ಮಂಡ್ಯ:ತೋಟಗಾರಿಕಾ ಸಚಿವ ನಾರಾಯಣ ಗೌಡ ಅವರು ಇಂದು ಸ್ವಲ್ಪದರಲ್ಲಿ ದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ.
ನಾಗಮಂಗಲದ ಬಂಕಾಪುರದ ಬಳಿ ಸಚಿವರು ಕಾರು ಬರುತ್ತಿದ್ದಾಗ, ರಸ್ತೆ ಬದಿಯಲ್ಲಿದ್ದ ಕಲ್ಲುಬಂಡೆ ಏಕಾಏಕಿ ಸ್ಫೋಟಗೊಂಡಿದೆ. ಸಚಿವರು ಕೆ.ಆರ್.ಪೇಟೆಗೆ ಹೊರಟಿದ್ದರು.
ಇದನ್ನೂ ಓದಿ:ಅಗಲಿದ ನಟನಿಗೆ ಶ್ರದ್ಧಾಂಜಲಿ ಅರ್ಪಿಸಿದ ರಾಜಕೀಯ ಗಣ್ಯರು; ದಿಗ್ಭ್ರಮೆಯಾಗಿದೆ ಎಂದ್ರು ಸಿಎಂ ಯಡಿಯೂರಪ್ಪ
ಬೆಂಗಳೂರು-ಜಲಸೂರು ರಸ್ತೆ ನಿರ್ಮಾಣಕ್ಕಾಗಿ ಕಾಮಗಾರಿ ನಡೆಯುತ್ತಿದ್ದು, ಗುತ್ತಿಗೆದಾರ ಹಗಲು ಹೊತ್ತಿನಲ್ಲಿಯೇ, ಯಾವುದೇ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳದೆ ಬಂಡೆಯನ್ನು ಸ್ಫೋಟಿಸಿದ್ದಾನೆ. ಈ ಬಂಡೆ ಸ್ಫೋಟಗೊಳ್ಳುವುದಕ್ಕೂ, ಸಚಿವರ ಕಾರು ಅಲ್ಲಿ ಬರುವುದಕ್ಕೂ ಸರಿಯಾಗಿದ್ದು, ಸಚಿವರು ಕೂದಲೆಳೆ ಅಂತರದಿಂದ ಅಪಾಯದಿಂದ ಪಾರಾಗಿದ್ದಾರೆ.
ಕೆಶಿಫ್​ ರಸ್ತೆ ಕಾಮಗಾರಿ ನಡೆಸುತ್ತಿದ್ದ ಮೈಸೂರಿನ ಗುತ್ತಿಗೆದಾರ ಶ್ರೀನಿವಾಸ್​ ರಾಜ್​ ಅವರ ಬೇಜವಾಬ್ದಾರಿತನದ ವಿರುದ್ಧ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದು, ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
https://www.facebook.com/VVani4U/videos/251785529428839/?t=14
VIDEO: ಕರೊನಾದಿಂದ ಗುಣಮುಖರಾಗಿ ರೋಡ್​ ಷೋ: ಇಮ್ರಾನ್​ ಪಾಷಾ ಅರೆಸ್ಟ್​- ಜಮೀರ್​ ಗರಂ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 + 13 =
Remember me
