ಚಿಕ್ಕಬಳ್ಳಾಪುರ:ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ 565 ಮತ್ತು ನಗರ ಭಾಗದ 191 ಎಕರೆ ಜಾಗದಲ್ಲಿ 22 ಸಾವಿರ ಫಲಾನುಭವಿಗಳಿಗೆ ನಿವೇಶನ ವಿತರಿಸುವುದಾಗಿ ಶನಿವಾರ ಜರಬಂಡಹಳ್ಳಿ ಗ್ರಾಮವಾಸ್ತವ್ಯದ ವೇಳೆ ಕಂದಾಯ ಸಚಿವ ಆರ್. ಅಶೋಕ್ ಘೊಷಿಸಿದ್ದಾರೆ. ಅರಳಿಕಟ್ಟೆಯ ಮೇಲೆ ರೈತರು, ಗ್ರಾಮಸ್ಥರೊಂದಿಗೆ ಸಚಿವರು ಸಂವಾದ ನಡೆಸಿದರು. ನೂತನ ತಾಲೂಕು ಮಂಚೇನಹಳ್ಳಿಯಲ್ಲಿ ಆಡಳಿತ ಸೌಧ ನಿರ್ವಣಕ್ಕೆ 15 ಕೋಟಿ ರೂಪಾಯಿ ಮಂಜೂರು ಮಾಡುವುದಾಗಿ ಪ್ರಕಟಿಸಿದ ಸಚಿವರು, ಜರಬಂಡಹಳ್ಳಿಯ ಅಭಿವೃದ್ಧಿ ಕೆಲಸಗಳಿಗೆ ಸ್ಥಳದಲ್ಲಿಯೇ 1 ಕೋಟಿ ರೂಪಾಯಿ ಘೊಷಿಸಿದರು.
ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಇದುವರೆಗೂ ರಾಜ್ಯದಲ್ಲಿ 71,172 ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಸವಲತ್ತುಗಳನ್ನು ಒದಗಿಸಲಾಗಿದೆ. ರಾಯಚೂರಿನಲ್ಲಿ ಮಾಜಿ ಸೈನಿಕರು ಸ್ವಂತ ಸೂರಿನ ಕನಸು ಸಾಕಾರದ ಬಗ್ಗೆ ಗಮನ ಸೆಳೆದಾಗ 24 ಗಂಟೆಯಲ್ಲಿ ಮನೆ ನಿರ್ವಣಕ್ಕೆ 6 ಎಕರೆ ಜಾಗ ಗುರುತಿಸಲಾಯಿತು. ಒಂದೇ ದಿನದಲ್ಲಿ ಹಕ್ಕುಪತ್ರಗಳನ್ನು ವಿತರಿಸಲಾಯಿತು. ಕೇವಲ 4 ಗಂಟೆಯಲ್ಲಿ ಸ್ಮಶಾನಕ್ಕೆ ಜಾಗ ಮಂಜೂರು ಮಾಡುವ ಮೂಲಕ ಗ್ರಾಮದ ಜನರ ಬೇಡಿಕೆ ಈಡೇರಿಸಲಾಯಿತು. ಯಾದಗಿರಿಯಲ್ಲಿ ಜಿಲ್ಲಾಧಿಕಾರಿಯು 12 ಗಂಟೆ ಬದಲಿಗೆ 24 ಗಂಟೆ ಗ್ರಾಮ ವಾಸ್ತವ್ಯ ಹೂಡುವ ಉತ್ಸಾಹ ತೋರಿದರು. ದಾವಣಗೆರೆಯಲ್ಲಿ ತಿಂಗಳಿಗೆ 2ಕ್ಕೆ ಬದಲಿಗೆ 4 ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆಯೋಜನೆ ಸೇರಿ ಒಳ್ಳೆಯ ಬೆಳವಣಿಗೆಗಳು ಯಶಸ್ವಿಯ ಸಂದೇಶವನ್ನು ಸಾರುತ್ತವೆ ಎಂದು ಸಚಿವ ಅಶೋಕ್ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 3 =
Remember me
