ಬೆಂಗಳೂರು:ಪಿಡಿಒಗಳು ರಾಕ್ಷಸರು ಎಂಬ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿರುವ ವಸತಿ ಸಚಿವ ವಿ. ಸೋಮಣ್ಣ, ನಾನು ತಪ್ಪು ಮಾಡಿದ್ದರೆ ನೇಣು ಹಾಕಿಕೊಳ್ಳೋಕೆ ರೆಡಿ ಇದ್ದೇನೆ ಎಂದು ಹೇಳಿದ್ದಾರೆ.
ದನದ ಕೊಟ್ಟಿಗೆ ಕಟ್ಟಿಸಲು, ಮತ್ತೇನೊ ಮಾಡೋಕೆ ಹಣ ಕೊಟ್ರೆ ಹೇಗೆ? ಅರ್ಹ ಫಲಾನುಭವಿಗಳಿಗೆ ಮನೆ ಸಿಗಬೇಕು ಎಂಬುದಷ್ಟೇ ನನ್ನ ಉದ್ದೇಶ. ಎಲ್ಲವೂ ಸರಿ ಇರಬೇಕು ಅನ್ನೋದು ನನ್ನ ಗುರಿ. ಹೀಗಾಗಿ ನಿನ್ನೆ ಕೆಲ ಪಿಡಿಒಗಳನ್ನು ರಾಕ್ಷಸರು ಎಂದಿದ್ದೇನೆ. ಈ ಮಾತಿಗೆ ನಾನು ಈಗಲೂ ಬದ್ಧನಾಗಿದ್ದು, ಇತರ ಕೆಲ ಪಿಡಿಒಗಳಿಗೆ ಬೇಸರ ಆಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು. ಅಲ್ಲದೆ ಸಣ್ಣದಾಗಿ ನಡೆದುಕೊಂಡು, ಯಾರ ಬಗ್ಗೆಯಾದರೂ ಅಪಚಾರ ಮಾಡಿದ್ದರೆ ನಾನು ನೇಣು ಹಾಕಿಕೊಳ್ಳೋಕು ಸಿದ್ಧನಿದ್ದೇನೆ ಎಂದರು.ಇದನ್ನೂ ಓದಿರಿಡ್ರಗ್ಸ್​ ಕೇಸ್​: ಜಮೀರ್​ಗೆ ಹಿಗ್ಗಾಮುಗ್ಗಾ ಜಾಡಿಸಿದ ಸಚಿವ ಸುಧಾಕರ್​
ಕೆಲ ಪಿಡಿಒಗಳ ತಪ್ಪಿನಿಂದಾಗಿ ಅರ್ಹರ ಬದಲು ಅನರ್ಹರಿಗೂ ಪ್ರಧಾನ ಮಂತ್ರಿ ಅವಾಸ್ ಯೋಜನೆಯ ಸೌಲಭ್ಯ ಹೋಗಿದೆ. ಹಾಗಾಗಿ ರಾಕ್ಷಸ ಪ್ರವೃತ್ತಿಯ ಕೆಲ ಪಿಡಿಒಗಳು ಇರ್ತಾರೆ ಎಂದಿದ್ದೇನೆ. ಈ ಬಗ್ಗೆ ಸಿಎಂ ಗಮನಕ್ಕೂ ತಂದಿದ್ದೇನೆ. ಅದರಲ್ಲಿ ಏನ್ ತಪ್ಪಿದೆ ಎಂದು ಸಿಎಂ ಹೇಳಿದರು. ನಾನು ಎಲ್ಲ ಪಿಡಿಒಗಳನ್ನೂ ರಾಕ್ಷಸರು ಎಂದಿಲ್ಲ. ಈ ಮಾತಿಗೆ ಈಗಲೂ ಬದ್ಧ. ಒಳ್ಳೆಯ ಪಿಡಿಒಗಳಿಗೆ ರಾಕ್ಷಸರು ಎನ್ನುವ ಚಟ ನನಗಿಲ್ಲ ಎಂದು ಸೋಮಣ್ಣ ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರಕ್ಕೆ ಪಿಡಿಒಗಳು ನೀಡಿರುವ ಪಟ್ಟಿಗಳನ್ನು ಮತ್ತೆ ಪರಿಶೀಲನೆ ಮಾಡಲಾಗುತ್ತದೆ. ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ಕೊಡಿಸಲಾಗುವುದು. 1.20 ಲಕ್ಷ ಮನೆಗಳು ಬಡವರಿಗೆ ಮತ್ತು ಅರ್ಹರಿಗೆ ಸೇರಬೇಕು. ಈ ನಿಟ್ಟಿನಲ್ಲಿ ಕಾರ್ಯ ಸಾಗಲಿದೆ ಎಂದರು.
ಮನೆ ಇಲ್ಲದವರಿಗೆ ಗುಡ್​ ನ್ಯೂಸ್ ಕೊಟ್ಟ ಸಚಿವ ಸೋಮಣ್ಣ

ಜಮೀರ್ ಹೇಳಿಕೆ ಬೆನ್ನಲ್ಲೇ ಶ್ರೀಲಂಕಾ ಪ್ರವಾಸದ ಗುಟ್ಟು ಬಿಚ್ಚಿಟ್ಟ ಕುಮಾರಸ್ವಾಮಿ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:five × four =
Remember me
