ದಾವಣಗೆರೆ:ರಾಜ್ಯದಲ್ಲಿ ಅನಧಿಕೃತ ಗಣಿ ಹಾಗೂ ಮರಳುಗಾರಿಕೆಗೆ ನಿಯಂತ್ರಣ ಹೇರುವ ಮೂಲಕ ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ತರಲು ಪ್ರಯತ್ನಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಈ ಸಂಬಂಧ ಈಗಾಗಲೇ ಒಂದು ಸುತ್ತು ಅಧಿಕಾರಿಗಳ ಸಭೆ ನಡೆಸಿ ಅಕ್ರಮಕ್ಕೆ ಅವಕಾಶ ನೀಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ದಾವಣಗೆರೆಯಲ್ಲಿ ಬುಧವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಇದನ್ನೂ ಓದಿ:ಪ್ರಧಾನಿ ಮೋದಿ ಕಲಿತ ಶಾಲೆಗೆ ಅಧ್ಯಯನ ಪ್ರವಾಸ; ಪ್ರತಿ ಜಿಲ್ಲೆಯಿಂದ 2 ವಿದ್ಯಾರ್ಥಿಗಳಿಗೆ ಅವಕಾಶ!
ನಿಯಮಿತ ಪರಿಶೀಲನೆ ಮೂಲಕ ಗಣಿಗುತ್ತಿಗೆ ಪ್ರದೇಶಗಳಲ್ಲಿ ಒತ್ತುವರಿ ತಡೆಗೆ ಹಾಗೂ ಅಕ್ರಮ ಸಾಗಣೆಗೆ ಕಡಿವಾಣ ಹಾಕಲು ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಹೊಸ ಮರಳು ನೀತಿ ಜಾರಿಗೊಳಿಸುವ ಉದ್ದೇಶವಿದೆಯೇ ಎಂಬ ಪ್ರಶ್ನೆಗೆ, ಅಂತಹ ಯಾವುದೇ ಪ್ರಸ್ತಾವನೆ ಇಲ್ಲ. ಸರ್ಕಾರಕ್ಕೆ ಆದಾಯ ಬರಬೇಕು, ಜನರಿಗೂ ಒಳ್ಳೆಯದಾಗಬೇಕು ಎಂಬ ನಿಟ್ಟಿನಲ್ಲಿ ಮಾತ್ರ ನಮ್ಮ ಚಿಂತನೆ. ಕೆಲವು ಕಡೆ ಅರಣ್ಯ ಭೂಮಿ, ಇನ್ನೂ ಕೆಲ ಕಡೆ ಪರಿಸರಕ್ಕೆ ಧಕ್ಕೆ ತರುವ ಸ್ಥಳಗಳಲ್ಲಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಇದನ್ನೆಲ್ಲ ಗಮನಿಸಿ ಸರಿ ದಾರಿಗೆ ತರಬೇಕಿದೆ ಎಂದರು.
ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಒಂದೇ ಬಾರಿ ಜಾರಿಗೆ ತರಲು ಆಗುವುದಿಲ್ಲ. ಸಾಧಕ, ಬಾಧಕಗಳ ಕುರಿತು ಚರ್ಚಿಸಿ ಹಂತ ಹಂತವಾಗಿ ಅನುಷ್ಠಾನಕ್ಕೆ ತರಬೇಕಾಗುತ್ತದೆ. ನಿರುದ್ಯೋಗಿ ಪದವೀಧರರಿಗೆ 3 ಸಾವಿರ ರೂ. ಕೊಡುವ ವಿಚಾರವಿದೆ. ಆದರೆ ಡಿಗ್ರಿ ಮುಗಿಸಿ ಮೂರು ತಿಂಗಳಲ್ಲಿ ಕೆಲಸ ಸಿಕ್ಕರೆ ಹೇಗೆ ತಿಳಿಯುತ್ತದೆ? ಎರಡೆರಡು ಕಡೆ ಹಣ ಜಮಾ ಆಗಬಾರದು. ಹೀಗೆ ಒಂದಷ್ಟು ನ್ಯೂನತೆಗಳಿವೆ. ಅದಕ್ಕೆ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗುತ್ತಿದೆ. ಉಚಿತ ವಿದ್ಯುತ್ ನೀಡುವ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೇವೆ. 12 ತಿಂಗಳ ಸರಾಸರಿ ಮೇಲೆ ಶೇ. 10 ಹೆಚ್ಚಿಗೆ ಕೊಡಲಾಗುವುದು ಎಂದು ಹೇಳಿದರು.
ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ಬಿಲ್‌ಗಳಿಗೆ ತಡೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಲ್ಲಿಕಾರ್ಜುನ್ ಹೇಳಿದರು.
ಇದನ್ನೂ ಓದಿ:1.6 ಕೋಟಿ ರೂ. ತೆರಿಗೆ ಪಾವತಿಸುವಂತೆ 23 ಬಾರಿ ನೋಟಿಸ್‌; ಕಂಗಾಲಾದ ರೈತ!
ಈ ಹಿಂದೆ ನಾನೇ ಸಚಿವನಾಗಿದ್ದಾಗ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ಬಂದಿತ್ತು. ಎಲ್ಲಿ ರಸ್ತೆ, ಹಳ್ಳ, ಚರಂಡಿ ಇವೆ ಎಂಬುದು ಇದುವರೆಗೆ ಆಡಳಿತ ನಡೆಸಿದವರಿಗೆ ಗೊತ್ತಿಲ್ಲ. ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತು ತೀರ್ಮಾನ ಮಾಡಿದರೆ ಅಭಿವೃದ್ಧಿ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದರು.
ನಗರದ ಹಳೇ ಬಸ್ ನಿಲ್ದಾಣಕ್ಕೆ ನಾನು ಮಾಡಿದ್ದ ಯೋಜನೆಯೇ ಬೇರೆ, ಈ ಹಿಂದಿನವರ ಅವಧಿಯಲ್ಲಿ ಆಗಿರುವ ಪ್ಲ್ಯಾನ್ ಬೇರೆಯಾಗಿದೆ. 30 ಬಸ್ಸುಗಳು ನಿಲ್ಲುತ್ತಿದ್ದ ಜಾಗದಲ್ಲಿ ಈಗ 4 ಬಸ್ ನಿಲ್ಲುವುದಕ್ಕೂ ಆಗುವುದಿಲ್ಲ. ಕೆ.ಆರ್. ಮಾರುಕಟ್ಟೆಯನ್ನು ತರಾತುರಿಯಲ್ಲಿ ಉದ್ಘಾಟನೆ ಮಾಡಿದರು. ಸಾರ್ವಜನಿಕ ಸ್ಥಳಗಳಿಗೆ ಹೆಸರಿಡುವಾಗ ಅವರ ಕೊಡುಗೆ ಏನು ಎಂದು ನೋಡಬೇಕಾಗುತ್ತದೆ. ಆದರೆ ಮನಬಂದಂತೆ ಯಾರದೋ ಹೆಸರಿಡಲಾಗಿದೆ. ರಾತ್ರೋ ರಾತ್ರಿ ಬೋರ್ಡ್‌ಗಳನ್ನು ಬದಲಾಯಿಸುವುದು. ಒಂದು ರೀತಿಯಲ್ಲಿ ತುಘಲಕ್ ದರ್ಬಾರ್ ನಡೆದಿತ್ತು ಎಂದು ಟೀಕಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
