ಆಡಳಿತ ಭಾಷೆಯಾಗಿ ಕನ್ನಡವನ್ನು ಸಂಪೂರ್ಣವಾಗಿ ಜಾರಿಗೆ ತರಲು ಸರ್ಕಾರ ಕಟಿಬದ್ಧವಾಗಿದೆ. ಮುಖ್ಯಮಂತ್ರಿಯವರು ಕೂಡ ಇಚ್ಛಾಶಕ್ತಿ ಪ್ರದರ್ಶಿಸುವ ಭಾಗವಾಗಿಯೇ ವಿಧೇಯಕದ ಪರವಾಗಿದ್ದಾರೆ. ಒಮ್ಮೆ ವಿಧೇಯಕ ಒಪ್ಪಿಗೆ ಪಡೆದಲ್ಲಿ ಅದು ಕಾನೂನು ಆಗಲಿದೆ. ಆಗ ಎಲ್ಲ್ಲ ಹಂತಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಜಾರಿಗೊಳಿಸಲು ಅಸ್ತ್ರ ಸಿಗಲಿದೆ. ದಂಡನೆಗೂ ಅವಕಾಶ ಇರುವುದರಿಂದ ಯಾರೂ ಕಾನೂನು ವಿರುದ್ಧ ಹೋಗಲಾರರು ಎಂಬ ಭರವಸೆ ಇದೆ. ಕೇಂದ್ರೀಯ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಲು ಹಾಗೂ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಕನ್ನಡಿಗರ ನೇಮಕಕ್ಕೂ ಅವಕಾಶ ಸಿಗಲಿದೆ. ನ್ಯಾಯಾಲಯಗಳಲ್ಲೂ ಕನ್ನಡ ಬಳಕೆಗೆ ಪ್ರಯತ್ನಿಸಿ ಸಫಲರಾಗಲಿದ್ದೇವೆ ಎಂದು ಸಚಿವ ಸುನೀಲ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಆಡಳಿತದ ಎಲ್ಲಾ ಹಂತಗಳಲ್ಲೂ ಕನ್ನಡ ಅನುಷ್ಠಾನ ಸೇರಿದಂತೆ ನಾಡು-ನುಡಿ ವಿಚಾರದಲ್ಲಿ ಕನ್ನಡಿಗರು ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೆ ಉದ್ದೇಶಿತ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವು ಪರಿಹಾರ ಒದಗಿಸಲಿದೆ ಎಂದು ಕನ್ನಡ-ಸಂಸ್ಕೃತಿ ಸಚಿವ ವಿ.ಸುನೀಲ್​ಕುಮಾರ್ ತಿಳಿಸಿದರು. ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ‘ವಿಜಯವಾಣಿ’ ಕಚೇರಿಯಲ್ಲಿ ನಡೆದ ಸಂವಾದದಲ್ಲಿ, ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ವಿಧೇಯಕಕ್ಕೆ ಒಪ್ಪಿಗೆ ಸಿಗಲಿದೆ. ಇದರ ಬೆನ್ನಲ್ಲೇ ವಿಧೇಯಕ ಜಾರಿಗೆ ಅನುಷ್ಠಾನ ಸಮಿತಿ ರಚಿಸಲಾಗುವುದು ಎಂದು ಸ್ಪಷ್ಟ ಭರವಸೆ ನೀಡಿದರು. ರಾಜ್ಯ ಸರ್ಕಾರ ವಿಧೇಯಕವನ್ನು ಈಗಾಗಲೇ ಅಧಿವೇಶನದಲ್ಲಿ ಮಂಡಿಸಿ ಸಾರ್ವಜನಿಕ ವೇದಿಕೆಯಲ್ಲಿ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ. ಕನ್ನಡಪರ ಸಂಘ ಸಂಸ್ಥೆಗಳು ಹಾಗೂ ಎಲ್ಲ ಕನ್ನಡಿಗರು ಸೂಚಿಸುವ ಸಕಾರಾತ್ಮಕ ಅಂಶಗಳನ್ನು ತಿದ್ದುಪಡಿ ರೂಪದಲ್ಲಿ ವಿಧೇಯಕದಲ್ಲಿ ಸೇರ್ಪಡೆ ಮಾಡಲಾಗುವುದು. ಕನ್ನಡ ಸಾಹಿತ್ಯ ಪರಿಷತ್ ಸಲ್ಲಿಸಿರುವ ಶಿಫಾರಸುಗಳನ್ನೂ ಪರಿಗಣಿಸಲಾಗುವುದು ಎಂದರು.
ನಾಡಗೀತೆ ಧಾಟಿ ನಿಗದಿ:ನಾಡಗೀತೆ ಕುರಿತು ಇದ್ದ ವಿವಾದವನ್ನು 18 ವರ್ಷಗಳ ನಂತರ ಸರ್ಕಾರ ಬಗೆಹರಿಸಿದೆ. ಮೈಸೂರು ಅನಂತಸ್ವಾಮಿ ಅವರ ಧಾಟಿಯಲ್ಲಿ 2 ನಿಮಿಷ 30 ಸೆಕೆಂಡ್ ಇರಬೇಕು ಎಂದು ಸ್ಪಷ್ಟಪಡಿಸಲಾಗಿದೆ. ಈ ಹಿಂದಿನ ಸರ್ಕಾರಗಳು ರಚಿಸಿದ್ದ ಮೂರು ಸಮಿತಿಗಳಲ್ಲೂ ನಾಡಗೀತೆ ಧಾಟಿ ಮತ್ತು ಕಾಲಮಿತಿ ಕುರಿತು ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಈಗಿನ ಸಮಿತಿಯಲ್ಲಿದ್ದ ಎಲ್ಲ 18 ಸದಸ್ಯರು ಏಕಾಭಿಪ್ರಾಯದಿಂದ ನೀಡಿರುವ ಶಿಫಾರಸನ್ನು ಪರಿಗಣಿಸಲಾಗಿದೆ. ಈ ವಿಚಾರವಾಗಿ ನ್ಯಾಯಾಲಯಕ್ಕೆ ಹೋಗಲು, ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರೂ ಸರ್ವ ಸ್ವತಂತ್ರರು. ಆದರೆ ಈಗಿನದು ಸರ್ಕಾರದ ತೀರ್ವನವಲ್ಲ. ಸಮಿತಿ ಸದಸ್ಯರ ಒಮ್ಮತದ ತೀರ್ವನವನ್ನು ಸರ್ಕಾರ ಒಪ್ಪಿದೆ ಎಂದರು.
ಅಕಾಡೆಮಿಗಳಿಗೆ ಪ್ರತ್ಯೇಕ ಅನುದಾನ:ಅಕಾಡೆಮಿಗಳು ಹಾಗೂ ರಂಗಾಯಣಗಳಿಗೆ ಇನ್ನು ಮುಂದೆ ನಿರ್ವಹಣೆ ಮತ್ತು ಚಟುವಟಿಕೆಗಳಿಗೆ ಪ್ರತ್ಯೇಕವಾಗಿ ಅನುದಾನ ನೀಡುವ ನಿರ್ಣಯ ಕೈಗೊಳ್ಳಲಾಗಿದ್ದು, ಇದಕ್ಕೆ ಆರ್ಥಿಕ ಇಲಾಖೆ ಒಪ್ಪಿದೆ. ಈ ಮೊದಲು ಒಟ್ಟಿಗೆ ಅನುದಾನ ನೀಡುತ್ತಿದ್ದುದರಿಂದ ಇದರಲ್ಲಿ ಶೇ. 60 ಸಂಬಳ ಮತ್ತು ಸಾರಿಗೆಗೆ ವೆಚ್ಚ ಆಗುತ್ತಿತ್ತು. ಇದರಿಂದ ಚಟುವಟಿಕೆಗಳಿಗೆ ಹಿನ್ನಡೆಯಾಗಿತ್ತು.
ಇಲಾಖೆಗೆ ಹೊಸ ರೂಪ:ಒಂದೂವರೆ ವರ್ಷದ ಹಿಂದೆ ಕನ್ನಡ-ಸಂಸ್ಕೃತಿ ಖಾತೆ ವಹಿಸಿಕೊಂಡ ಬಳಿಕ ಇಲಾಖೆಗೆ ಹೊಸ ರೂಪ ನೀಡಲಾಗಿದೆ. ರಾಜಧಾನಿಯಲ್ಲಿ ಬೀಡುಬಿಟ್ಟಿದ್ದ ಜಂಟಿ ನಿರ್ದೇಶಕರನ್ನು ಕಂದಾಯ ವಿಭಾಗಕ್ಕೆ ಒಬ್ಬರಂತೆ ನಿಯೋಜಿಸಿ ಸ್ಥಳೀಯ ಮಟ್ಟದಲ್ಲೇ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗಿದೆ. 27 ಜಿಲ್ಲೆಗಳಿಗೆ ತಲಾ ಒಬ್ಬರಂತೆ ನಿರ್ದೇಶಕರ ನೇಮಕಾತಿ ಪ್ರಕ್ರಿಯೆ ನಡೆದಿದೆ. ಇನ್ನಷ್ಟು ಅಗತ್ಯ ಸಿಬ್ಬಂದಿ ಭರ್ತಿಗೂ ಕ್ರಮ ವಹಿಸಲಾಗಿದೆ ಎಂದು ಸಚಿವ ಸುನೀಲ್​ಕುಮಾರ್ ತಿಳಿಸಿದರು.

‘ಪ್ರಗತಿ’ಯ ಹೊಳಪಲ್ಲಿ ರಿಷಬ್​ ಶೆಟ್ಟಿ; ಹಳೇದನ್ನೆಲ್ಲ ನೆನಪಿಸಿಕೊಂಡು ಆ ಮೊದಲ ಫೋಟೋ ಹಂಚಿಕೊಂಡ ನಟ-ನಿರ್ದೇಶಕ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:eighteen + five =
Remember me
