆ ಹೇಳಿ ಆಕ್ಷನ್​ ತಗೋಳಿ, ನಾವೇನಾದ್ರು ಮೋಸ ಮಾಡಿದ್ರೆ ಪ್ಲೀಸ್​ ಟೇಕ್​ ಆಕ್ಷನ್..’ ಎಂದು ಆಗ್ರಹಿಸಿದರು.
‘ನೀವು ಫ್ರಾಡ್ ಮಾಡಿದ್ರಿಂದಲೇ ರಾಜ್ಯಾದ್ಯಂತ ಎರಡು ತಿಂಗಳು ಹಣ ರಿಲೀಸ್ ಮಾಡೋದು ವಿಳಂಬ ಆಯ್ತು. ನನ್ನತ್ರ ದಾಖಲೆ ಇದೆ. ನೀವು ಮನೆಗಳನ್ನ ಫ್ರಾಡ್​ ಮಾಡ್ತಿದ್ರೂ ಸರ್ಕಾರ ಹೇಗೆ ಹಣ ಕೊಡುತ್ತೆ..?’ ಎಂದು ಮಾಧುಸ್ವಾಮಿ ಜಾಡಿಸಿದರು. ‘ಅಕ್ರಮ ನಡೆದಿದ್ರೆ ಆಕ್ಷನ್​ ತಗೋಳಿ.. ತನಿಖೆ ಮಾಡ್ಸಿ’ ಎಂದು ಶಾಸಕರು ಸವಾಲು ಎಸೆದರು.
https://www.facebook.com/VVani4U/videos/581424072535611/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − seven =
Remember me
