ಬೆಂಗಳೂರು: ರಾಜ್ಯದಲ್ಲಿ ಗೃಹ ಸಚಿವರು ಯಾರು ಎಂಬ ಗೊಂದಲ, ಫ್ಯಾಕ್ಟ್ ಚೆಕ್ ಹೆಸರಿನಲ್ಲಿ ಭಯ-ಭೀತಿಯ ವಾತಾವರಣ ಸೃಷ್ಟಿಸಲಾಗಿದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧಿಕಾರವನ್ನೇ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೈಜಾಕ್ ಮಾಡಿದ್ದಾರೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ, ಬಿಜೆಪಿ ಧುರೀಣ ಭಾಸ್ಕರ್ ರಾವ್ ಚಾಟಿ ಬೀಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧ್ಯಮ ಹಾಗೂ ಸಾಮಾಜಿಕ ಜಾಕತಾಣಗಳಲ್ಲಿ ಅಪಪ್ರಚಾರ, ಸುಳ್ಳು ಮಾಹಿತಿ ಪತ್ತೆ ಮಾಡುತ್ತೇವೆ ಎನ್ನುತ್ತಾ ಗೃಹ ಸಚಿವರ ಅಧಿಕಾರವನ್ನು ಕಿತ್ತುಕೊಂಡು ಸಂವಿಧಾನವಿಲ್ಲದ ಅವಕಾಶವಿಲ್ಲದ ಕಾಯ್ದೆ ಮಾಡಲು ಹೊರಟಿದ್ದಾರೆ ಎಂದು ಆಕ್ಷೇಪಿಸಿದರು.
ಅಪರಾಧ ದಂಡ ಪ್ರಕ್ರಿಯಾ ಸಂಹಿತೆಯಲ್ಲಿ ಎಲ್ಲ ಅಂಶಗಳಿವೆ, ಪೊಲೀಸ್ ಇಲಾಖೆ ಏನೆಲ್ಲ ಪಾಲನೆ ಮಾಡಬೇಕೆಂದು ತಿಳಿಸಿದೆ. ಮಾತನಾಡುವ, ಪ್ರತಿಕ್ರಿಯಿಸುವ, ವಿಮರ್ಶಿಸುವ ಅಭಿವ್ಯಕ್ತಿ ಸ್ವಾತಂತ್ರ್ಯವಿರಬೇಕು. ಡಿಜಿಟಲ್ ಫಾರ್ಮ್ ನಲ್ಲಿ ಇರುವುದನ್ನೂ ಸ್ವೀಕರಿಸಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ತಿಳಿಸಿ, 66ಎ‌ ಕಾಯ್ದೆಯನ್ನು ವಜಾಗೊಳಿಸಿದೆ. ಮತ್ತದೇ ಕಾಯ್ದೆಯನ್ನು ಪ್ರಿಯಾಂಕ್ ಖರ್ಗೆ ಹಿಂಬಾಗಿಲ ಮೂಲಕ ತರಲು ಹೊರಟಿದ್ದಾರೆ ಎಂದು ಭಾಸ್ಕರರಾವ್ ಕಿಡಿಕಾರಿದರು.
ಸರ್ಕಾರದ ಕಾರ್ಯಶೈಲಿ, ನೀತಿ-ನಿರ್ಧಾರಗಳಲ್ಲಿನ ಲೋಪದೋಷಗಳನ್ನು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವವರು ಬಯಲುಗೊಳಿಸುತ್ತಿದ್ದಾರೆ. ಈ ಟೀಕೆ-ಟಿಪ್ಪಣೆ, ಸರ್ಕಾರದ ಸುಳ್ಳು ಹೊರ ಬರುತ್ತಿರುವುದು ಸಹಿಸಲಾಗುತ್ತಿಲ್ಲ. ಚರ್ಚೆಗೆ ಉತ್ತರಿಸಲಾಗದೆ ಪಲಾಯನವಾದ ಅನುಸರಿಸಿದೆ. ಜನರಿಗೆ ಬ್ಕ್ಯಾಕ್ ಮೇಲ್ ಮಾಡಲು, ಹೆದರಿಸಲು ಕಾಯ್ದೆ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಎಫ್ ಐಆರ್ ದಾಖಲಿಸಿ ಬೆದರಿಕೆ ಹಾಕಬಹುದೇ ಹೊರತು ಸಾಬೀತುಪಡಿಸಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ತಿರಸ್ಕರಿಸಿದ 66ಎ ಕಾನೂನು ಜಾರಿಗೆ ಅವಕಾಶವಿಲ್ಲ ಎಂದು ಭಾಸ್ಕರರಾವ್ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 5 =
Remember me
