ಬೆಂಗಳೂರು:ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷದ ಇತರ ನಾಯಕರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಈ ಕುರಿತು ಬೆಂಗಳೂರಿನ ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಮಾತನಾಡಿದ ಬೃಹತ್​ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಬಿಜೆಪಿ ಬಳಿ ಯಾವುದೇ ಅಸ್ತ್ರಗಳಿಲ್ಲ, ಇಲ್ಲಿಯವರೆಗೆ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗಿಲ್ಲ ಎಂದು ಟೀಕಿಸಿದರು.
ಇದನ್ನೂ ಓದಿ:ಒಟಿಟಿಗೆ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’; ಖುಷಿ ಬದಲಿಗೆ ಬೇಸರ ವ್ಯಕ್ತಪಡಿಸಿದ ಸಿನಿಪ್ರಿಯರು!
“ಬಿಜೆಪಿ ಜನರಿಂದ ತಿರಸ್ಕಾರಗೊಂಡಿದ್ದಾರೆ. 135 ಸೀಟ್ ಕಾಂಗ್ರೆಸ್ಸಿಗೆ ಕೊಟ್ಟು ಸುಭದ್ರ ಸರ್ಕಾರ‌ ಕೊಟ್ಟಿದ್ದಾರೆ. ಅವರ ಬಳಿ ಈಗ ಯಾವುದೇ ಅಸ್ತ್ರಗಳಿಲ್ಲ. ಇಲ್ಲಿಯವರೆಗೂ ವಿರೋಧ ಪಕ್ಷದ ನಾಯಕನ ಆಯ್ಕೆಯಾಗಿಲ್ಲ. ಬಿಜೆಪಿ ಶಾಸಕರು, ಮುಖಂಡರು, ಕಾರ್ಯಕರ್ತರು ಪಕ್ಷ ತ್ಯಜಿಸುತ್ತಿದ್ದಾರೆ. ಅವರದ್ದು‌ ಮುಳಗಿರುವ ದೋಣಿ” ಎಂದು ಹೇಳಿದರು.
“ಲೋಕಸಭಾ ಚುನಾವಣೆ ವೇಳೆಗೆ ಬಿಜೆಪಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಕಾದು ನೋಡಿ. ಪ್ರಧಾನಿ ಮೋದಿ ಹೇಳಿದ್ದರು, ಗ್ಯಾರಂಟಿಗಳನ್ನು ಜಾರಿ‌ಗೊಳಿಸಲು ಆಗುವುದಿಲ್ಲ, ಸುಮ್ಮನೆ ಆಶ್ವಾಸನೆ ‌ಕೊಟ್ಟಿದ್ದಾರೆ ಎಂದು. ಆದ್ರೆ, ಎಲ್ಲಾ ಗ್ಯಾರಂಟಿಗಳ ಅನುಷ್ಠಾನವನ್ನು ಕೇವಲ ನೂರು ದಿನಗಳಲ್ಲಿ ‌ಮಾಡಿದ್ದೇವೆ” ಎಂದು ಹೇಳಿದರು.
ಇದನ್ನೂ ಓದಿ:ಕಾರ್ಖಾನೆಗಳು ಎರಡನೇ ಬಿಲ್ ನೀಡಲಿ
“ಹತಾಶ ‌ಮನೋಭಾವ ಬಿಜೆಪಿಗರಲ್ಲಿ‌ ಕಾಣಿಸುತ್ತಿದೆ. ಯಡಿಯೂರಪ್ಪ ಅವರನ್ನು ಯಾವಾಗ ಏರಿಸುತ್ತಾರೆ, ಯಾವಾಗ ಇಳಿಸುತ್ತಾರೆ ಎಂಬುದೇ ತಿಳಿದಿಲ್ಲ. ಚುನಾವಣೆ ಸಂದರ್ಭದಲ್ಲಿ ಪ್ರಚಾರ ಸಮಿತಿ‌ ಅಧ್ಯಕ್ಷ ಅಂತ ಮಾಧ್ಯಮದಲ್ಲಿ ಹಾಕಿದ್ದರು. ಆದ್ರೆ ಅದರ ಸದಸ್ಯನಾಗಿ ಮಾಡಿದರು. ಬಿಎಸ್​ವೈ ಅವರನ್ನು ಯಾವ ರೀತಿಯಲ್ಲಿ ನಡೆಸಿಕೊಂಡರು ಎಂದು ಅವರಿಗೂ ಗೊತ್ತಿದೆ” ಎಂದು ಸಚಿವ ಎಂ.ಬಿ. ಪಾಟೀಲ್​ ಹೇಳಿದರು.
ಮುಂಗಾರು ಚುರುಕು; ರಾಜ್ಯದ 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
