ಬೆಂಗಳೂರು:ಡಾಕ್ಟರ್ ‘ಆರೋಗ್ಯ’ ಚೆನ್ನಾಗಿ ನೋಡಿಕೊಳ್ತಾರೆ. ಹೀಗೆಂದು ಸಚಿವ ಬಿ.ಶ್ರೀರಾಮುಲು ಸಮಾಧಾನದ ಮಾತು ಹೇಳಿದಂತೆ ಕಂಡರೂ, ಅದರ ಹಿಂದೊಂದು ಕೊಂಕು ಇದೆ ಎಂಬ ಮಾತು ಕೇಳಿಬಂದಿದೆ.
ಸಿಎಂ ಅಧಿಕೃತ ನಿವಾಸದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜತೆಗೆ ಮಂಗಳವಾರ ಬೆಳಗ್ಗೆ ಚರ್ಚೆ, ಸಚಿವ ಸಹೋದ್ಯೋಗಿಯೊಂದಿಗೆ ವಿಚಾರ ವಿನಿಮಯ ನಡೆಸಿ ಖುಷಿ ಖುಷಿಯಾಗಿ ಹೊರ ಬಂದ ರಾಮುಲು ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಸಮಾಜ ಕಲ್ಯಾಣ ಖಾತೆ ಒಪ್ಪಿಕೊಂಡಿರುವೆ, ಖಾತೆ ಬದಲಾಗಿದ್ದಕ್ಕೆ ಅಸಮಾಧಾನ, ಬೇಸರವಿಲ್ಲ. ಈ ಹಿಂದೆ ನಾನು ಹೇಳಿದ್ದನ್ನು ಸಿಎಂ ಈಗ ಕೊಟ್ಟಿದ್ದಾರೆ ಸಂತೋಷವಾಗಿದೆ. ಎಸ್ಸಿ-ಎಸ್ಟಿ ಜನರಿಗಾಗಿ ಒಳ್ಳೆಯದು ಮಾಡಿ, ಹೆಚ್ಚಿನ ಅನುಕೂಲ ಕಲ್ಪಿಸಿ ಎಂಬ ಸೂಚನೆ ಪಾಲಿಸುವೆ ಎಂದರು.
ಇದನ್ನೂ ಓದಿ:ಖಾತೆ ಬದಲಾವಣೆ ವಿಚಾರ: ಶ್ರೀರಾಮುಲುಗೆ ಸಿಎಂ ಭೇಟಿಗೆ ಕೊನೆಗೂ ಸಿಕ್ತು ಅವಕಾಶ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಒಬ್ಬರೇ ನಿರ್ವಹಿಸಲೆಂದು ಸಿಎಂ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಮೇಲತ್ತಾಗಿ ಸೋದರ ಕೆ.ಸುಧಾಕರ್ ಡಾಕ್ಟರ್ ಇದ್ದಾರೆ ಆರೋಗ್ಯ ಚೆನ್ನಾಗಿ ನೋಡಿಕೊಳ್ತಾರೆ. ಈ ಹಿಂದೆ ಒಟ್ಟಿಗೆ ಸಮರ್ಥವಾಗಿ ಕರೊನಾ ಸಂಕಷ್ಟ ನಿಭಾಯಿಸಿದ್ದೇವೆ. ಅಸಮರ್ಥತೆ ಪ್ರಶ್ನೆಯೇ ಉದ್ಭವಿಸದು ಎಂದು ಶ್ರೀರಾಮುಲು ತಳ್ಳಿ ಹಾಕಿದರು.
ಇದನ್ನೂ ಓದಿ:ಖಾತೆ ಕಿತ್ತುಕೊಂಡ ಬೆನ್ನಲ್ಲೇ ಖಾಸಗಿ ಕಾರನ್ನೇರಿ ಶ್ರೀರಾಮುಲು ಹೊರಟದ್ದೆಲ್ಲಿಗೆ?
ರಾಮುಲು ಹಿರಿಯಣ್ಣಇದೇ ವೇಳೆ ಸಚಿವ ಡಾ.ಕೆ.ಸುಧಾಕರ್ ಮಾತನಾಡಿ, ಶ್ರೀರಾಮುಲು ನನಗೆ ಹಿರಿಯಣ್ಣ. ಹೆಚ್ಚು-ಕಡಿಮೆ ಪ್ರಮೇಯವೇ ಇಲ್ಲ. ದೊಡ್ಡ ಜವಾಬ್ದಾರಿಯನ್ನು ಸಿಎಂ ಅವರಿಗೆ ನೀಡಿದ್ದಾರೆ. ಆರೋಗ್ಯ ಮತ್ತು ವೈದ್ಯಕೀಯ ಇಲಾಖೆಗಳ ಮಧ್ಯೆ ಸಮನ್ವಯ ಸಾಧಿಸಿ ಉತ್ತಮವಾಗಿ ಹೊಣೆಗಾರಿಕೆ ನಿಭಾಯಿಸಬೇಕೆಂಬ ನಮ್ಮ ನಾಯಕ ಬಿಎಸ್ ವೈ ಸಲಹೆಯನ್ನು ಶಿರಸಾಪಾಲಿಸುವೆವು. ಈ ಹಿಂದೆಯೂ ರಾಮುಲು ಅಣ್ಣ ಮತ್ತು ನಾನು ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸಿದ್ದೇವೆ ಎಂದು ಸುಧಾಕರ್ ಸ್ಪಷ್ಟಪಡಿಸಿದರು.
ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಕಾಂಗ್ರೆಸ್ ಮುಖಂಡರ ಸಂಚು: ಆರೋಪ ಪಟ್ಟಿ ಸಲ್ಲಿಸಿದ ಸಿಸಿಬಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
