ಬೆಂಗಳೂರು:ರೈತರು ಬೆಳೆದ ಯಾವುದೇ ಉತ್ಪನ್ನಗಳನ್ನ ಮಾರುಕಟ್ಟೆಗೆ ತರಲು ಅಡ್ಡಿಪಡಿಸದಂತೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸಾಲ ವಸೂಲಾತಿಗಾಗಿ ನೋಟಿಸ್ ಜಾರಿ ಮಾಡದಂತೆ ಮತ್ತು ಕೂಡಲೆ ಹೊಸ ಸಾಲ ನೀಡುವಂತೆ ಆದೇಶಿಸಲಾಗಿದ್ದು, ಬೆಂಬಲ ಬೆಲೆಯಲ್ಲಿ ತರಕಾರಿ ಖರೀದಿ ಮಾಡುವ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ದಿಗ್ವಿಜಯ ನ್ಯೂಸ್ 24ಗಿ7 ಹಾಗೂ ವಿಜಯವಾಣಿ ಫೋನ್-ಇನ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಪಿಎಂಸಿಗಳಲ್ಲಿ ಸಮಸ್ಯೆಗಳಾದರೆ, ರೈತರಿಗೆ ಮೋಸ ಮಾಡಿದರೆ ಗಮನಕ್ಕೆ ತಂದ ತಕ್ಷಣವೇ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಪ್​ಕಾಮ್್ಸ ಮೂಲಕ ತರಕಾರಿ ಖರೀದಿ ಮತ್ತು ವಿಲೇವಾರಿಗೂ ವ್ಯವಸ್ಥೆ ಮಾಡಲಾಗಿದೆ. ರೈತರಿಗೆ ತೊಂದರೆ ನೀಡದಂತೆ ಪೊಲೀಸ್ ಇಲಾಖೆಗೂ ನಿರ್ದೇಶನಗಳನ್ನು ನೀಡಲಾಗಿದೆ ಎಂದರು.
ಮುಂಗಾರು ಹಂಗಾಮಿಗೆ ಅಗತ್ಯವಿರುವ 1,58,939 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನು ಮಾಡಲಾಗಿದೆ. ಕಾಪು ದಾಸ್ತಾನು ಯೋಜನೆಯಲ್ಲಿ 1.10 ಲಕ್ಷ ಟನ್ ಗೊಬ್ಬರ ಖರೀದಿ ಮಾಡಲು ಕಂಪನಿಗಳಿಗೆ ಹಣ ಪಾವತಿ ಮಾಡಲಾಗಿದೆ ಎಂದು ತಿಳಿಸಿದರು.
5 ಕ್ವಿಂಟಾಲ್ ಹೆಚ್ಚುವರಿ ತೊಗರಿ:ಕೇಂದ್ರದಿಂದ ಅನುಮತಿ ಸಿಕ್ಕ ಹಿನ್ನೆಲೆಯಲ್ಲಿ ಪ್ರತಿ ರೈತರಿಂದ 5 ಕ್ವಿಂಟಾಲ್ ಹೆಚ್ಚುವರಿ ತೊಗರಿ ಖರೀದಿ ಮಾಡಲಾಗುವುದು. ಈ ಹಿಂದೆ ಪ್ರತಿ ಕ್ವಿಂಟಾಲ್​ಗೆ 6100 ರೂ. ಬೆಂಬಲ ಬೆಲೆಯಲ್ಲಿ ಒಬ್ಬರಿಗೆ 10 ಕ್ವಿಂಟಾಲ್​ನಂತೆ, 2,84,813 ರೈತರಿಂದ 1,568.586 ಕೋಟಿ ರೂ. ಮೌಲ್ಯದ 25,71,440 ಕ್ವಿಂಟಾಲ್ ತೊಗರಿ ಖರೀದಿ ಮಾಡಲಾಗಿತ್ತು. ನಾಫೆಡ್​ನಿಂದ 963 ಕೋಟಿ ರೂ. ಬಿಡುಗಡೆಯಾಗಿದ್ದು, 752.46 ಕೋಟಿ ರೂ. ಪಾವತಿ ಮಾಡಲಾಗಿದೆ ಎಂದು ಸೋಮಶೇಖರ್ ತಿಳಿಸಿದರು.
ಕೇರಳಕ್ಕೆ ನಿತ್ಯ ತರಕಾರಿ:ರಾಜ್ಯದ ಗಡಿಯಲ್ಲಿದ್ದ ಸಮಸ್ಯೆಯನ್ನು ಸದ್ಯ ಬಗೆಹರಿಸಲಾಗಿದ್ದು, ಅಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ರಾಜ್ಯದ ನಮ್ಮ ರೈತರು ಬೆಳೆದ ತರಕಾರಿಯನ್ನು ನಿತ್ಯವೂ ಕೇರಳಕ್ಕೆ ಕಳುಹಿಸಿಕೊಡಲಾಗುತ್ತಿದೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.
ಖರೀದಿ ವಿಸ್ತರಣೆ
ಪ್ರತಿ ಕ್ವಿಂಟಾಲ್​ಗೆ 4875 ರೂ.ನಂತೆ 31,890 ರೈತರಿಂದ 135.92 ಕೋಟಿ ಬೆಲೆಯ 2.78 ಲಕ್ಷ ಕ್ವಿಂಟಾಲ್ ಕಡ್ಲೆ ಖರೀದಿಸಲಾಗಿದೆ. ಖರೀದಿ ದಿನಾಂಕವನ್ನು ಮೇ 12ಕ್ಕೆ ವಿಸ್ತರಿಸಲಾಗಿದೆ. 66,800 ಮೆಟ್ರಿಕ್ ಟನ್ ಶೇಂಗಾ ಖರೀದಿಗೆ ಕೇಂದ್ರದ ಅನುಮೋದನೆ ಸಿಕ್ಕಿದ್ದು, ಪ್ರತಿ ಕ್ವಿಂಟಾಲ್​ಗೆ 5090 ರೂ.ನಂತೆ 3176 ರೈತರಿಂದ 38,223 ಕ್ವಿಂಟಾಲ್ ಖರೀದಿಸಲಾಗಿದೆ. ಒಬ್ಬರಿಂದ 40 ಕ್ವಿಂಟಾಲ್​ನಂತೆ 22,933 ರೈತರಿಂದ 91.70 ಕೋಟಿ ರೂ. ಮೊತ್ತದ 5.03 ಕ್ವಿಂಟಾಲ್ ಭತ್ತ ಖರೀದಿಸಿದ್ದು, 68.96 ಕೋಟಿ ರೂ. ಪಾವತಿ ಮಾಡಲಾಗಿದೆ. ಕ್ವಿಂಟಾಲ್​ಗೆ 3150 ರೂ. ಬೆಲೆಯಲ್ಲಿ 60,649 ರೈತರಿಂದ 399.85 ಕೋಟಿ ರೂ. ಬೆಲೆಯ 12.59 ಲಕ್ಷ ಕ್ವಿಂಟಾಲ್ ರಾಗಿ ಖರೀದಿ ಮಾಡಲಾಗಿದ್ದು, 35,173 ರೈತರಿಗೆ 201.86 ಕೋಟಿ ರೂ. ಪಾವತಿಯಾಗಿದೆ ಎಂದು ಸೋಮಶೇಖರ್ ವಿವರಿಸಿದರು.
ಎಪಿಎಂಸಿ ವಿವರ
ಲಾಕ್​ಡೌನ್ ಬಳಿಕ ಏ.3ರಿಂದ ಎಪಿಎಂಸಿ ಮಾರುಟ್ಟೆಗೆ ಬಂದ ತರಕಾರಿ, ಈರುಳ್ಳಿ, ಆಲೂಗಡ್ಡೆ, ಹಣ್ಣುಗಳು, ಅಕ್ಕಿ, ಗೋಧಿ, ಜೋಳ, ದ್ವಿದಳ ಧಾನ್ಯ ಸೇರಿ ಎಲ್ಲವನ್ನೂ ಖರೀದಿ ಮಾಡಲಾಗಿದೆ. ತರಕಾರಿ ಹೊರತುಪಡಿಸಿ ಅಕ್ಕಿ, ಗೋಧಿ, ಸಕ್ಕರೆ, ದವಸ ಧಾನ್ಯಗಳು ಏ.20ರ ತನಕ ಸಾಕಾಗುವಷ್ಟು ದಾಸ್ತಾನಿದೆ ಎಂದು ಸಹಕಾರ ಸಚಿವರು ವಿವರ ನೀಡಿದರು.
ಸಾಲ ಮನ್ನಾ ವಿವರ
ಸಹಕಾರ ಬ್ಯಾಂಕ್​ಗಳ ಮೂಲಕ 19.14 ಲಕ್ಷ ಅರ್ಜಿಗಳು ಸ್ವೀಕೃತವಾಗಿದ್ದು, ಅದರಲ್ಲಿ ಅರ್ಹವಾದ 16.01 ಲಕ್ಷ ರೈತರಿಗೆ 7434.21 ಕೋಟಿ ರೂ. ಸಾಲಮನ್ನಾ ಮಾಡಲಾಗಿದೆ. 15.70 ಲಕ್ಷ ರೈತರಿಗೆ 7283.21 ಕೋಟಿ ರೂ. ಜಮಾ ಮಾಡಲಾಗಿದೆ. ಬಾಕಿ ಇರುವ 1.41 ಲಕ್ಷ ರೈತರು ಸೂಕ್ತ ದಾಖಲಾತಿ ನೀಡದೆ ಇರುವ ಕಾರಣ ಅವರಿಗೆ ಹಣ ಬಿಡುಗಡೆ ಆಗಿಲ್ಲ. ಕೂಡಲೆ ದಾಖಲೆ ನೀಡುವಂತೆ ಸೂಚಿಸಲಾಗಿದೆ ಎಂದ ಸೋಮಶೇಖರ್, ರಾಷ್ಟ್ರೀಕೃತ ಬ್ಯಾಂಕ್​ಗಳಿಗೆ ಸಂಬಂದಿಸಿದಂತೆ 16.50 ಲಕ್ಷ ಅರ್ಜಿಗಳು ಸ್ವೀಕೃತವಾಗಿವೆ. 9.40 ಲಕ್ಷ ರೈತರಿಗೆ 6869 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇನ್ನು 4.25 ಲಕ್ಷ ಅರ್ಜಿಗಳು ಸಹಕಾರ ಬ್ಯಾಂಕ್ ಮತ್ತು ರಾಷ್ಟ್ರೀಕೃತ ಬ್ಯಾಂಕ್ ಎರಡೂ ಕಡೆಯಲ್ಲಿ ಸಲ್ಲಿಕೆ ಮಾಡಿದ್ದರಿಂದ ತಿರಸ್ಕೃತವಾಗಿವೆ. 1.50 ಲಕ್ಷ ಅರ್ಜಿ ಸ್ವಯಂ ಧೃಢೀಕರಣ ಇಲ್ಲದೆ ತಿರಸ್ಕೃತವಾಗಿವೆ ಎಂದರು.
ರಮಜಾನ್ ಮಾಸ: ಈ ಬಾರಿ ಮಸೀದಿ, ದರ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಇಲ್ಲ, ಭೋಜನ ಕೂಟಗಳಿಗೂ ನಿರ್ಬಂಧ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
