ಮಂಡ್ಯ:ವಿಧವೆಯರಿಗೆ ಪೆನ್ಷನ್ ಮಾಡಿದ್ದು ಇಂದಿರಾಗಾಂಧಿ‌ಯವರಾಗಿದ್ದಾರೆ. ರೇಷನ್ ಕಾರ್ಡ್ ತಂದಿದ್ದು ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವಾಗಿದೆ. ಆದರೆ ರೇಷನ್ ಕಾರ್ಡ್ ಕೊಟ್ಟಿದ್ದು ಬಿಜೆಪಿ, ಜೆಡಿಎಸ್ ನಿಂದ ಅಲ್ಲ ಎಂದು ಮಹಿಳಾ ಸಮಾವೇಶದಲ್ಲಿ ಮಾಜಿ ಸಚಿವೆ ಉಮಾಶ್ರೀ ಮಂಡ್ಯದ ಕೊಪ್ಪದಲ್ಲಿ ಅಬ್ಬರದ ಭಾಷಣ ಮಾಡಿದ್ದಾರೆ.
ಮಂಡ್ಯ ಜಿಲ್ಲೆಯ ಕೊಪ್ಪದಲ್ಲಿ ನಡೆದ ಕಾಂಗ್ರೆಸ್ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, ಉಳುವವನೆ ಭೂಮಿ ಒಡೆಯ ಎಂದ್ರು. ಅವರು ಇಂದು ನಮ್ಮ ಜೊತೆ ಇಲ್ಲ. ಬಡವರನ್ನ ಎಬ್ಬಿಸಿದ ಆ ತಾಯಿಯನ್ನ ನಾವು ನೆನೆಯಬೇಕು. ಮಹಾತ್ಮಗಾಂಧಿಗೆ ಗುಂಡೇಟು ಹೊಡೆದ ಜನರೇ ಇಂದಿರಾಗಾಂಧಿ ಕೊಂದರು.ಆ ತಾಯಿಗೆ 18 ಗುಂಡುಗಳನ್ನ ಹೊಡೆದ್ರು. ಇಡೀ ದೇಶದ ಜನರಿಂದ ಕಣ್ಣೀರ ಕೋಡಿ ಹರಿಯಿತು. ಅಂತಹ ನಾಯಕಿಯನ್ನ ನಾವು ಇಂದು ನೆನಪಿಸಿಕೊಳ್ಳಬೇಕು. ಕಾಂಗ್ರೆಸ್ ಪಕ್ಷಕ್ಕೆ ಮತಹಾಕಬೇಕು.ಕೋಮುವಾದ ಸೃಷ್ಟಿಮಾಡುವ ಬಿಜೆಪಿ ಇಡೀ ದೇಶವನ್ನ ಛಿದ್ರ ಮಾಡಿಬಿಟ್ಟರು ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಪಕ್ಷದವರು ಜಾತಿ-ಜಾತಿ, ಧರ್ಮ ಧರ್ಮಗಳ ನಡುವೆ ನಂಜುಕಾರುವ ಹಾಗೆ ಮಾಡಿದ್ದಾರೆ. ಬಿಜೆಪಿ ಇರುವವರೆಗೂ ಬಡವರು, ರೈತರು ಜೀವನ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ಸರ್ಕಾರವನ್ನ ಹಿಟ್ಲರ್ ಆಡಳಿತಕ್ಕೆ ಉಮಾಶ್ರೀ ಹೋಲಿಸಿದ್ದಾರೆ.
ಇದನ್ನೂ ಓದಿ:ಬಿಸ್ಲೇರಿ ಖರೀದಿಗೆ ‘ಟಾಟಾ’ ಹೇಳಿದ ಟಿಸಿಪಿಎಲ್​; ಭವಿಷ್ಯ ಮಗಳ ಕೈಯಲ್ಲಿ
ಧರ್ಮ ಮತ್ತು ಸುಳ್ಳುಗಳ ಮೇಲೆ ಬಿಜೆಪಿ ಆಡಳಿತ ನಡೆಸುತ್ತಿದೆ. ಚಿಕ್ಕಮಗಳೂರಿನಲ್ಲಿ ದತ್ತಮಾಲೆ ಕಥೆ, ಮಂಡ್ಯದಲ್ಲಿ ಉರಿಗೌಡ, ನಂಜೇಗೌಡ ಕಥೆ ಕಟ್ಟುತ್ತಿದ್ದಾರೆ. ಜನರ ಮನಸ್ಸನಲ್ಲಿ ಕಥೆ ಕಟ್ಟಿ ಬೇರೆ ಕಡೆ ತಿರುಗಿಸುತ್ತಾರೆ. ಇನ್ನೊಂದು ಕಡೆ ಹಿಜಾಬ್ ತರುತ್ತಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಅಂತಾ ಬಿಜೆಪಿಗೆ ಉರಿ‌ ಇದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ:5 ವರ್ಷದಲ್ಲಿ ರಾಜ್ಯದ 10 ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗ..ಇದು ಕಾಂಗ್ರೆಸ್​​ ಪಕ್ಷದ ವಾಗ್ದಾನ: ರಾಹುಲ್​​ ಗಾಂಧಿ
ಗೌಡರು ಬೇಡ, ಲಿಂಗಾಯರು ಬೇಕಾಗಿಲ್ಲ. ಎಲ್ಲ ಜಾತಿಗಳನ್ನ ಛಿದ್ರಮಾಡಬೇಕು, ಮತವಿಭಜನೆ ಮಾಡಬೇಕೆಂಬುದೆ ಬಿಜೆಪಿ ತಂತ್ರವಾಗಿದೆ. ಬಂಡವಾಳ ಶಾಹಿಗಳನ್ನ ಮೇಲೆ ತರಲು ಈ ರೀತಿ ವಿಷಯ ತರುತ್ತಿದ್ದಾರೆ.ತೇಜಸ್ವಿ ಸೂರ್ಯ ರೈತರ ಸಾಲ ಮಾಡಿದ್ರೆ ದೇಶಕ್ಕೆ ಕಂಟಕ ಅಂತಾರೆ. ಅಯ್ಯೋ ಪುಣ್ಯಾತ್ಮ ನಿನಗೆ ಏನು ಗೊತ್ತಪ್ಪ ಎಂದು ಹೇಳಿದ್ದಾರೆ.
ರಜನಿಕಾಂತ್ ಪುತ್ರಿ ಮನೆಯಲ್ಲಿ ಕಳ್ಳತನ; 3.60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ನಾಪತ್ತೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 × 4 =
Remember me
