ಬೆಂಗಳೂರು:ಈ ಬಾರಿ ಹೊಸ ವರ್ಷದ ಸಂಭ್ರಮಕ್ಕೆ ಕರೊನಾ ಕರಿ ನೆರಳು ಆವರಿಸಿದ್ದು, ರಾಜ್ಯ ಸರ್ಕಾರ ಕರೊನಾ ರೂಲ್ಸ್​ ಜಾರಿ ಮಾಡಿದೆ. ರಾಜ್ಯ ರಾಜಧಾನಿ ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿ ಹೊಸ ವರ್ಷಾಚರಣೆ ವೇಳೆಯೂ ಮಾಸ್ಕ್​​ ಧರಿಸೋದು ಕಡ್ಡಾಯ. ಅಷ್ಟೇ ಅಲ್ಲ, ರಾಜ್ಯಾದ್ಯಂದ ನ್ಯೂ ಇಯರ್​ ಪಾರ್ಟಿಗೆ ಮಕ್ಕಳು ಮತ್ತು ಗರ್ಭಿಣಿಯರಿಗೆ ನಿಷೇಧ ಹೇರಲಾಗಿದೆ. ಉಳಿದಂತೆ ಪಾರ್ಟಿಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರೂ ಕರೊನಾ ರೂಲ್ಸ್​ ಪಾಲಿಸಬೇಕು. ಮಾಸ್ಕ್​ ಧರಿಸಿಯೇ ಇರಬೇಕು!
ಕೋವಿಡ್ ನಿಯಂತ್ರಣಾ ಕುರಿತು ತಜ್ಞವೈದ್ಯರ ತಂಡದೊಂದಿಗೆ ಸೋಮವಾರ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್​. ಅಶೋಕ್, ಚೀನಾ ಮತ್ತು ಬೇರೆ ಬೇರೆ ದೇಶದಲ್ಲಿ ಕೋವಿಡ್​ ಸೋಂಕಿತ ಸಂಖ್ಯೆ ಹೆಚ್ಚಾಗಿದೆ. ಮುಂಜಾಗ್ರತಾ ಕ್ರಮವಾಗಿ ದೇಶದಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದ ಸಿನಿಮಾ ಥಿಯೇಟರ್​ಗಳಲ್ಲಿ ಮಾಸ್ಕ್​ ಧರಿಸಿವುದು ಕಡ್ಡಾಯ. ಶಾಲಾ-ಕಾಲೇಜುಗಳ ತರಗತಿಯೊಳಗೆ ಎಲ್ಲರೂ ಕಡ್ಡಾಯವಾಗಿ ಮಾಸ್ಕ್​ ಧರಿಸಬೇಕು ಎಂದರು.
ವಿಮಾನದಲ್ಲಿ ಬರುವ ಪ್ರಯಾಣಿಕರ ತಪಾಸಣೆಗಾಗಿ ಮಂಗಳೂರಿನ ವೆನ್​ಲಾಕ್​ ಮತ್ತು ಬೆಂಗಳೂರಿನ ಬೌರಿಂಗ್​​​ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಪಬ್​, ಕ್ಲಬ್​, ಬಾರ್​, ಶಾಲಾ ಕಾಲೇಜುಗಳಲ್ಲೂ ಮಾಸ್ಕ್​ ಕಡ್ಡಾಯ. ಸ್ಯಾನಿಟೈಸರ್​ ಬಳಕೆ ಕಡ್ಡಾಯ. ರೆಸಾರ್ಟ್​ಗಳಲ್ಲಿ ಕರೊನಾ ರೂಲ್ಸ್​ಗಳನ್ನು ಕಡ್ಡಾಯವಾಗಿ ಫಾಲೋ ಮಾಡಬೇಕು. ಬಾರ್​​ ಸಿಬ್ಬಂದಿ ಮಾತ್ರವಲ್ಲ ಬಾರ್​ಗೆ ಬರೋ ಗ್ರಾಹಕರಿಗೂ ಡಬಲ್​​ ಡೋಸ್​ ಹಾಕಿಸಿಕೊಂಡಿರಬೇಕು. ಈ ರೂಲ್ಸ್​ ಪಾರ್ಟಿಗಳಿಗೂ ಅನ್ವಯ ಎಂದು ಅಶೋಕ್​ ತಿಳಿಸಿದರು.
ಚಾಮರಾಜನಗರದಲ್ಲಿ ದುರಂತ: ಕಲ್ಲು ಕ್ವಾರೆಯಲ್ಲಿ ಬಂಡೆ ಕುಸಿದು ಸ್ಥಳದಲ್ಲೇ ಇಬ್ಬರ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಆಸ್ಪತ್ರೆಗೆ ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − three =
Remember me
