ಬಾಗಲಕೋಟೆ:ಸುಕ್ಷೇತ್ರ ಶ್ರೀಶೈಲದಲ್ಲಿ ಕನ್ನಡಿಗರ ಮೇಲೆ ಹಲ್ಲೆ, ಬಾಗಲಕೋಟೆ ಯುವಕನಿಗೆ ಚಾಕು ಇರಿತ ವಿಚಾರವಾಗಿ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ, ಬೀಳಗಿ ಕ್ಷೇತ್ರದ ಶಾಸಕ ಮುರುಗೇಶ್ ನಿರಾಣಿ ಪ್ರತಿಕ್ರಿಯೆ ನೀಡಿದ್ದಾರೆ.
ಬಾಗಲಕೋಟೆ ಜಿಲ್ಲೆ ಬೀಳಗಿ ತಾಲೂಕಿನ ಭಕ್ತರು ಶ್ರೀಶೈಲಕ್ಕೆ ಪ್ರತಿವರ್ಷ ಪಾದಯಾತ್ರೆ ಮಾಡ್ತಾರೆ. ಈ ಬಾರಿಯ ಭಕ್ತಾದಿಗಳ ಮೇಲಿನ ಹಲ್ಲೆ ನೋವು ತಂದಿದೆ. ಬೀಳಗಿಯ ಜಾನಮಟ್ಟಿಯ ಯುವಕ ಶ್ರೀಶೈಲ ಮೇಲಿನ ಚಾಕು ಇರಿತ ಘಟನೆ ತುಂಬಾ ನೋವು ತಂದಿದೆ.
ಈ ಕುರಿತು ಕರ್ನೂಲ್ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಜತೆ ಮಾತನಾಡಿದ್ದೇನೆ. ಪರಿಸ್ಥಿತಿ ಬಗ್ಗೆ, ಘಟನೆ ಸವಿವರ ಕೇಳಿದ್ದೇನೆ. ಗಾಯಗೊಂಡವರಿಗೆ ಶ್ರೀಶೈಲದಲ್ಲಿ ಚಿಕಿತ್ಸೆ, ಇನ್ನಿತರ ವೈದ್ಯಕೀಯ ಚಿಕಿತ್ಸೆಗೆ ಸೂಚನೆ ನೀಡಿದ್ದೇನೆ. ಕನ್ನಡಿಗರ ಮೇಲಿನ ಹಲ್ಲೆ, ವಾಹನ ಜಖಂಗೊಳಿಸಿದ್ದು ಖಂಡನೀಯ. ಕನ್ನಡಿಗರು ಕಾನೂನು ಕೈಗೆತ್ತಿಕೊಳ್ಳದೆ ಶಾಂತಿಯಿಂದ ಇರಿ, ಸರ್ಕಾರ ಪರಿಸ್ಥಿತಿ ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತದೆ ಎಂದು ಮನವಿ ಮಾಡಿದರು.
ಪಿಎಂ ಭೇಟಿಯಾದ ಸಂಸದ ಮುನಿಸ್ವಾಮಿ; ಕೆಜಿಎಫ್, ಕ್ಲಾಕ್ ಟವರ್ ವಿಷಯ ಪ್ರಸ್ತಾಪ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
