ಚಿಕ್ಕಬಳ್ಳಾಪುರ:ಸಿಡಿ ಲೇಡಿಯ ಮೆಂಟಲ್ ಟೆಸ್ಟ್‌ ಮಾಡಿ ಫಿಟ್ ಆಗಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕೆಂದು ಸಚಿವ ನಾರಾಯಣ ಗೌಡ ಸಲಹೆ ನೀಡಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗ ಸಿಡಿ ಲೇಡಿ ನ್ಯಾಯಾಧೀಶರು ಎದುರು ಹೇಳಿಕೆ ನೀಡಿರಬಹುದು. ಎಫ್ಐಆರ್ ದಾಖಲಿಸಿರಬಹುದು. ಆದರೆ, ಮುಂದೆ ಹೇಳಿಕೆಗಳು ಬದಲಾಗುವುದನ್ನು ಅಲ್ಲಗಳೆಯಲಾದಿತೇ ಎಂದು ಪ್ರಶ್ನಿಸಿದರು.
ಮೊದಲು ಸಿಡಿಲೇಡಿ ಮೆಂಟಲಿ ಫಿಟ್ ಇರುವುದನ್ನು ತಿಳಿದುಕೊಳ್ಳಬೇಕಾಗಿದೆ. ಇದಕ್ಕೆಸಿಡಿ ಲೇಡಿಯಮೆಡಿಕಲ್ ಚೆಕ್ ಅಪ್ ಆಗಬೇಕು. ನ್ಯಾಯಾಧೀಶರ ಮುಂದೆ ಹಾಜರಾದ ಸಿಡಿ ಲೇಡಿ ಹೇಳಿಕೆ ಏನು ಅನ್ನೋದು ಯಾರಿಗೂ ಗೊತ್ತಿಲ್ಲ. ಹೆಣ್ಣು ಮಗಳ ಹೇಳಿಕೆ ಹೊರಗೆ ಬಂದಿಲ್ಲ. ಆ ಹೆಣ್ಣು ಮಗಳು ಗೊಂದಲದಲ್ಲಿದ್ದಾಳೆ ಎಂದರು.
ಇದೇ ವೇಳೆ ಆರು ಸಚಿವರ ಕೋರ್ಟ್ ಮೆಟ್ಟೇಲೇರಿ ತಂದ ತಡೆಯಾಜ್ಞೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೆಲ ಸಂದರ್ಭದಲ್ಲಿ ರಸ್ತೆಯಲ್ಲಿ ನಡೆದುಕೊಂಡು ಹೋಗುವ ವೇಳೆ ಚರಂಡಿ ಗಲೀಜು ಬೀಳುವ ಸಾಧ್ಯತೆ ಇರುತ್ತದೆ. ಇದಕ್ಕೆ ಹುಷಾರಾಗಿ ತಪ್ಪಿಸಿಕೊಳ್ಳಬೇಕಾಗುತ್ತದೆ. ನಮ್ಮ ತೇಜೋವಧೆಗೆ ಕೆಲವರು ಹುನ್ನಾರ ನಡೆಸುತ್ತಿರುವ ಬಗ್ಗೆ ಮಾಹಿತಿ ಗೊತ್ತಾಯಿತು. ಇದರಿಂದ ಕುತಂತ್ರಕ್ಕೆ ಮಾನವನ್ನು ಕಳೆದುಕೊಳ್ಳದಿರಲು ಹೈಕೋರ್ಟ್ ಮೂಲಕ ರಕ್ಷಣೆ ಪಡೆದುಕೊಳ್ಳಲಾಯಿತು.  ಈಗಲೂ ನಮ್ಮ ಸಿಡಿನೂ ಬಿಡುಗಡೆ ಮಾಡಲಿ  ಎಂದು ಸವಾಲೆಸೆದರು.
ರಮೇಶ್ ಜಾರಕಿಹೊಳಿಗೆ ಬಂಧನದ ಭೀತಿ ಇಲ್ಲ. ಎಲ್ಲೂ ಅವಿತುಕೊಂಡಿಲ್ಲ. ಅವರ ಕೆಲಸ ಕಾರ್ಯಕ್ಕೆ ಅಂತ ಮಹಾರಾಷ್ಟ್ರ ಸೇರಿ ವಿವಿಧೆಡೆ ಹೋಗಿ ಬರುತ್ತಿರುತ್ತಾರೆ. ಕಾನೂನು ಪ್ರಕಾರ ಅವರೂ ಹೋರಾಟ ನಡೆಸುತ್ತಿದ್ದಾರೆ. ಸಿ.ಡಿ ವಿಚಾರ ಉಪಚುನಾವಣೆ ಮೇಲೆ  ಪ್ರಭಾವ ಬೀರುವುದಿಲ್ಲ. ಜನರಿಗೆ ಸತ್ಯಾಂಶ ಗೊತ್ತಾಗಿದೆ. ಇದಕ್ಕೆ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ ಎಂದರು. ಎಂದರು.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 9 =
Remember me
