ಬೆಂಗಳೂರು:ಸಂಸದ ಪ್ರತಾಪ್ ಸಿಂಹ ಅವರಿಗೆ ಚೇಲಾಗಿರಿ ಮಾಡಿ ರೂಢಿ ಇರಬೇಕು. ಮತ್ತೊಂದೆಡೆ ಬಿ.ಎಲ್.ಸಂತೋಷ್ ಚೇಳು ಅಂತಾರೆ. ಬಹುಶಃ ಸಂತೋಷ್ ಬುಟ್ಟಿಯಲ್ಲಿ ತುಂಬಾ ಚೇಳುಗಳು ಇದ್ದಿರಬಹುದು. ನಾನು ಸಿದ್ದರಾಮಯ್ಯ ಅವರಿಗಿಂತ ಮೊದಲು ಕಾಂಗ್ರೆಸ್​ಗೆ ಬಂದವನು. ಆರು ಬಾರಿ ಶಾಸಕ, ಒಂದು ಬಾರಿ ಸಂಸದನಾಗಿರುವ ನಾನು ಕಾಂಗ್ರೆಸ್ ‌ಪಕ್ಷದ ಚೇಲಾ ಎಂದು ಸಚಿವ ಎಂ.ಬಿ.ಪಾಟೀಲ್ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದರು.
ಸದಾಶಿವ ನಗರದ ಮನೆಯಲ್ಲಿ ಸುದ್ದಿಗೊಷ್ಠಿ ನಡೆಸಿ ಸಚಿವ ಎಂ.ಬಿ ಪಾಟೀಲ್ ಮಾತನಾಡುತ್ತಾ, ಸಂಸದ ಪ್ರತಾಪ್ ಸಿಂಹ ಹೇಳಿಕೆ ಗಮನಿಸಿದ್ದೇನೆ. ಬಿ.ಎಲ್ ಸಂತೋಷ್ ಅವರನ್ನು ಟೀಕೆ ಮಾಡಿದ್ದೆ. ಆ ಟೀಕೆಯನ್ನು ಬ್ರಾಹ್ಮಣ ಸಮಾಜದತ್ತ ತೆಗೆದುಕೊಂಡು ಹೋಗಿದ್ದರು. ದಿನಾ ಬೆಳಗಾದರೆ ಬ್ರಾಹ್ಮಣರನ್ನು ಬೈಯೋದು ಬೇಡ ಎಂದು ಹೇಳಿದ್ದಾರೆ. ಆದರೆ ಅವರು ಆ ಹೇಳಿಕೆಯನ್ನು ಎಲ್ಲಿ ನೋಡಿದರು ಗೊತ್ತಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ:ಚಿಲ್ಲರೆ ಸಿಗುವ ಖಾತೆ ಸಿಕ್ಕಿದೆಯೆಂದು ಎಂ.ಬಿ.ಪಾಟೀಲ್ ವಿಲವಿಲ ಒದ್ದಾಡುತ್ತಿದ್ದಾರೆ: ಪ್ರತಾಪ್ ಸಿಂಹ ವ್ಯಂಗ್ಯ
ಸಿದ್ದರಾಮಯ್ಯ ಅವರು ನನ್ನ ಹೆಗಲ ಮೇಲೆ ಬಂದೂಕು ಇಟ್ಟು ಶೂಟ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ನನ್ನನ್ನು ಟೀಕಿಸಿದರೆ ಲಿಂಗಾಯತರಿಗೆ ಬೈದಂತೆ ಅಲ್ಲ. ಸಂತೋಷ್ ಅವರನ್ನು ಟೀಕಿಸಿದರೆ ಬ್ರಾಹ್ಮಣ ಸಮುದಾಯವನ್ನು ಬೈದಂತೆ ಅಲ್ಲ. ಪ್ರತಾಪ ಸಿಂಹ ಅವರು ಉದ್ದೇಶ ಏನು? ಎಂದು ಹೇಳುತ್ತಾ ಎಂ.ಬಿ ಪಾಟೀಲ್ ವಾಗ್ದಾಳಿ ನಡೆಸಿದರು.
ಬಿ.ಎಲ್ ಸಂತೋಷ್ ನನ್ನ ಹೇಳಿಕೆ ಬಗ್ಗೆ ಟೀಕೆ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ನಾನು ಪ್ರತಿಕ್ರಿಯೆ ನೀಡಿದ್ದೆ. ಇದೇ ಕಾರಣಕ್ಕೆ ಬ್ರಾಹ್ಮಣರ ವಿರುದ್ಧ ಟೀಕೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಪ್ರತೀ ದಿನ ಟೀಕೆ ಮಾಡುತ್ತಿದ್ದೇವೆ ಎಂದಿದ್ದಾರೆ. ದಿನಂಪ್ರತಿ ಎಲ್ಲಿ ಟೀಕೆ ಮಾಡಿದ್ದೇವೆ ಎಂಬುದನ್ನು ತೋರಿಸಲಿ ಎಂದು ಸವಾಲು ಹಾಕಿದರು.
ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ನನಗೆ ಚಿಲ್ಲರೆ ಖಾತೆ ನನಗೆ ಸಿಕ್ಕಿದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ. ಪ್ರಧಾನಿ ಮೋದಿ ಅವರನ್ನು ಹೋಗಿ ಕೇಳಲಿ, ಚಿಲ್ಲರೆ ಖಾತೆ ಯಾವುದೆಂದು. ಯಾವ ಖಾತೆ ನಿಭಾಯಿಸುತ್ತಿದ್ದೇವೆ ಎನ್ನುವುದು ಮುಖ್ಯವಲ್ಲ. ಸಿಕ್ಕಿದ ಖಾತೆಯಲ್ಲಿ ಏನು ಕೆಲಸ ಮಾಡುತ್ತೇವೆ ಎಂಬುದು ಮುಖ್ಯ ಎಂದರು.
ಸಿದ್ದರಾಮಯ್ಯ ನಮ್ಮ ಪಕ್ಷದ ಹಿರಿಯ ನಾಯಕರು. ಇನ್ನೊಬ್ಬರ ಮೇಲೆ ಬಂದೂಕು ಇಟ್ಟು ಹೊಡೆಯುವಂತದ್ದು ಏನೂ ಇಲ್ಲ. ಹೊಡೆಯುವುದಾದರೆ ನಾನೇ ನೇರವಾಗಿ ಹೊಡೆಯುತ್ತೇನೆ. ನಾವು ಬಿಜಾಪುರದವರು, ನಮಗೆ ಆ ತಾಕತ್ ಇದೆ ಎನ್ನುತ್ತಾ ಪ್ರತಾಪ್ ಸಿಂಹ ವಿರುದ್ಧ ಎಂ.ಬಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ಬಸ್​​ಗಳಲ್ಲಿ ನೂಕುನುಗ್ಗಲಿನಿಂದ ಅನಾಹುತ ಸಂಭವಿಸಿದರೆ ಆರ್​.ಅಶೋಕ್ ಹೊಣೆ: ರಾಜ್ಯ ಕಾಂಗ್ರೆಸ್
ರಾಜ್ಯದಲ್ಲಿ ಅದಾನಿ ಗ್ರೂಪ್ ಹೂಡಿಕೆಗೆ ಮುಕ್ತ ಅವಕಾಶ ನೀಡುವುದಾಗಿ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದನ್ನು ವ್ಯಂಗ್ಯವಾಡಿದ್ದ ಬಿ.ಎಲ್.ಸಂತೋಷ್, ಅವರ ನಾಯಕ ರಾಹುಲ್ ಗಾಂಧಿಯವರ ಸ್ಥಾನವನ್ನು ಎಂ.ಬಿ.ಪಾಟೀಲ್ ಅವರು ತೋರಿಸುತ್ತಿದ್ದಾರೆ. ಇದು ಚೆನ್ನಾಗಿದೆ ಎಂದಿದ್ದರು.
ತಿರುಗೇಟು ನೀಡಿದ್ದ ಎಂ.ಬಿ.ಪಾಟೀಲ್, ಬಿ.ಎಲ್.ಸಂತೋಷ್ ಅವರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ತಮ್ಮ ಕೊಡುಗೆಯೂ ಅಪಾರ. ಅದಕ್ಕೆ ನಾವು ನಿಮಗೆ ಆಭಾರಿ. ನೀವು ಬಿಜೆಪಿಯಲ್ಲಿನ ಅನೇಕ ಲಿಂಗಾಯತ ನಾಯಕರನ್ನು ಮುಗಿಸಿದ್ದೀರಿ ಎಂದು ರಾಜ್ಯದ ಜನತೆ ಮಾತನಾಡುತ್ತಿದ್ದಾರೆ. ಇದೀಗ ಉಳಿದಿರುವ, ಏಕೈಕ ಹಿರಿಯ ನಾಯಕರಾಗಿರುವ ಬಸವರಾಜ ಬೊಮ್ಮಾಯಿ ಅವರನ್ನು ಮುಗಿಸಲು ಅವರ ವಿರುದ್ಧ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಎತ್ತಿ ಕಟ್ಟಿ, ಜತೆಗೆ ನಿಮ್ಮ ಪಟ್ಟಾ ಶಿಷ್ಯ ಪ್ರತಾಪ್ ಸಿಂಹ ಅವರ ಹೆಗಲ ಮೇಲೆ ಬಂದೂಕು ಇಟ್ಟು ಗುರಿನೆಟ್ಟಿರುವುದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಬಿ.ಎಲ್.ಸಂತೋಷ್ ಪ್ರತಿಕ್ರಿಯಿಸಿ, ಯಾಕೋ ಚೇಳು ಕುಟುಕಿದ ಹಾಗಾಗಿದೆಯಲ್ಲಾ ಪಾಟೀಲರೇ ಎಂದು ಟ್ವೀಟ್ ಮಾಡಿದ್ದರು.
‘ಪ್ರತಾಪ್‌ ಸಿಂಹ ಚಿಲ್ಲರೆ ರಾಜಕಾರಣ ಬಿಡಲಿ’ ಎಂಬ ಎಂ.ಬಿ.ಪಾಟೀಲ್‌ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ನಿನ್ನೆ ಮೈಸೂರಿನಲ್ಲಿ ಕಿಡಿಕಾರಿದ್ದರು. ಎಂ.ಬಿ. ಪಾಟೀಲ್‌ಗೆ ಈಗ ಸಿಕ್ಕಿರೋ ಖಾತೆಯಲ್ಲಿ ಬರೀ ಚಿಲ್ಲರೆ ಸಿಗುತ್ತದೆ. ಕೂತ ಕಡೆ ಕಂತೆ ಕಂತೆ ಕಾಸು ಬರುವ ಖಾತೆ ಸಿಗಲಿಲ್ಲ ಅಂತಾ ವಿಲವಿಲ ಒದ್ದಾಡುತ್ತಿದ್ದಾರೆ. ಅವರಿಗೆ ಬರೀ ಚಿಲ್ಲರೆ, ನೋಟು ಇದರ ಬಗ್ಗೆ ಮಾತ್ರ ಚಿಂತೆ. ಸಿದ್ದರಾಮಯ್ಯ ಅವರ ಓಲೈಕೆಯೇ ತಮ್ಮ ಖಾತೆ ಜವಾಬ್ದಾರಿ ಎಂದು ಪಾಟೀಲ್‌ ಅಂದು ಕೊಂಡಿದ್ದಾರೆ. ಸಿದ್ದರಾಮಯ್ಯ ಬಂದೂಕಿಗೆ ಹೆಗಲು ಕೊಡೋದೆ ನಿಮ್ಮ ಕೆಲಸನಾ ಎಂ.ಬಿ. ಪಾಟೀಲ್‌ ಎಂದು ಅವರು ಪ್ರಶ್ನಿಸಿದ್ದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × four =
Remember me
