ಬೆಂಗಳೂರು:ಅತಿವೃಷ್ಟಿ, ಪ್ರವಾಹ ಕಾಲಕ್ಕೆ ಬಾರದ ಪ್ರಧಾನಿ ನರೇಂದ್ರ ಮೋದಿಯವರು ಈಗ ರಾಜ್ಯಕ್ಕೆ ಪದೇ ಪದೆ ಭೇಟಿ ಮಾಡುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪದೇ ಪದೆ ಹೇಳುತ್ತಿದ್ದಾರೆ. ಆದರೆ ಪ್ರವಾಹ ಮುಗಿದ ನಂತರವೇ ಸಿದ್ದರಾಮಯ್ಯ ಬಾಧಿತ ಪ್ರದೇಶಕ್ಕೆ ಭೇಟಿ ಮಾಡಿದ್ದರು ಎಂಬುದನ್ನು ಮರೆತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ಕುಟುಕಿದರು.
ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ಪ್ರಕೃತಿ ವಿಕೋಪ ಪರಿಹಾರಕ್ಕೆ ಮನಮೋಹನ್ ಸಿಂಗ್ ಆಡಳಿತಾವಧಿಯಲ್ಲಿ ರಾಜ್ಯಕ್ಕೆ ಎಷ್ಟು ಸಿಕ್ಕಿತು, ಮೋದಿ ಆಡಳಿತಾವಧಿಯಲ್ಲಿ ಎಷ್ಟು ಬಂದಿದೆ ಎಂಬ ಬಗ್ಗೆ ಅಂಕಿ- ಅಂಶ ಸಹಿತ ಬಹಿರಂಗ ಚರ್ಚೆಗೆ ಸಿದ್ಧವೆಂದು ಸಿದ್ದರಾಮಯ್ಯಗೆ ಪಂಥಾಹ್ವಾನ ನೀಡಿದರು.
ಇದನ್ನೂ ಓದಿ:ರ‍್ಯಾಗಿಂಗ್​ಗೆ ವೈದ್ಯಕೀಯ ವಿದ್ಯಾರ್ಥಿನಿ ಬಲಿ: ವಾಟ್ಸ್​ಆ್ಯಪ್​ ಚಾಟ್​ನಿಂದ ಸಿಕ್ಕಿಬಿದ್ದ ಸೀನಿಯರ್​ ಸ್ಟೂಡೆಂಟ್​
ಮನಮೋಹನ್ ಸಿಂಗ್ ರಾಜ್ಯಕ್ಕೆ ಬಂದು ಹೋಗಿದ್ದನ್ನೇ ದೊಡ್ಡ ಸಾಧನೆ ಎನ್ನುವಂತೆ ಬಿಂಬಿಸುತ್ತಿದ್ದಾರೆ. ಪ್ರವಾಹ ಪರಿಹಾರ ಕೆಲಸಗಳಿಗೆ ಅಲ್ಪ ಮೊತ್ತ ನೀಡಿದ್ದನ್ನು ಮರೆಮಾಚುತ್ತಿದ್ದಾರೆ. ಮೋದಿಯವರು ಸಕಾಲಕ್ಕೆ ಸ್ಪಂದಿಸುವ ಜತೆಗೆ ರಾಜ್ಯ ಸರ್ಕಾರದ ಪ್ರಸ್ತಾವೆನೆಗೆ ನಿಯಮಾವಳಿಗಿಂತ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದ್ದಾರೆ‌.
ಮೋದಿಯವರ ನಾಯಕತ್ವ, ಅಭಿವೃದ್ಧಿ ದೂರದೃಷ್ಟಿ, ಸಂವೇದನಾಶೀಲತೆ ಗಮನಾರ್ಹ. ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆಗಾಗಿ ಭೇಟಿ ನೀಡುತ್ತಿದ್ದು, ರಾಜ್ಯದ ಪ್ರಗತಿಗೆ ದೊಡ್ಡ ವರದಾನವೆಂದು ಆರ್.ಅಶೋಕ್ ಬಣ್ಣಿಸಿದರು.
ಶಿವಮೊಗ್ಗಕ್ಕೆ ಪ್ರಧಾನಿ ಮೋದಿ ಆಗಮನ: ಮಲೆನಾಡಲ್ಲಿ ನಮೋ ಮೋಡಿ​

ಶಾಲೆಗಳೇ ಇವರ ಟಾರ್ಗೆಟ್; 22 ವರ್ಷಗಳ ನಂತರ ಪೊಲೀಸರ ಬಲೆಗೆ ಬಿದ್ದ ಖದೀಮರು

ಬೆಳಗಾವಿಯಲ್ಲಿ ಪ್ರಧಾನಿ ರೋಡ್ ಶೋ ಹಿನ್ನೆಲೆ; 10 ಕ್ವಿಂಟಾಲ್ ಹೂ ಸಿದ್ಧಗೊಳಿಸಿದ ಕಾರ್ಯಕರ್ತರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 15 =
Remember me
