ಬೆಂಗಳೂರು:ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ನೀಡಿರುವ ಸಾಲದಲ್ಲಿ ಶೇ.80ರಷ್ಟು ವಸೂಲಿ ಗುರಿಯನ್ನು ಪ್ರಸಕ್ತ ವರ್ಷಕ್ಕೆ ನಿಗದಿಪಡಿಸಿರುವೆ. ಈ ಪ್ರಗತಿ ಸಾಧಿಸಲೇಬೇಕು, ನಿರ್ಲಕ್ಷಿಸಿದರೆ ಕ್ರಮಕೈಗೊಳ್ಳುವೆ ಎಂದು ನಿಗಮದ ಅಧಿಕಾರಿಗಳಿಗೆ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್ ಅಹಮದ್ ಖಾನ್ ಎಚ್ಚರಿಸಿದ್ದಾರೆ.
ಕೆಎಂಡಿಸಿ ಭವನದಲ್ಲಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಹಾಗೂ ಸಾಲ ವಸೂಲಾತಿ ಅಧಿಕಾರಿಗಳ ಸಭೆ ಮಂಗಳವಾರ ನಡೆಸಿ, ಪ್ರಗತಿ ಪರಿಶೀಲಿಸಿದರು. ಸಾಲ ವಸೂಲಿ ಗುರಿ ಸಾಧಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯತತ್ಪರವಾಗಬೇಕು. ಮುಂದಿನ ವರ್ಷದ ಮಾರ್ಚ್‌ವರೆಗೂ ಎಂತಹುದೇ ಒತ್ತಡ ಬಂದರೂ ಜಿಲ್ಲಾ ವ್ಯವಸ್ಥಾಪಕರು ಹಾಗೂ ವಸೂಲಾತಿ ಅಧಿಕಾರಿಗಳನ್ನು ವರ್ಗಾವಣೆ ಮಾಡಬಾರದು ಎಂದು ಇಲಾಖೆ ಕಾರ್ಯದರ್ಶಿಗೆ ಸೂಚಿಸಿದರು.
ಶಿಕ್ಷಣ, ಉದ್ದಿಮೆ, ಸ್ವಯಂ ಉದ್ಯೋಗ ಸೇರಿ ವಿವಿಧ ಯೋಜನೆಗಳಡಿ 892 ಕೋಟಿ ರೂ. ಸಾಲ ವಸೂಲಿ ಮಾಡಬೇಕಾಗಿದೆ. ಜವಾಬ್ದಾರಿ ಹೊತ್ತಿರುವ ಜಿಲ್ಲಾ ವ್ಯವಸ್ಥಾಪಕರು, ವಸೂಲಾತಿ ಅಧಿಕಾರಿಗಳು ನಿದ್ದೆ ಮಾಡುತ್ತಿದ್ದೀರಾ ? ಎಂದು ಸಿಡಿಮಿಡಿ ವ್ಯಕ್ತಪಡಿಸಿದ ಅವರು, ಮಾರ್ಚ್ ಒಳಗೆ ಸಾಲ ವಸೂಲಿ ಗುರಿ ಮುಟ್ಟಲೇಬೇಕು ಎಂದು ತಾಕೀತು ಮಾಡಿದರು.
ವಸೂಲಾತಿ ಪ್ರಮಾಣ ಶೇ.1 ರಿಂದ 10ರಷ್ಟಿದ್ದರೆ ಅಧಿಕಾರಿಗಳು, ಸಿಬ್ಬಂದಿ ಅಗತ್ಯವೇನಿದೆ ?. ದೊಡ್ಡ ಪ್ರಮಾಣದಲ್ಲಿ ವೇತನ ವೆಚ್ಚ ಭರಿಸಬೇಕಾ ?. ಇನ್ನು ಮುಂದೆ ಈ ರೀತಿಯ ನಿರ್ಲಕ್ಷ್ಯ ಸಹಿಸುವುದಿಲ್ಲ. ಮಾಸಿಕ ಪ್ರಗತಿ ವರದಿಯನ್ನು ಸಲ್ಲಿಸಬೇಕು. ಉತ್ತಮ ಸಾಧನೆ ಮಾಡಿದವರಿಗೆ ಬಹುಮಾನ ನೀಡಲಾಗುವುದು ಎಂದು ಜಮೀರ್ ಅಹಮದ್ ಖಾನ್ ೋಷಿಸಿದರು.
ಅಧಿಕಾರಿಗಳು ತರಾಟೆಗೆ
ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಅಧಿಕಾರಿಗಳು ಸಾಲ ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡಿದ್ದಕ್ಕೆ ಶ್ಲಾಸಿದರು. ಕಳಪೆ ಪ್ರದರ್ಶನ ತೋರಿರುವ ಬಳ್ಳಾರಿ, ಬೀದರ್, ಬೆಳಗಾವಿ, ಬೆಂಗಳೂರು, ಶಿವಮೊಗ್ಗ ಜಿಲ್ಲೆಗಳ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಾಲ ವಸೂಲಾತಿಯಲ್ಲಿ ಉತ್ತಮ ಪ್ರಗತಿ ತೋರಿದ್ದ ಕೆಲವು ಜಿಲ್ಲೆಗಳ ಅಧಿಕಾರಿಗಳು ಸೇವೆಯಿಂದ ವಯೋ ನಿವೃತ್ತರಾಗಿದ್ದಾರೆ. ಅವಕಾಶವಿದ್ದರೆ ಅವರನ್ನು ಗುತ್ತಿಗೆ ಆಧಾರದಲ್ಲಿ ಮರು ನೇಮಕ ಮಾಡಿಕೊಳ್ಳಬೇಕು ಎಂದು ಸೂಚಿಸಿ, ಪ್ರತಿ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳ ಪ್ರಗತಿ ಮಾಹಿತಿಯನ್ನು ಅಂಕಿ-ಸಂಖ್ಯೆ ಸಹಿತ ಪಡೆದರು. ಸಾಲ ವಸೂಲಾತಿಗೆ ಎದುರಾಗಿರುವ ತೊಡಕು, ಸಮಸ್ಯೆಗಳ ವಿವರವನ್ನೂ ಜಮೀರ್ ಅಹಮದ್ ಖಾನ್ ಪಡೆದರು.
ಸಿಎಂ ಜತೆಗೆ ಮನ್ನಾ ಚರ್ಚೆ
ನಿಗಮದಿಂದ ನೀಡಿರುವ ಸಾಲ ಪರಿಣಾಮಕಾರಿ ವಸೂಲಿ ಹಾಗೂ ನಿಗದಿತ ಗುರಿ ತಲುಪಲು ಒಂದಾವರ್ತಿ ತೀರುವಳಿ (ಒನ್ ಟೈಮ್ ಸೆಟ್ಲಮೆಂಟ್) ಆಧಾರದಲ್ಲಿ ಬಡ್ಡಿ ಮನ್ನಾ ಮಾಡುವ ಬಗ್ಗೆ ಮುಖ್ಯಮಂತ್ರಿ ಜತೆಗೆ ಚರ್ಚಿಸಿ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.ಆದರೆ ಅದಕ್ಕಿಂತ ಮುಖ್ಯವಾಗಿ ಸಾಲ ವಸೂಲಾತಿಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ವಸೂಲಿಗೆ ಬೇಕಾದ ಎಲ್ಲ ಸಹಕಾರವನ್ನು ಹಿರಿಯ ಅಧಿಕಾರಿಗಳು ನೀಡಲಿದ್ದಾರೆ. ಸರ್ಕಾರವೂ ನಿಮ್ಮ ಜತೆಗೆ ಇರಲಿದೆ ಎಂದು ಜಮೀರ್ ಅಹಮದ್ ಖಾನ್ ಹುರಿದುಂಬಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 6 =
Remember me
