ತುಮಕೂರು: ನಾವು ಎಸ್​ (ಸೋಮಶೇಖರ್ ) ಬಿ (ಬೈರತಿ ಬಸವರಾಜ್​) ಎಂ (ಮುನಿರತ್ನ) ಒಂದಾಗಿದ್ದೇವೆ. ಹಿಂದೆ ಹೇಗೆ ಎಸ್​ಬಿಎಂ ಆಗಿದ್ದೆವೋ ಈಗಲೂ ಹಾಗೆಯೇ ಎಸ್​ಬಿಎಂ ಆಗಿಯೇ ಇರುತ್ತೇವೆ. ಮುಂದುವರಿಯುತ್ತೇವೆ. ನಮ್ಮೊಳಗೆ ಭಿನ್ನಾಭಿಪ್ರಾಯ ಇಲ್ಲ ಎಂದು ಸಹಕಾರ ಸಚಿವ ಎಸ್​.ಟಿ.ಸೋಮಶೇಖರ್ ಹೇಳಿದ್ದಾರೆ.
ಅವರು ಸೋಮವಾರ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು. ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ್ದು, ಮುನಿರತ್ನ ಮತ್ತು ನಮ್ಮ ನಡುವೆ ಯಾವುದೇ ಅಂತರ ಇಲ್ಲ. ಸಚಿವಸ್ಥಾನ ಕೊಡೋದು ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದ್ದು ಅವರು ವಿವೇಚನಾಯುತವಾಗಿ ಅದನ್ನು ನಿರ್ವಹಿಸುವ ವಿಶ್ವಾಸವಿದೆ.
ಇದನ್ನೂ ಓದಿ:ಚುನಾವಣೆ ಸೋತವರಿಗೆ ಸಚಿವ ಸ್ಥಾನ ನೀಡೋದಾದ್ರೆ ಜನ ನಮ್ಮನ್ನು ಯಾಕೆ ಆರಿಸಬೇಕು? – ರೇಣುಕಾಚಾರ್ಯ ಪ್ರಶ್ನೆ
ಸ್ಥಿರ ಸರ್ಕಾರಕ್ಕೋಸ್ಕರ ಈ ಹಿಂದೆ ಹಿಂದೆ ನಾವಿಬ್ಬರು ಚುನಾವಣೆಗೆ ನಿಂತಿದ್ವಿ ಅದಕ್ಕೆ ಎಸ್ ಬಿ ಅಂದ್ರು. ಈಗ ಮುನಿರತ್ನ ಬಂದಿದ್ದಾರೆ ಪುನಃ ಎಸ್ ಬಿ ಎಮ್ ಆಗಿದ್ದೇವೆ. ಮುಖ್ಯಮಂತ್ರಿಗಳು ನುಡಿದಂತೆ ನಡೆದಿದ್ದಾರೆ. ಸಚಿವ ಸಂಪುಟ ವಿಸ್ತರಣೆಯೋ ಪುನಾರಚನೆಯೋ ಗೊತ್ತಿಲ್ಲ. ಈಗತಾನೆ ಬಿಜೆಪಿಗೆ ಎಂಟ್ರಿ ಆಗಿದ್ದೇವೆ ಅದೆಲ್ಲಾ ಹೇಳ್ತಾರಾ..? ಎಂದು ಸೋಮಶೇಖರ್ ಸುದ್ದಿಗಾರರಿಗೇ ಮರುಪ್ರಶ್ನೆ ಹಾಕಿದರು. (ದಿಗ್ವಿಜಯ ನ್ಯೂಸ್)
ಯಾರು ಈ ತಾರಕಿಶೋರ್ ಪ್ರಸಾದ್ ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 6 =
Remember me
