ಬೆಂಗಳೂರು:ಅಶ್ಲೀಲ ವಿಡಿಯೋ ಸೋರಿಕೆಯಾಗುತ್ತಿದ್ದಂತೆ ನನ್ನದೇನು ತಪ್ಪಿಲ್ಲ ದೆಹಲಿಗೆ ಹೋಗಿ ಬಿಜೆಪಿ ವರಿಷ್ಠರನ್ನು ಭೇಟಿಯಾಗುತ್ತೇನೆಂದು ಹೇಳಿದ್ದ ಸಚಿವ ರಮೇಶ್​ ಜಾರಕಿಹೊಳಿ ಮಾಧ್ಯಮಗಳ ಕಣ್ತಪ್ಪಿಸಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.
ನಿನ್ನೆ ಹೇಳಿದಂತೆ ರಮೇಶ್​ ಜಾರಕಿಹೊಳಿ ರಾತ್ರಿಯೇ ದೆಹಲಿಗೆ ತೆರಳಬೇಕಿತ್ತು. ರಾತ್ರಿ ಹನ್ನೊಂದು ಗಂಟೆಯಿಂದ ಮನೆಯಿಂದ ಹೊರಟ ಜಾರಕಿಹೊಳಿ ಏರ್ಪೋರ್ಟ್​ ರಸ್ತೆಯಲ್ಲಿ ಮಾಧ್ಯಮಗಳ ಕಣ್ತಪ್ಪಿಸಿ ಎಸ್ಕೇಪ್​ ಆಗಿದ್ದಾರೆ.
ಇತ್ತ ಮನೆಗೂ ವಾಪಸ್​ ಬಂದಿಲ್ಲ. ಅತ್ತ ವಿಮಾನ ನಿಲ್ದಾಣದಲ್ಲೂ ಅವರ ಸುಳಿವಿಲ್ಲ. ಖಾಸಗಿ ಕಾರಿನಲ್ಲಿ ರಾತ್ರೋರಾತ್ರಿ ಅಜ್ಞಾತ ಸ್ಥಳಕ್ಕೆ ರಮೇಶ್​ ಜಾರಕಿಹೊಳಿ ತೆರಳಿದ್ದಾರೆನ್ನಲಾಗಿದೆ.
ಇದನ್ನೂ ಓದಿರಿ:ಲೈಂಗಿಕ ದಮನಿತರ ಪುನರ್ವಸತಿ ಎಂದು?; ಇಂದು ಲೈಂಗಿಕ ಕಾರ್ಯಕರ್ತರ ಹಕ್ಕುಗಳ ದಿನ
ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು ನಾನು ಯಾವ ತಪ್ಪೂ ಮಾಡಿಲ್ಲ. ತಪ್ಪಿತಸ್ಥ ಎಂದು ದೃಢಪಟ್ಟರೆ ಆಗ ರಾಜೀನಾಮೆಯ ಪ್ರಶ್ನೆ ಉದ್ಭವಿಸುತ್ತದೆ ಎಂದಿದ್ದಾರೆ. ರಾಸಲೀಲೆ ವಿಡಿಯೋ ಬಗ್ಗೆ ಸಮಗ್ರ ತನಿಖೆಯಾಗಲಿ ಎಂದು ಸಿಎಂಗೆ ಮನವಿ ಮಾಡುತ್ತೇನೆ. ಈ ಸುದ್ದಿ ಬಿತ್ತರವಾಗುವಾಗ ನಾನು ಮೈಸೂರಿನಲ್ಲಿದ್ದೆ. ನೋಡಿ ಆಶ್ಚರ್ಯವಾಯಿತು. ಪಾಪ, ಆ ದೃಶ್ಯಗಳಲ್ಲಿ ಇರುವ ಯುವತಿ ಯಾರು ಅಂತ ನನಗೆ ಗೊತ್ತಿಲ್ಲ. ದಿನೇಶ್ ಕಲ್ಲಹಳ್ಳಿ ಯಾರು ಅಂತಲೂ ಗೊತ್ತಿಲ್ಲ ಎಂದರು.
ನನ್ನ ಮೇಲಿನ ಆರೋಪ ಸಾಬೀತಾದರೆ ನಾನು ರಾಜಕೀಯದಿಂದಲೇ ನಿವೃತ್ತಿ ಹೊಂದುತ್ತೇನೆ. ಸಿಎಂ ಬಿಎಸ್​ವೈ ಭೇಟಿ ಮಾಡಿದ ಬಳಿಕ ದೆಹಲಿಗೆ ತೆರಳಿ ವರಿಷ್ಠರ ಜತೆ ಚರ್ಚೆ ನಡೆಸುತ್ತೇನೆಂದು ಹೇಳಿದ್ದರು.(ದಿಗ್ವಿಜಯ ನ್ಯೂಸ್​)
ರಾಸಲೀಲೆ ವಿಡಿಯೋ ಬಹಿರಂಗ: ಸಚಿವ ರಮೇಶ್ ಜಾರಕಿಹೊಳಿ ಮೊದಲ ಪ್ರತಿಕ್ರಿಯೆ

ಜಾರಕಿಹೊಳಿ ಸೆಕ್ಸ್ ಸಿಡಿ ಬಹಿರಂಗ: ಪಕ್ಷಕ್ಕೆ ತೀವ್ರ ಮುಜುಗರ ಆಗಿದೆ ಎಂದ ಪ್ರಲ್ಹಾದ್ ಜೋಶಿ

ಸೆಕ್ಸ್ ಸಿಡಿ ಬಹಿರಂಗವಾಗುತ್ತಿದ್ದಂತೆ ಇಕ್ಕಟ್ಟಿನಲ್ಲಿ ‘ಕಮಲ’, ಮೇಲಾಟಕ್ಕೆ ಮುಂದಾದ ‘ಕೈ’; ಉಭಯಪಕ್ಷಗಳಲ್ಲಿ ಭಾರಿ ರಾಜಕೀಯ ಸಂಚಲನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 15 =
Remember me
