ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಗೆ ಅಸಮಾಧಾನವಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಹೆಚ್ಚಾಗಿ ಮಾತನಾಡುವುದಿಲ್ಲ. ಆದರೆ ಯಾವುದೇ ಅಸಮಾಧಾನ ಅವರಲ್ಲಿ ಇಲ್ಲ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಭೇಟಿ ವೇಳೆ ಅಪಮಾನವಾಗಿಲ್ಲ. ಸಿಎಂ, ಡಿಸಿಎಂ ಅಧಿಕೃತ ಕಾರ್ಯಕ್ರಮ ಇದ್ದಾಗ ಶಾಸಕರು ಸ್ವಾಗತಕ್ಕೆ ಹೋಗುತ್ತಾರೆ. ಖಾಸಗಿ ಕಾರ್ಯಕ್ರಮಕ್ಕೆ ಹೋದಾಗ ಇರಬೇಕಿಲ್ಲ. ಸರ್ಕಾರಕ್ಕೆ ನಾಲ್ಕು ವರ್ಷ 7 ತಿಂಗಳು ಇದೆ. ಮುಂದೆಯೂ ನಾವೇ ಅಧಿಕಾರದಲ್ಲಿರುತ್ತೇವೆ ಎಂದು ಹೇಳಿದರು.
ಗುತ್ತಿಗೆದಾರರ ಮೇಲೆ ಐಟಿ ರೇಡ್ ವಿಚಾರವಾಗಿ ಡಿ.ಕೆ.ಶಿವಕುಮಾರ್ ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗಲೂ ಆಗಿರಲಿಲ್ಲವೆ? ಪ್ರಕರಣಗಳ ಬಗ್ಗೆ ನಾವು ತನಿಖೆಗೆ ಕೊಟ್ಟಿದ್ದೇವೆ. ನಾವು ಎಸ್‌ಐಟಿ ತನಿಖೆ ಮಾಡಿದ್ದೆವು. 40ಪರ್ಸೆಂಟ್ ತನಿಖೆಯನ್ನೂ ಮಾಡುತ್ತಿದ್ದೇವೆ. ಡಿಕೆಶಿ ಅಲ್ಲ ಮೊದಲು ಪ್ರತಿಪಕ್ಷದಲ್ಲಿರುವವರು ರಾಜೀನಾಮೆ ಕೊಡಬೇಕು ಎಂದು ರಾಮಲಿಂಗಾರೆಡ್ಡಿ ಟಾಂಗ್ ಕೊಟ್ಟರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 10 =
Remember me
