ಬಾಗಲಕೋಟೆ:ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಕೆಲವು ದಿನಗಳಿಂದ ಸಿ.ಡಿ. ವಿಚಾರ ಭಾರಿ ಸದ್ದು ಮಾಡುತ್ತಿದೆ. ರಾಜಕಾರಣಿಯೊಬ್ಬರು ಸಿ.ಡಿ. ಬಿಡುಗಡೆ ಮಾಡುವುದಾಗಿ ಹೇಳಿದ್ದರಿಂದ ಒಂದು ಸಂಚಲನ ಮೂಡಿದ್ದು, ಇದೀಗ ಮತ್ತೊಮ್ಮೆ ಸಿ.ಡಿ. ಬಿಡುಗಡೆ ವಿಚಾರ ಮುನ್ನೆಲೆಗೆ ಬಂದಿದೆ. ನಾಳೆ ಅಮಿತ್ ಷಾ ಸಮ್ಮುಖದಲ್ಲೇ ಸಿ.ಡಿ. ಬಿಡುಗಡೆ ಮಾಡುವುದಾಗಿ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ನಾಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸಲಿರುವ ಹಿನ್ನೆಲೆಯಲ್ಲಿ ನಾಳಿನ ಕಾರ್ಯಕ್ರಮಗಳ ವಿವರ ನೀಡುವ ಸಂದರ್ಭದಲ್ಲಿ ಸಚಿವ ಮುರುಗೇಶ್ ನಿರಾಣಿ ಸಿ.ಡಿ. ಬಿಡುಗಡೆ ಮಾಡುವ ವಿಚಾರವನ್ನು ಸುದ್ದಿಗಾರರಿಗೆ ತಿಳಿಸಿದರು.
ಈ ಹಿಂದೆ ಬಸವನ ಗೌಡ ಪಾಟೀಲ ಯತ್ನಾಳ ಅವರು ನೀಡಿದ್ದ ಸಿ.ಡಿ. ಬಿಡುಗಡೆ ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ನಿರಾಕರಿಸಿದ ನಿರಾಣಿ, ತಾವು ಬಿಡುಗಡೆ ಮಾಡಲಿರುವ ಸಿ.ಡಿ. ಕುರಿತು ಹೇಳಿದರು. ನಾಳೆ ಕೇದಾರನಾಥ ಸಕ್ಕರೆ ಕಾರ್ಖಾನೆಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಇರಲಿದೆ. ಆ ಸಂದರ್ಭದಲ್ಲಿ ನಾಳೆ 5 ನಿಮಿಷಗಳ ಸಿ.ಡಿ. ಬಿಡುಗಡೆ ಇರುತ್ತದೆ ಎಂದ ನಿರಾಣಿ, ತಕ್ಷಣವೇ ಆ ಸಿ.ಡಿ. ಅಲ್ಲ ಎಂದು ನಗೆ ಚಟಾಕಿ ಹಾರಿಸಿದರು. ಎಂ.ಆರ್.ಎನ್​. ನಿರಾಣಿ ಉದ್ದಿಮೆ ಸಮೂಹ ಸಂಸ್ಥೆಗಳ ಸಮಗ್ರ ಮಾಹಿತಿ ಇರುವ ಸಿ.ಡಿ.ಯೊಂದನ್ನು ನಾಳೆ ಬಿಡುಗಡೆ ಮಾಡುವುದಾಗಿ ಅವರು ಹೇಳಿದರು.
ಸಂಸಾರ ಮಾಡಲು ಗಂಡ ಒಪ್ಪದಿದ್ದರೆ ಏನಾದರೂ ಪರ್ಯಾಯ ಮಾರ್ಗಗಳಿವೆಯೆ?

ಈ ದೇವರಿಗೆ ಹಣ್ಣು-ಕಾಯಿ ಬೇಡವಂತೆ!… ಅದಕ್ಕೇ ಏಡಿಗಳನ್ನು ಅರ್ಪಿಸುತ್ತಾರೆ ಭಕ್ತರು!

ಹೆಲ್ತ್ ಇನ್ಶೂರೆನ್ಸ್ ಮಾಡಿಸುತ್ತಿದ್ದೀರಾ? ಮೊದಲು ಈ ವಿಷಯಗಳನ್ನು ತಿಳಿದುಕೊಳ್ಳಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × three =
Remember me
