ಚಿಕ್ಕಬಳ್ಳಾಪುರ:ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಅವರ ಪಾಲಿಗೆ ಇಂದು ಅವಿಸ್ಮರಣೀಯ ದಿನ. ಏಕೆಂದರೆ ಸಚಿವರ ಮುದ್ದಿನ ಏಂಜಲ್ಸ್​ ಅವರಿಗಾಗಿಯೇ ವಿಶೇಷ ಉಡುಗೊರೆ ಕೊಟ್ಟಿದ್ದಾರೆ. ಇದು ಅವರ ಜೀವನದಲ್ಲೇ ಮಧುರ ಕ್ಷಣವಂತೆ. ಈ ಬಗ್ಗೆ ಸ್ವತಃ ಸುಧಾಕರ್​ ಅವರೇ ಹೇಳಿಕೊಂಡಿದ್ದಾರೆ.
ಅಷ್ಟಕ್ಕೂ ಈ ಉಡುಗೊರೆ ಕೊಟ್ಟಿದ್ದು ಅವರ ಮುದ್ದಿನ ಮಗಳು. ಇಂದು ಸುಧಾಕರ್ ಜನ್ಮದಿನ. ಕರೊನಾತಂಕದ ಛಾಯೆ ಇಲ್ಲವಾಗಿದ್ದರೆ ಹುಟ್ಟುಹಬ್ಬದ ಸಂಭ್ರಮ ಸ್ವಗೃಹ ಸೇರಿದಂತೆ ಕ್ಷೇತ್ರದೆಲ್ಲೆಡೆ ಕಳೆಗಟ್ಟುತ್ತಿತ್ತು. ಆದರೆ, ಸಚಿವರ ತಂದೆ, ಪತ್ನಿ ಮತ್ತು ಮಗಳಿಗೆ ಸೋಂಕು ತಗುಲಿದ್ದು, ಕೋವಿಡ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸುಧಾಕರ್​ ಕ್ವಾರಂಟೈನ್​ ಆಗಿದ್ದಾರೆ. ಈ ನಡುವೆ ಅಪ್ಪನ ಬರ್ತ್ ಡೇಗೆ ಮಗಳು ಮತ್ತು ಪತ್ನಿ ವಿಶೇಷವಾಗಿ ಶುಭ ಕೋರಿದ್ದಾರೆ.ಇದನ್ನೂ ಓದಿರಿಕೋವಿಡ್​ನಿಂದ ದೇಶದಲ್ಲಿ ಲಕ್ಷಾಂತರ ಜನರೇನೂ ಸತ್ತಿಲ್ಲ… ಲಾಕ್​ಡೌನ್​ ಬೇಡ: ಪ್ರತಾಪ್​ಸಿಂಹ
ಆಸ್ಪತ್ರೆಯಿಂದಲೇ ಮಗಳು ಮತ್ತು ಪತ್ನಿ ಸಧಾಕರ್​ಗೆ ಟಿಕ್​ಟಾಕ್​ ವಿಡಿಯೋ ಮೂಲಕ ವಿಶ್​ ಮಾಡಿದ್ದಾರೆ. ಅದನ್ನು ನೋಡಿದ ಸಚಿವರು ಫುಲ್​ ಖುಷಿಯಾಗಿದ್ದು, ವಿಡಿಯೋವನ್ನು ತನ್ನ ಟ್ವಿಟರ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ.
”ಆಸ್ಪತ್ರೆಯಿಂದ ರಾತ್ರಿ 12 ಗಂಟೆಗೆ ಮಗಳು ಮತ್ತು ಪತ್ನಿ ನನ್ನ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ವಿಡಿಯೋ ಉಡುಗೊರೆ ನನ್ನ ಜೀವನದಲ್ಲೇ ಮಧುರವಾದದ್ದು, ಪವಿತ್ರ ಪ್ರೀತಿಯ ಸಂಕೇತ. ಮಿಸ್ ಯು ಮೈ ಏಂಜಲ್ಸ್” ಎಂದು ವಿಡಿಯೋ ಜತೆಗೆ ಸುಧಾಕರ್​ ಬರೆದುಕೊಂಡಿದ್ದಾರೆ. ಕರೊನಾ ಸೋಂಕಿನ ನಡುವೆಯೂ ಆತ್ಮಸ್ಥೈರ್ಯದಿಂದ ಖುಷಿಯಲ್ಲಿರುವ ಬಾಲಕಿಯ ಕಂಡು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಆಸ್ಪತ್ರೆಯಿಂದ ರಾತ್ರಿ ೧೨ ಗಂಟೆಗೆ ನನ್ನ ಮಗಳು ಮತ್ತು ನನ್ನ ಪತ್ನಿ ನನ್ನ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನ ತಿಳಿಸಿದ್ದಾರೆ. ಈ ವಿಡಿಯೋ ಉಡುಗೊರೆ ನನ್ನ ಜೀವನದಲ್ಲೇ ಮದುರವಾದದ್ದು, ಪವಿತ್ರಪ್ರೀತಿಯ ಸಂಕೇತ. ಮಿಸ್ ಯು ಮೈ ಏಂಜಲ್ಸ್ 🥰❤️🥰pic.twitter.com/epxpGYfSEA
— Dr Sudhakar K (@mla_sudhakar)June 26, 2020

ಇನ್ನು ಸುಧಾಕರ್ ಬರ್ತ್ ಡೇಯನ್ನು ಅವರ ಬೆಂಬಲಿಗರು ಚಿಕ್ಕಬಳ್ಳಾಪುರದ ವಿವಿಧೆಡೆ ಆಚರಿಸಿದ್ದಾರೆ. ಧರ್ಮಛತ್ರ ರಸ್ತೆಯ ಗಣೇಶನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬೆಂಗಬಲಿಗರು, ಈಡುಗಾಯಿ ಹೊಡೆದರು. ಸುಧಾಕರ್ ಕುಟುಂಬಸ್ಥರು ಕರೊನಾದಿಂದ ಶೀಘ್ರವೇ ಗುಣಮುಖರಾಗಬೇಕು ಎಂದು ದೇವರಲ್ಲಿ ಪ್ರಾರ್ಥಿಸಿದರು.
ಕೋವಿಡ್​ನಿಂದ ದೇಶದಲ್ಲಿ ಲಕ್ಷಾಂತರ ಜನರೇನೂ ಸತ್ತಿಲ್ಲ… ಲಾಕ್​ಡೌನ್​ ಬೇಡ: ಪ್ರತಾಪ್​ಸಿಂಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + ten =
Remember me
