ವಿಜಯಪುರ:ಕರೊನಾಕ್ಕೆ ಯಾರೂ ಭಯ ಪಡಬೇಡಿ. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಕೆ ಹಾಗೂ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸಲಹೆ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕರೊನಾದೊಂದಿಗೆ ಬದುಕಲು ಕಲಿಯಬೇಕು. ಇದೂ ಕೂಡ ಇನ್ನುಮುಂದೆ ಸಾಮಾನ್ಯ ನೆಗಡಿ, ಜ್ವರ, ಶೀತದಂತೆ ಬಂದು ಹೋಗುತ್ತದೆ. ನಾವು ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಧೈರ್ಯದಿಂದ ಇರಬೇಕು ಎಂದು ಹೇಳಿದ್ದಾರೆ. ಅಲ್ಲದೆ, ಕರೊನಾ ಬಾರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತಾವೇನು ಮಾಡುತ್ತಿದ್ದಾರೆ ಎಂಬುದನ್ನೂ ಹೇಳಿದ್ದಾರೆ.
ಇದನ್ನೂ ಓದಿ:ಅರ್ಧದಿನದಲ್ಲಿ 122 ಹೊಸ ಕರೊನಾ ಕೇಸ್​​ಗಳು: ಇವತ್ತು ಈ ಜಿಲ್ಲೆಗೆ ಬಿಗ್​ ಶಾಕ್​…
ನಾನು ನನ್ನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕಳೆದ ಮೂರು ತಿಂಗಳಿಂದಲೂ ಬೆಳಗ್ಗೆ ಎದ್ದ ಕೂಡಲೇ ಬಿಸಿನೀರಿಗೆ ನಿಂಬೆಹಣ್ಣು, ಅರಿಶಿಣ ಮಿಶ್ರಣ ಮಾಡಿಕೊಂಡು ಕುಡಿಯುತ್ತಿದ್ದೇನೆ. ನೆಗಡಿ, ಜ್ವರ ಬಂದರೆ ವನಸ್ಫತಿ ಔಷಧಿ ಕುಡಿಯಿರಿ ಎಂದು ಮೊದಲು ಹಿರಿಯರು ಹೇಳುತ್ತಿದ್ದರು. ಅದೀಗ ಮತ್ತೆ ಮರುಕಳಿಸಿದೆ. ನಾನಂತೂ ಮೂರು ತಿಂಗಳಿಂದ ಚಹಾ ಸೇವನೆಯನ್ನೇ ಬಿಟ್ಟಿದ್ದೇನೆ. ಅದರ ಬದಲು ನಿಂಬೆಹಣ್ಣು, ಅರಿಶಿಣ, ಬಿಸಿನೀರಿನ ಮಿಶ್ರಣ ಕುಡಿಯುತ್ತಿದ್ದೇನೆ. ತುಳಸಿ, ಅರಿಶಿಣ, ದಾಲ್ಚಿನ್ನಿ ಮತ್ತಿತರ ಪದಾರ್ಥಗಳಿಂದ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಸಚಿವೆ ತಿಳಿಸಿದ್ದಾರೆ.
ಭಾರತೀಯರಿಗೆ ಕರೊನಾದಿಂದ ಯಾವುದೇ ತೊಂದರೆ ಇಲ್ಲ. ವಿದೇಶಿಗರಿಗೆ ರೋಗ ನಿರೋಧಕ ಶಕ್ತಿ ಇಲ್ಲದ ಕಾರಣ ಅಲ್ಲೆಲ್ಲ ಸಾವು-ನೋವುಗಳು ಹೆಚ್ಚಾಗುತ್ತಿವೆ. ನಮ್ಮಲ್ಲಿನ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಕರೊನಾ ವಿರುದ್ಧ ಹೋರಾಡೋಣ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ:VIDEO: ಜೀವವಿಲ್ಲದೆ ಮಲಗಿರುವ ಅಮ್ಮನ ಶವದ ಹೊದಿಕೆಯೊಂದಿಗೆ ಕಂದನ ಆಟ; ಮನಕಲಕುವ ದೃಶ್ಯ ಇದು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 6 =
Remember me
