ಮಂಡ್ಯ:ಇತ್ತೀಚಿನ ದಿನಗಳಲ್ಲಿ ಬೆಳಕಿಗೆ ಬರುತ್ತಿರುವ ಅಪರಾಧ ಪ್ರಕರಣಗಳಲ್ಲಿ ಅಪ್ರಾಪ್ತರು ಸಹ ಭಾಗಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಂಡ್ಯ ಬಾಲ ನ್ಯಾಯ ಮಂಡಳಿಯು ಮಹತ್ವದ ಆದೇಶವೊಂದನ್ನು ನೀಡಿದೆ.
ಅಪ್ರಾಪ್ತರು ಕ್ರೈಂ ಮಾಡಿದ್ರೆ ಬಾಲಪರಾಧ ಅಡಿಯಲ್ಲಿ ಕಡಿಮೆ ಶಿಕ್ಷೆ ಅಥವಾ ಶಿಕ್ಷೆಯಿಂದ ಪಾರಾಗಬಹುದು ಎಂಬ ಯೋಚನೆ ಇದ್ದರೆ ಇಂದಿಗೆ ಬಿಟ್ಟುಬಿಡಿ. ಏಕೆಂದರೆ, ಕಾನೂನು ಸಂಘರ್ಷಕ್ಕೆ ಒಳಗಾದ ಅಪ್ರಾಪ್ತ ಆರೋಪಿಗಳಿಗೂ ವಯಸ್ಕರಂತೆ ವಿಚಾರಣೆ ನಡೆಸುವಂತೆ ಮಂಡ್ಯ ಬಾಲ ನ್ಯಾಯ ಮಂಡಳಿ ಅಧ್ಯಕ್ಷೆ ಹಾಗೂ ನ್ಯಾಯಾಧೀಶೆ ಮಾಲಾ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ:ಅಯ್ಯೋ ಅಮ್ಮ… ಎನ್ನುತ್ತ ಬಂದ ಪುಟ್ಟಕಂದನನ್ನೂ ಕೊಂದೇ ಬಿಟ್ಟ! ತಾಯಿಯದ್ದು ಅರ್ಧಜೀವ…
ಮಂಡ್ಯದಲ್ಲಿ ಇತ್ತೀಚೆಗೆ ನಡೆದಿದ್ದ 4 ಅಪರಾಧ ಪ್ರಕರಣಗಳ ಆರೋಪಿಗಳ ವಿಚಾರದಲ್ಲಿ ನ್ಯಾಯ ಮಂಡಳಿ ಮಹತ್ವದ ಆದೇಶ ಹೊರಡಿಸಿದೆ. ಕ್ರೈಂನಲ್ಲಿ ಭಾಗಿಯಾಗಿದ್ದ ಅಪ್ರಾಪ್ತರನ್ನು ವಯಸ್ಕರೆಂದು ಪರಿಗಣಿಸಿ ವಿಚಾರಣೆ ನಡೆಸಲು ಅನುಮತಿ ನೀಡಲಾಗಿದೆ.
ಅಕ್ಟೋಬರ್ 31ರಂದು ಮಂಡ್ಯದಲ್ಲಿ ಸುಮಂತ್ ಎಂಬಾತನ ಭೀಕರ ಕೊಲೆಯಲ್ಲಿ ಇಬ್ಬರು ಅಪ್ರಾಪ್ತರು ಭಾಗಿಯಾಗಿದ್ದರು. ಡಿ.12ರಂದು ಮದ್ದೂರು ತಾಲೂಕಿನ ಹುರುಗಲವಾಡಿಯಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಓರ್ವ ಅಪ್ರಾಪ್ತ ಭಾಗಿಯಾಗಿದ್ದ. ಮದ್ದೂರು ತಾಲೂಕಿನ ಕೆ.ಶೆಟ್ಟಿಹಳ್ಳಿಯಲ್ಲಿ ಮಾವನನ್ನು ಬರ್ಬರವಾಗಿ ಅಪ್ರಾಪ್ತ ಕೊಲೆ ಮಾಡಿದ್ದ. ಶ್ರೀರಂಗಪಟ್ಟಣ ತಾಲೂಕಿನ ವ್ಯಾಪ್ತಿಯಲ್ಲಿ ಲಾರಿ ಚಾಲಕನ ಮೇಲೆ ಹಲ್ಲೆ ಮತ್ತು ಡಾಕಾಯಿತಿ ಪ್ರಕರಣದಲ್ಲೂ ಓರ್ವ ಅಪ್ರಾಪ್ತ ಭಾಗಿಯಾಗಿದ್ದ.
ಇದನ್ನೂ ಓದಿ:ಈ ಊರಿನಂಚಿನಲ್ಲೇ ಬೀಡುಬಿಟ್ಟಿವೆ 30ಕ್ಕೂ ಹೆಚ್ಚು ಕಾಡಾನೆಗಳು! ಹೊರ ಬರದಂತೆ ಗ್ರಾಮಸ್ಥರಿಗೆ ನಿರ್ಬಂಧ
ಇದಿಷ್ಟು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಪ್ರಾಪ್ತರ ವಿಚಾರದಲ್ಲಿ ನ್ಯಾಯ ಮಂಡಳಿ ಮಹತ್ವದ ಆದೇಶ ನೀಡಿದ್ದು, ಅಪ್ರಾಪ್ತರಿಗೆ ಒಂದು ರೀತಿಯಲ್ಲಿ ಎಚ್ಚರಿಕೆ ಗಂಟೆಯಾಗಿದೆ.(ದಿಗ್ವಿಜಯ ನ್ಯೂಸ್​)
ಇದಪ್ಪಾ ಅದೃಷ್ಟ ಅಂದ್ರೆ! ಬಡ ಮೀನುಗಾರನನ್ನು ಕೋಟ್ಯಾಧಿಪತಿ ಮಾಡಿದ ತಿಮಿಂಗಿಲ ವಾಂತಿ

ಗ್ರಾ.ಪಂ ಚುನಾವಣೆಯಲ್ಲಿ ಪತಿ ವಿರುದ್ಧವೇ ಸ್ಪರ್ಧೆಗಿಳಿದ ಪತ್ನಿ: ದಂಪತಿ ಮಾತು ಕೇಳಿದ್ರೆ ಅಚ್ಚರಿ ಖಂಡಿತ!

ಪತ್ನಿ ಊರಿಗೆ ಹೋದಳೆಂದು ಸ್ನೇಹಿತೆಯನ್ನ ಮನೆಗೆ ಕರೆಸಿಕೊಂಡ ಟೆಕ್ಕಿಗೆ ಕಾದಿತ್ತು ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
