ಬೆಂಗಳೂರು:ಆಚಾತುರ್ಯದಿಂದಾಗಿ ಅಪ್ರಾಪ್ತ ಬಾಲಕಿಯೇ ತಂದೆಯ ಸಾವಿಗೆ ಕಾರಣವಾಗಿರುವ ಘಟನೆ ಮೈಕೋ ಲೇಔಟ್ ಮಾರುತಿ ಪ್ಯಾರಡೈಸ್ ಅಪಾರ್ಟ್ಮೆಂಟ್​ನಲ್ಲಿ ನಿನ್ನೆ ಮಧ್ಯರಾತ್ರಿ ನಡೆದಿದೆ.
ಇದನ್ನೂ ಓದಿ:ತಮ್ಮದೇ ನಿರ್ಮಾಣದ “ಲೇಡಿಸ್​ ನಾಟ್​ ಅಲೌಡ್” ಸಿನಿಮಾ ವೀಕ್ಷಿಸದಂತೆ ಶಕೀಲಾ ಎಚ್ಚರಿಕೆ!​
ಸಪ್ತಿಕ್ ಬ್ಯಾನರ್ಜಿ (45 ) ಮೃತ ದುರ್ದೈವಿ. ಮೂರ್ನಾಲ್ಕು ವರ್ಷದ ಹಿಂದೆ ಸಪ್ತಿಕ್​ ಪತ್ನಿ ಮೃತಪಟ್ಟಿದ್ದರು. ಇದರ ನೋವಿನಲ್ಲಿದ್ದ ಸಪ್ತಿಕ್ ಖಿನ್ನತೆಗೊಳಗಾಗಿದ್ದ. ಪ್ರತಿ ನಿತ್ಯ ಮನೆಯಲ್ಲೇ ಕುಡಿದು 15 ವರ್ಷದ ಮಗಳು ಹಾಗೂ 12 ವರ್ಷದ ಮಗನ ಜತೆ ಗಲಾಟೆ ಮಾಡ್ತಿದ್ದ.
ಪಿಯಾನೋ ಕೀ ಬೋರ್ಡ್ ವಾದಕನಾಗಿದ್ದ ಸಪ್ತಿಕ್, ನಿನ್ನೆ ಮಧ್ಯರಾತ್ರಿ ಆದ್ರೂ ಕುಡಿದು ಜೋರಾಗಿ ಪಿಯಾನೋ ನುಡಿಸುತ್ತಿದ್ದ. ಆದರೆ, ಮಗಳು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ, ಮಗಳೊಂದಿಗೆ ಕ್ಯಾತೆ ತೆಗೆದು ಗಲಾಟೆ ಶುರುವಿಟ್ಟುಕೊಂಡಿದ್ದ. ಚಾಕು ತೆಗೆದು ಮಗಳಿಗೆ ತಿವಿಯಲು ಯತ್ನಿಸಿದ್ದ. ಆದರೆ, ತಪ್ಪಿಸಿಕೊಳ್ಳಲು ತಂದೆಯನ್ನು ಮಗಳು ತಳ್ಳಿದಾಗ ಕಾಲು ಜಾರಿ ಬಿದ್ದ ಸಪ್ತಿಕ್​ ಎದೆಗೆ ಚಾಕು ಇರಿದು ಸ್ಥಳದಲ್ಲೇ ಮೃತಪಟ್ಟಿದ್ದ.
ಇದನ್ನೂ ಓದಿ:ಸೂಪ್​ನಲ್ಲಿ ಸತ್ತ ಬಾವಲಿ ಕಂಡ ಕೂಡಲೇ ಆಸ್ಪತ್ರೆಗೆ ಓಡಿದ ಕುಟುಂಬಕ್ಕೆ ಕಾದಿತ್ತು ಸರ್ಪ್ರೈಸ್​!
ಘಟನೆಗೆ ಸಂಬಂಧಿಸಿದಂತೆ ಮೈಕೋ ‌ಲೇಔಟ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.(ದಿಗ್ವಿಜಯ ನ್ಯೂಸ್​)
ಗಣ್ಯರಿಗೆ ಹುಡುಗಿಯರ ಸಪ್ಲೈ, ಆಟೋ ಡ್ರೈವರ್‌ ಮಗಳ ಭಯಾನಕ ಹಿಸ್ಟರಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 2 =
Remember me
