ಬೆಂಗಳೂರು:ಇನ್​ಸ್ಟಾಗ್ರಾಂನಲ್ಲಿ ಪರಿಚಯವಾದ ಅಪರಿಚಿತನ ಪ್ರೇಮದ ಬಲೆಗೆ ಬಿದ್ದಿದ್ದ 8ನೇ ತರಗತಿ ವಿದ್ಯಾರ್ಥಿನಿ, ಪಾಲಕರನ್ನು ತೊರೆದು ವಿಮಾನದಲ್ಲಿ ಹೈದರಾಬಾದ್​ಗೆ ತೆರಳಲು ಏರ್​ಪೋರ್ಟ್​ನಲ್ಲಿ ಕಾಯುತ್ತಿದ್ದಾಗ ಸಿಕ್ಕಿ ಬಿದ್ದಿರುವ ಕುತೂಲಹಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ವಿಮಾನ ನಿಲ್ದಾಣ ದಲ್ಲಿದ್ದ ಬಾಲಕಿಯನ್ನು ತಂದೆಯೇ ರಕ್ಷಿಸಿ ಮನೆಗೆ ಕರೆತಂದಿದ್ದಾರೆ. 14 ವರ್ಷದ ಬಾಲಕಿಯ ತಂದೆ ಕೊಟ್ಟ ದೂರಿನ ಮೇರೆಗೆ ಅಪರಿಚಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ದಕ್ಷಿಣ ವಿಭಾಗ ಸೈಬರ್ ಕ್ರೖೆಂ ಠಾಣೆ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಬಂದ್ರೆ ಬರಬೇಕು ಇಂಥಾ ಅದೃಷ್ಟ: ರಾತ್ರೋರಾತ್ರಿ 25 ಕೋಟಿ ರೂ. ಒಡೆಯನಾದ ಗಣಿಕೆಲಸಗಾರ!
ಆಗಿದ್ದೇನು?:ಉತ್ತರಹಳ್ಳಿಯ ಎಜಿಎಸ್ ಲೇಔಟ್​ನ ನಿವಾಸಿಯಾಗಿರುವ ಬಾಲಕಿ, ಪ್ರತಿಷ್ಠಿತ ಶಾಲೆಯೊಂದರಲ್ಲಿ 8ನೇ ತರಗತಿ ಓದುತ್ತಿದ್ದಾಳೆ. ಈಕೆ ಇನ್​ಸ್ಟಾಗ್ರಾಂ ಖಾತೆ ಹೊಂದಿದ್ದು, ಆನ್​ಲೈನ್​ನಲ್ಲಿ ಸಕ್ರಿಯಳಾಗಿದ್ದಳು. ಜೂ.8ರಂದು ಬೆಳಗ್ಗೆ 10.30ಕ್ಕೆ ಪಾಲಕರ ಬಳಿ ಸಂಗೀತ ತರಗತಿಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರ ಹೋಗಿದ್ದು, ವಾಪಸಾಗಿರಲಿಲ್ಲ. ಇದರಿಂದ ಆತಂಕಗೊಂಡ ಪಾಲಕರು ಪುತ್ರಿಗಾಗಿ ಹುಡುಕಾಟ ನಡೆಸಿದ್ದರಾದರೂ ಆಕೆಯ ಸುಳಿವು ಸಿಕ್ಕಿರಲಿಲ್ಲ.
ಇನ್​ಸ್ಟಾಗ್ರಾಂ ಖಾತೆ ಡಿಕೋಡ್:ಪುತ್ರಿಯ ನಡವಳಿಕೆಯಲ್ಲಿ ಬದಲಾವಣೆಯನ್ನು ಗಮನಿಸಿದ್ದ ತಂದೆ, ಆಕೆ ಬಳಸುತ್ತಿದ್ದ ಇನ್​ಸ್ಟಾಗ್ರಾಂ ಖಾತೆಯನ್ನು ಡಿಕೋಡ್ ಮಾಡಿದ್ದಾರೆ. ಆಕೆ, ವಿಶಾಲ್ ಎಂಬುವನ ಜತೆ ಪ್ರತಿನಿತ್ಯ ಚಾಟಿಂಗ್ ಮಾಡಿರುವುದು ಗೊತ್ತಾಗಿದೆ. ಈ ವೇಳೆ ವಿಶಾಲ್, ‘ನೀನು ನನಗೆ ಇಷ್ಟವಾಗಿದ್ದೀಯಾ. ನಿನ್ನ ಜತೆಗೆ ಇರಲು ಇಷ್ಟಪಡುತ್ತೇನೆ. ತುಂಬ ಪ್ರೀತಿಸುತ್ತಿರುವುದಾಗಿ ನಂಬಿಸಿದ್ದಾನೆ. ಅವನ ಬಣ್ಣದ ಮಾತುಗಳಿಗೆ ಮರುಳಾಗಿದ್ದ ಬಾಲಕಿ, ತನ್ನ ಖಾಸಗಿ ಫೋಟೋಗಳನ್ನು ಹಂಚಿಕೊಂಡಿದ್ದಾಳೆ. ಬಳಿಕ ಹೈದರಾಬಾದ್​ಗೆ ಬರುವಂತೆ ತಿಳಿಸಿದ್ದ. ಅಲ್ಲದೆ, ಆಕೆಯ ಹೆಸರಿನಲ್ಲಿ ವಿಮಾನ ಟಿಕೆಟ್ ಕೂಡ ಕಾಯ್ದಿರಿಸಿರುವುದು ಗೊತ್ತಾ ಗಿತ್ತು. ಈ ಸುಳಿವಿನ ಮೇರೆಗೆ ವಿಮಾನ ನಿಲ್ದಾಣಕ್ಕೆ ತೆರಳಿ ಪುತ್ರಿಯನ್ನು ರಕ್ಷಿಸಿದ್ದಾರೆ. ಬಳಿಕ ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಟಿಕ್​ ಟಾಕ್ ಸ್ಟಾರ್​​​ ಆತ್ಮಹತ್ಯೆಗೆ ಕಾರಣವೇನು? ಪೊಲೀಸರಿಗೆ ಸ್ಪೋಟಕ ಮಾಹಿತಿ ನೀಡಿದ ಕುಟುಂಬ​
ನಕಲಿ ಎಸ್ಸೆಸ್ಸೆಲ್ಸಿ ಅಂಕಪಟ್ಟಿ:ನಕಲಿ ಎಸ್ಸೆಸ್ಸೆಲ್ಸಿ ಅಂಕಪಟ್ಟಿ ತಯಾರಿಸಿದ್ದ ಆರೋಪಿ, ಅದರಲ್ಲಿ ಬಾಲಕಿ ಜನ್ಮದಿನಾಂಕವನ್ನು 18 ವರ್ಷ ಎಂದು ನಮೂದಿಸಿದ್ದ. ಈ ಅಂಕಪಟ್ಟಿಯನ್ನು ಬಾಲಕಿಗೆ ಕಳುಹಿಸಿ, ನೀನು ಬರುವಾಗ ಇದರ ಜತೆಗೆ 15 ಫೋಟೋಗಳು, ಆಧಾರ್ ಕಾರ್ಡ್, 10 ಸಾವಿರ ರೂ. ಹಾಗೂ ಇನ್ನಿತರ ದಾಖಲಾತಿಗಳನ್ನು ತೆಗೆದುಕೊಂಡು ಬರುವಂತೆ ಹೇಳಿದ್ದ ಎಂದು ದೂರಿನಲ್ಲಿ ತಂದೆ ಉಲ್ಲೇಖಿಸಿದ್ದಾರೆ.
ಮದುವೆಗೆ 4 ದಿನ‌ ಇರುವಾಗ್ಲೇ ಭಾವನಿಂದಲೇ ಮದುಮಗಳ ಹತ್ಯೆ: ಆರೋಪಿಯ ನಾಟಕ ಕೇಳಿದ್ರೆ ಶಾಕ್​ ಆಗ್ತೀರಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − seven =
Remember me
