ಬೆಂಗಳೂರು:ನಗರದ ಪ್ರತಿಷ್ಠಿತ ಕ್ಲಬ್​ವೊಂದರಲ್ಲಿ ನಟ ಸೃಜನ್​ ಲೋಕೇಶ್​ರ ಬೆಂಬಲಿಗರ ಮೇಲೆ ಸಚಿವ ವಿ.ಸೋಮಣ್ಣ ಅವರ ಪುತ್ರನ ಗ್ಯಾಂಗ್​ ದಾಂಧಲೆ ನಡೆಸಿದೆ. ಮಧ್ಯಪ್ರವೇಶಿಸಿದ ಸೋಮಣ್ಣ, ಮಾತುಕತೆ ನಡೆಸಿ ಗಲಾಟೆಯನ್ನ ನಿಲ್ಲಿಸಿದ್ದಾರೆ. ದೂರು ಕೊಡದಂತೆ ಒತ್ತಡ ಹಾಕಿದ್ದು, ಕ್ಲಬ್​ನ ಸಿಸಿಟಿವಿ ಫೂಟೇಜ್​ ಅನ್ನೂ ಡಿಲೀಟ್​ ಮಾಡಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಘಟನೆ ಸೋಮವಾರ ತಡರಾತ್ರಿ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಆದರೆ ಈ ಕುರಿತು ದಿಗ್ವಿಜಯ ನ್ಯೂಸ್​ಗೆ ಪ್ರತಿಕ್ರಿಯಿಸಿದ ಸಚಿವ ವಿ.ಸೋಮಣ್ಣ ಅವರ ಪುತ್ರ ಅರುಣ್​, ‘ಇದೊಂದು ರಾಜಕೀಯ ವಿರೋಧಿಗಳ ತಂತ್ರ, ಕಾಂಗ್ರೆಸ್​ನ ಪ್ರಿಯಕೃಷ್ಣ ಮತ್ತು ಇವರ ತಂದೆ ಕೃಷ್ಣಪ್ಪ ಅವರ ಪೂರ್ವ ನಿಯೋಜಿತ ತಂತ್ರ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ, ಅಂದು ಗಲಾಟೆಯೇ ನಡೆದಿಲ್ಲ. ಆ ಗಲಾಟೆ ವಿಷ್ಯಕ್ಕೂ ನನನೂ ಯಾವುದೇ ಸಂಬಂಧ ಇಲ್ಲ. ನಾನು ಅಲ್ಲಿಗೆ ಹೋಗಿಯೇ ಇಲ್ಲ. ರಾಜಕೀಯ ದುರುದ್ದೇಶದಿಂದ ನನ್ನ ತಂದೆಯ ತೇಜೋವಧೆಗೆ ಯತ್ನಿಸುತ್ತಿದ್ದಾರೆ. ಸೃಜನ್​ರನ್ನು ನಾನು ಅಂದು ಭೇಟಿಯೇ ಮಾಡಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆ ವಿರೋಧಿಗಳು ಇಲ್ಲಸಲ್ಲದ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.(ದಿಗ್ವಿಜಯ ನ್ಯೂಸ್​)
ಯಾರಾದ್ರು ಮೃತಪಟ್ಟರಷ್ಟೇ ಪೊಲೀಸರಿಗೆ ರಜೆ! ಅಸಮಾಧಾನ ಸ್ಫೋಟಗೊಳ್ತಿದ್ದಂತೆ ವಿವಾದಾತ್ಮಕ ಸುತ್ತೋಲೆ ವಾಪಸ್​

ನನ್ನನ್ನು ಮುಗಿಸಲು ಮುಧೋಳ-ಬೆಂಗಳೂರಿಂದ ಗ್ಯಾಂಗ್​ ಬಂದಿತ್ತು: ಹೊಸ ಬಾಂಬ್​ ಸಿಡಿಸಿದ ಯತ್ನಾಳ್​

ಪ್ರವೀಣ್​ ನೆಟ್ಟಾರು ಹತ್ಯೆ: ತಲೆಮರೆಸಿಕೊಂಡಿರುವ PFI ಸದಸ್ಯರ ಸುಳಿವು ಕೊಟ್ಟವರಿಗೆ ನಗದು ಬಹುಮಾನ ಘೋಷಿಸಿದ NIA

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 3 =
Remember me
