ಮಂಡ್ಯ:ಗುಜರಾತ್ ಸರ್ಕಾರ ಅಲ್ಲಿನ ಪಠ್ಯದಲ್ಲಿ ಭಗವದ್ಗೀತೆಯನ್ನು ಸೇರಿಸಲು ಮುಂದಾಗಿರುವ ಬೆನ್ನಿಗೇ ಕರ್ನಾಟಕದ ಪಠ್ಯದಲ್ಲೂ ಭಗವದ್ಗೀತೆಯನ್ನು ಸೇರಿಸುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇದನ್ನು ಬೆಂಬಲಿಸಿ ಸಾಕಷ್ಟು ಅಭಿಪ್ರಾಯ ವ್ಯಕ್ತವಾಗಿದ್ದರೂ ಅಲ್ಲಲ್ಲಿ ಕೆಲವರಿಂದ ವಿರೋಧ ವ್ಯಕ್ತವಾಗಿರುವುದೂ ಇದೆ.
ಈ ಕುರಿತು ಮುಖ್ಯಮಂತ್ರಿಯಾದಿಯಾಗಿ ಹಲವರು ಈಗಾಗಲೇ ಅಭಿಪ್ರಾಯ ವ್ಯಕ್ತಪಡಿಸಿದ್ದು, ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಕೂಡ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಇಂದು ಮಾತನಾಡಿದ ಅವರು ಈ ವಿಷಯವಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡರು.
ನಮ್ಮ ಸಂಸ್ಕೃತಿ ಆಚಾರ-ವಿಚಾರಗಳನ್ನ ವಿದ್ಯಾಭ್ಯಾಸದ ಮೂಲಕ ನಮ್ಮ‌ ಮಕ್ಕಳು ಕಲಿಯಬೇಕು. ಅದಕ್ಕೆ ಸಂಬಂಧಪಟ್ಟ ಸ್ಕೂಲ್ ಬೋರ್ಡ್ ಹಾಗು ವಿಶ್ವವಿದ್ಯಾಲಯ ನಿರ್ಣಯ ತೆಗೆದುಕೊಳ್ಳುತ್ತೆ. ಕಾಂಗ್ರೆಸ್​ನವರು ಎಲ್ಲದಕ್ಕೂ ವಿರೋಧ ಮಾಡುತ್ತಾರೆ. ಅವರು ಕರೊನಾ ವ್ಯಾಕ್ಸಿನ್​ಗೂ ವಿರೋಧ ಮಾಡಿದ್ದರು. ಲಸಿಕೆ ಹಾಕಿಸಿಕೊಳ್ಳಬೇಡಿ ಎಂದು ಹೇಳುತ್ತಿದ್ದರು ಎಂದು ಸಚಿವರು ಹೇಳಿದರು.
ಇದನ್ನೂ ಓದಿ:ಅಮ್ಮನೆದುರೇ ಮಗಳ ಕುತ್ತಿಗೆ ಮೇಲೆ ಸಾಗಿದ ಆಟೋ; ಚಾಲಕನ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿ..
ಕಾಂಗ್ರೆಸ್​ನವರು ಕಾರಣವಿಲ್ಲದೆ ವಿರೋಧಿಸುತ್ತಾರೆ. ಈಗಾಗಲೇ ದೇಶದ ಭಾವನೆ ಹಾಗೂ ಸಂಸ್ಕೃತಿ ವಿಚಾರದಲ್ಲಿ ವಿರೋಧ ಮಾಡಿದರು. ನಮ್ಮ ದೇಶದ ಜನರ ಭಾವನೆ ವಿರೋಧಿಸಿ ಕಾಂಗ್ರೆಸ್​ನವರು ಇದೀಗ ಕಡೆಗಣನೆಗೆ ಒಳಗಾಗಿದ್ದಾರೆ ಎಂದು ಸಚಿವರು ತಿಳಿಸಿದರು.
ಮದುವೆಯಾಗದ ಚಿಂತೆ‌; ಬಣ್ಣ ಬಳಿಯೋ ನೆಪದಲ್ಲಿ ಕೋಣೆಗೆ ಹೋಗಿ ವಿಷ ಕುಡಿದು ಸತ್ತ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 5 =
Remember me
