ಬೆಂಗಳೂರು:ಆಹಾರ ಮತ್ತು ಅರಣ್ಯ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಉಮೇಶ್ ಕತ್ತಿ (61) ಅವರು ಇಂದು ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದಾರೆ. ಬೆಂಗಳೂರಿನ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ತಂದೆಯ ಅಗಲಿಕೆ ಬಳಿಕ ರಾಜಕೀಯಕ್ಕೆ ಪ್ರವೇಶಿಸಿದ್ದ ಉಮೇಶ್ ಕತ್ತಿ, ತಂದೆಯಂತೆಯೇ ಹೃದಯಾಘಾತಕ್ಕೀಡಾಗಿ ಅಗಲಿದ್ದಾರೆ.
ಉಮೇಶ್ ಕತ್ತಿಯವರ ತಂದೆ ವಿಶ್ವನಾಥ ಕತ್ತಿ ಅವರು ಕೂಡ ಹೃದಯಾಘಾತದಿಂದಲೇ ಸಾವಿಗೀಡಾಗಿದ್ದರು. ಅವರು ವಿಧಾನಸಭೆ ಅಧಿವೇಶನ ನಡೆಯುವಾಗಲೇ ಹೃದಯಾಘಾತದಿಂದ ನಿಧನರಾಗಿದ್ದರು. ತಂದೆಯ ಮರಣದ ಬಳಿಕ ಉಮೇಶ್ ಕತ್ತಿ ರಾಜಕೀಯಕ್ಕೆ ಪ್ರವೇಶಿಸಿದ್ದರು.
ಉಮೇಶ್ ಕತ್ತಿ ಅವರು ತಮಗೆ ಹೃದಯದ ಸಮಸ್ಯೆ ಇರುವುದು ಗೊತ್ತಿದ್ದರೂ ನಿರ್ಲಕ್ಷಿಸಿದರಾ ಎಂಬ ಪ್ರಶ್ನೆ ಮೂಡಿದೆ. ಏಕೆಂದರೆ ಅವರಿಗೆ ಹೃದಯಾಘಾತ ಆಗಿದ್ದು ಇದೇ ಮೊದಲೇನಲ್ಲ. ಈ ಹಿಂದೆಯೂ 2-3 ಸಲ ಅವರಿಗೆ ಹೃದಯಾಘಾತವಾಗಿತ್ತು.
“ಉಮೇಶ್ ಕತ್ತಿ ಅವರಿಗೆ ಈ ಹಿಂದೆ ಕೂಡ 2-3 ಬಾರಿ ಹೃದಯಾಘಾತವಾಗಿತ್ತು. ವೈದ್ಯರು ಚಿಕಿತ್ಸೆ ನೀಡಿ, ಸ್ಟೆಂಟ್ ಅಳವಡಿಸಿದ್ದರು. ಈ ಬಗ್ಗೆ ಅವರ ಆಪ್ತರು ಆಗಾಗ ಪ್ರಸ್ತಾಪಿಸಿ, ಆರೋಗ್ಯ ಚೆನ್ನಾಗಿ ನೋಡಿಕೊಳ್ಳುವಂತೆ ಸಲಹೆ ನೀಡುತ್ತಿದ್ದರು. ಆದರೆ ಅದರ ಬಗ್ಗೆ ಉಮೇಶ್ ಕತ್ತಿ ಹೆಚ್ಚು ತಲೆಕೆಡಿಸಿಕೊಳ್ಳದೆ ‘ಇದೆಲ್ಲಾ ನಮಗೆ ಹೆರಿಡಿಟರಿ (ಆನುವಂಶಿಕ) ಬಿಡ್ರೀ…” ಎನ್ನುತ್ತಿದ್ದರು ಎಂದು ಕುಡಚಿಯ ಬಿಜೆಪಿ ಶಾಸಕ ಪಿ. ರಾಜೀವ ಸ್ಮರಿಸಿಕೊಂಡಿದ್ದಾರೆ.
ಸಚಿವ ಉಮೇಶ್ ಕತ್ತಿ ನಿಧನ; ಹೃದಯಾಘಾತದಿಂದ ಸಾವು..

ಕಾರು ಅಪಘಾತಕ್ಕೆ ದಂಪತಿ ಬಲಿ; ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಮಗನೂ ಇಂದು ಶವವಾಗಿ ಪತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − twelve =
Remember me
