ಆನೇಕಲ್:ಟ್ರ್ಯಾಕ್ಟರ್​ ವಾಟರ್​ ಟ್ಯಾಂಕರ್​ ಹರಿದು ಬಾಲಕನೊಬ್ಬನನ್ನು ಮೃತಪಟ್ಟಿರುವ ಆಘಾತಕಾರಿ ಘಟನೆ ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಸಮೀಪದ ಸಿ.ಕೆ. ಪಾಳ್ಯದಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ ಆರೋಪ ಕೇಳಿಬಂದಿದೆ.
ಮೃತ ಬಾಲಕನನ್ನು ಭುವನ್ ಎಂದು ಗುರುತಿಸಲಾಗಿದೆ. ಈತ ಸಿ.ಕೆ. ಪಾಳ್ಯದ ನಿವಾಸಿ. ತನ್ನ ಅಣ್ಣನ ಜೊತೆ ಬೇಕರಿಯಲ್ಲಿ ಐಸ್ ಕ್ರೀಮ್ ತೆಗೆದುಕೊಂಡು ವಾಪಸ್​ ಮನೆಗೆ ಬರುವಾಗ ಟ್ರ್ಯಾಕ್ಟರ್​ನ ಹಿಂಬದಿಯ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯ ಭೀಕರ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:ಅನ್ನ ತಿಂದು ಮುಗಿಸುವ ಮುನ್ನವೇ ಪಾಯಸ ಬಡಿಸಿದ್ದಕ್ಕೆ ರಣಾಂಗಣವಾದ ಕಲ್ಯಾಣ ಮಂಟಪ!
ಇಂದು (ಜೂ. 7) ಬೆಳಗ್ಗೆ 9. 30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಅಪಘಾತದ ಬೆನ್ನಲ್ಲೇ ಬಾಲಕನನ್ನು ಪಾಲಕರು ಆಸ್ಪತ್ರೆಗೆ ಸೇರಿಸಿದರು. ಆದರೆ, ಅಷ್ಟರಲ್ಲಾಗಲೇ ಆತ ಮೃತಪಟ್ಟಿದ್ದ. ಇನ್ನೂ ಎರಡು ದಿನದಲ್ಲಿ ಬಾಲಕ ಶಾಲೆಗೆ ಹೋಗಬೇಕಿತ್ತು. ಇದೀಗ ಮಗನನ್ನು ಕಳೆದುಕೊಂಡಿದ್ದಕ್ಕೆ ಪಾಲಕರ ಆಕ್ರಂದನ ಮುಗಿಲು ಮುಟ್ಟಿದೆ.
ವಾಟರ್​ ಟ್ಯಾಂಕರ್​ ಟಿ. ಚಿನ್ನಣ್ಣ ಎಂಬುವರಿಗೆ ಸೇರಿದ್ದಾಗಿದೆ. ಘಟನೆ ಬೆನ್ನಲ್ಲೇ ಚಾಲಕನ ವಾಟರ್ ಟ್ಯಾಂಕರ್ ಅನ್ನು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಚಾಲಕನ ಹೆಸರು ಚಂದ್ರು. ಈತ ಕಲಬುರಗಿಯ ನಿವಾಸಿ. ಘಟನಾ ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯಾವುದೇ ರೀತಿಯ ದಾಖಲೆಗಳಿಲ್ಲದೆ ಟ್ಯಾಂಕರ್ ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ.(ದಿಗ್ವಿಜಯ ನ್ಯೂಸ್​)
VIDEO| ಯುವತಿಯನ್ನು ಹೊತ್ತುಕೊಂಡು ಅಗ್ನಿಕುಂಡ ಸುತ್ತಿಸಿ ಬಲವಂತವಾಗಿ ಮದುವೆಯಾದ!

ಮಾಜಿ ಸಚಿವರ ಮನೆಯಲ್ಲೇ ರಾಜಾರೋಷವಾಗಿ ಕಳ್ಳತನ!

INSTAGRAMಗೂ ಬರಲಿದೆ ಕೃತಕ ಬುದ್ಧಿಮತ್ತೆ ಇರೋ ಚಾಟ್‌ಬಾಟ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 12 =
Remember me
