ಬೆಂಗಳೂರು:ರಾಜ್ಯದಲ್ಲಿ ಮಳೆ ಹಾನಿ ಪರಿಹಾರಕ್ಕೆ 250 ಕೋಟಿ ರೂ. ಬಿಡುಗಡೆ ಮಾಡಿದ್ದು, ನಮ್ಮ ಸರ್ಕಾರ ದುಪ್ಪಟ್ಟು ನೆರವು ನೀಡುತ್ತಿದೆ ಎಂದು ಕಂದಾಯ ಸಚಿವ ಆರ್​.ಅಶೋಕ್​ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬೇರೆ ರಾಜ್ಯಗಳಿಗಿಂತ ಹೆಚ್ಚು ಹಣ ಕೊಟ್ಟಿದ್ದೇವೆ. ಎಲ್ಲ ರೀತಿಯ ಸವಲತ್ತು ಕೊಡುತ್ತೇವೆ. ಕೇಂದ್ರದ ನೆರವು ಬರುವವರೆಗೆ ನಾವೇ ಹಣ ನೀಡುತ್ತೇವೆ. ಹಣ ಬರುತ್ತಲೇ ಜಿಲ್ಲೆಗೆ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ಮಳೆಯ ಅವಾಂತರ ಹೆಚ್ಚಿದೆ. 820 ಮಿ.ಮೀ. ಮಳೆಯಾಗಿದೆ. ದಾವಣಗೆರೆ, ತುಮಕೂರು, ವಿಜಯಪುರ, ಮೈಸೂರು, ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳದಲ್ಲಿ ಅಧಿಕ ಮಳೆಯಾಗಿದೆ. ಒಟ್ಟು 27 ಜಿಲ್ಲೆಗಳು ಮಳೆ ಬಾಧಿತವಾಗಿವೆ. 24 ಗಂಟೆಯಲ್ಲಿ 20 ಜಿಲ್ಲೆಗಳಲ್ಲಿ ವರುಣಾಘಾತ ಉಂಟಾಗಿದ್ದು, ರಾಮನಗರ, ಮಂಡ್ಯದಲ್ಲಿ ಅಧಿಕ ಮಳೆಯಾಗಿದೆ. 29, 967 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೂನ್​ನಿಂದ ಇಲ್ಲಿಯವರೆಗೆ 96 ಮಂದಿ ಮೃತ ಪಟ್ಟಿದ್ದಾರೆ. 24 ಗಂಟೆಯೊಳಗೆ ರಾಮನಗರ, ಬಳ್ಳಾರಿಯಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. 993 ಮನೆಗಳ ಹಾನಿಯಾಗಿವೆ. 10, 274 ಅರ್ಧ ಮನೆ ಹಾನಿಯಾಗಿದೆ. ಸೋಮವಾರ ಒಂದೇ ದಿನ 184 ಮನೆಗೊಳಗಾಗಿವೆ ಎಂದರು.
95 ಸಂತ್ರಸರ ಶಿಬಿರ ಆರಂಭ:ಸಂತ್ರಸ್ಥರಿಗಾಗಿ 95 ಶಿಬಿರಗಳನ್ನು ಪ್ರಾರಂಭಿಸಿದ್ದೇವೆ. 9,244 ಜನ ಶಿಬಿರಗಳಲ್ಲಿದ್ದಾರೆ. ಸೋಮವಾರ 875 ಜನ ಶಿಬಿರ ಸೇರಿದ್ದಾರೆ. 5,84,000 ಹೆಕ್ಟೇರ್​ ಬೆಳೆ ನಾಶವಾಗಿದೆ. 24,099 ಮೂಲಸೌಕರ್ಯಗಳು ಹಾಳಾಗಿವೆ. 1,471 ಸೇತುವೆಗಳು ಹಾನಿಯಾಗಿವೆ. 499 ಕೆರೆಗಳು ಒಡೆದಿವೆ. 5 ಎನ್​ಡಿಆರ್​ಎ್​ ತಂಡ ನಿಯೋಜಿಸಿದ್ದೇವೆ. 23,790 ಮನೆಗಳಿಗೆ ಪರಿಹಾರಕ್ಕೆ ಶಿಫಾರಸ್ಸು ಮಾಡಿದ್ದೇವೆ. 5,80,000 ಹೆ. ಬೆಳೆ ನಾಶಕ್ಕೆ ಪರಿಹಾರ ಕೊಡಬೇಕಿದೆ. ಕೇಂದ್ರದಿಂದ 1,012 ಕೋಟಿ ಬರಬೇಕಿದೆ. ಎನ್​ಡಿಆರ್​ಎಫ್​ ಮಾರ್ಗಸೂಚಿಯಂತೆ 1012.05 ಕೋಟಿ ರೂ. ಬರಬೇಕಿದೆ. ನೆರವಿಗಾಗಿ ಕೇಂದ್ರಕ್ಕೆ ಶಿಫಾರಸು ಮಾಡಿದ್ದೇವೆ. ಶ್ರೀದಲ್ಲೇ ನೆರವು ದೊರೆಯುವ ನಿರೀೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೈಸೂರು ಹೆದ್ದಾರಿ ನೀರು ನಿಂತಿರುವ ಬಗ್ಗೆ ಸಂಬಂಧಪಟ್ಟವರ ಜತೆ ಮಾತುಕತೆ ನಡೆಸಲಾಗಿದೆ. ಸೋಮವಾರ ಮುಖ್ಯಮಂತ್ರಿಗಳೂ ಮಾತುಕತೆ ಮಾಡಿದ್ದಾರೆ. ನೀರು ಹರಿದು ಹೋಗಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.
ಕೆರೆ ನೀರಿಂದ ಹೆದ್ದಾರಿಯಲ್ಲಿ ಸಮಸ್ಯೆನಾವು ಮಾಜಿ ಸಿಎಂ ಕುಮಾರಸ್ವಾಮಿ ಜತೆ ಇದ್ದೇವೆ. ಮೈಸೂರು ಹೆದ್ದಾರಿ ಅವೈಜ್ಞಾನಿಕವಾಗಿ ಮಾಡಿಲ್ಲ. ಕೆರೆಯ ನೀರು ಬಂದಿರುವುದರಿಂದ ಸಮಸ್ಯೆಯಾಗಿದೆ. ಮಳೆಯ ಹೆಚ್ಚಳದಿಂದ ನೀರು ಇಂಗುತ್ತಿಲ್ಲ. ಮಂಡ್ಯ,ಮೈಸೂರು ಭಾಗದಲ್ಲಿ ಎಂಟತ್ತು ಅಡಿಗೆ ನೀರು ಬರುವ ಸ್ಥಿತಿ ನಿರ್ಮಾಣವಾಗಿದೆ ಎಂದರು. ರಾಜ್ಯದಲ್ಲಿ ಮುಂದಿನ ಮೂರ್ನಾಲ್ಕು ದಿನಗಳ ಕಾಲ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಮುಂಜಾಗ್ರತಾ ಕ್ರಮವಾಗಿ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಎಲ್ಲವನ್ನೂ ತೆಗೆದುಕೊಂಡಿದ್ದೇವೆ ಎಂದು ಸಚಿವ ಅಶೋಕ್​ ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − 3 =
Remember me
