ಬಾಗಲಕೋಟೆ:ರಾಜ್ಯದಲ್ಲಿ ಅಗ್ಗದ ಸಾರಾಯಿ ಜಾರಿಗೆ ತರುವ ಹಾಗೂ ಹೊಸ ಮದ್ಯದ ಅಂಗಡಿ ತೆರೆಯುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.ಇದನ್ನೂ ಓದಿ:ನಮ್ಮ ಸರ್ಕಾರ ವಿದ್ಯುತ್ ದರ ಹೆಚ್ಚಿಸಿಲ್ಲ; ಮಾಜಿ ಸಿಎಂ ಬೊಮ್ಮಾಯಿ ಸ್ಪಷ್ಟನೆ
ಪಕ್ಷದ ಕಚೇರಿಯಲ್ಲಿ ಸನ್ಮಾನದ ಬಳಿಕ ಮಾತನಾಡುತ್ತಾ, ಗ್ಯಾರಂಟಿ ಯೋಜನೆಗಳ ಹೊರೆ ತಗ್ಗಿಸಲು ಅಬಕಾರಿ ಸುಂಕ ಹೆಚ್ಚಿಸಿಲ್ಲ. ಬೆಲೆ ಏರಿಕೆ ಮಾಡುವ ಸಂದರ್ಭದಲ್ಲಿ ತಿಳಿಸುತ್ತೇವೆ. ಅಬಕಾರಿ ಇಲಾಖೆಯಿಂದ ಹೆಚ್ಚು ಆದಾಯ ಬರುವ ನಿರೀಕ್ಷೆ ಇಟ್ಟುಕೊಳ್ಳೋಣ. ಮುಂದಿನ ದಿನಗಳಲ್ಲಿ ಅಬಕಾರಿ ಇಲಾಖೆಯ ಆಡಳಿತದಲ್ಲಿ ಬದಲಾವಣೆ ತರುತ್ತೇವೆ. ರಾಜ್ಯದಲ್ಲಿ ವಿಶೇಷವಾಗಿ ಡ್ರಗ್ಸ್, ಗಾಂಜಾ ಚಟುವಟಿಕೆಗಳನ್ನು ನಿಯಂತ್ರಣ ಮಾಡಲು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ಜಿಎಸ್​ಟಿ ಜಾರಿಗೆ ಬಂದ ಬಳಿಕ ಆದಾಯ ಸಂಗ್ರಹಕ್ಕೆ ಎರಡು, ಮೂರು ಇಲಾಖೆ ಬಿಟ್ಟರೆ ಬೇರೆ ಇಲಾಖೆ ಇಲ್ಲ. ಹೀಗಾಗಿ ಅನಿವಾರ್ಯವಾಗಿ ನಮ್ಮ ಖಾತೆ ಬಗ್ಗೆ ಹೆಚ್ಚು ಚರ್ಚೆಯಾಗುವುದು ಸಹಜ ಎನ್ನುತ್ತಾ, ಯಾವುದೇ ಯೋಜನೆ ತಂದರೂ ಹಣಕಾಸು ಹೊಂದಿಸಲು ಅಬಕಾರಿ ಕಡೆಗೆ ನೋಡ್ತಾರೆ ಎನ್ನುವ ವಿಚಾರಕ್ಕೆ ಸ್ಪಷ್ಟನೆ ನೀಡಿದರು.
ಇದನ್ನೂ ಓದಿ:ಸರ್ಕಾರಿ ಬಸ್​​ನಲ್ಲಿ ಮಹಿಳೆಯರಿಗೆ ಫ್ರೀ; ಧರ್ಮಸ್ಥಳ, ಕುಕ್ಕೆ ಕ್ಷೇತ್ರದಲ್ಲಿ ಜನವೋ ಜನ!
ಹಣಕಾಸಿನ ಎಲ್ಲಾ ಹೊರೆಯನ್ನು ಮದ್ಯಪ್ರಿಯರ ಮೇಲೆ ಹೊರೆಸುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸುತ್ತಾ, ‘ನೋ… ನೋ… ಹಾಗಾಗಲ್ಲ, ಮದ್ಯದ ಬೆಲೆ ಹೆಚ್ಚಿಸುವ ಬಗ್ಗೆ ಮದ್ಯ ಪ್ರಿಯರು ಬೇಸರ ಆಗ್ತಾರೆ ಅಂತ ನನಗಂತೂ ಯಾರೂ ಬಂದು ಹೇಳಿಲ್ಲ. ನಿಮಗೆ ಯಾರಾದ್ರೂ ಹೇಳಿದ್ರೆ ಆ ಬಗ್ಗೆ ನಾನು ಮಾತಾಡ್ತೇನೆ’ ಎಂದು ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − nineteen =
Remember me
