ಬೆಂಗಳೂರು: ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ, ಮಿಷನ್ ಸಿರಿಧಾನ್ಯಕ್ಕೆ ಕೇಂದ್ರ ಸರ್ಕಾರ ಪ್ರಾಮುಖ್ಯತೆ ನೀಡಿದ್ದನ್ನೇ ಕೇಂದ್ರಕ್ಕೆ ಮನಗಾಣಿಸಿದ ರಾಜ್ಯ ಸರ್ಕಾರ, ಸಿರಿಧಾನ್ಯಗಳ ಪಟ್ಟಿಗೆ ಸೇರಿರುವ ರಾಗಿ, ಜೋಳ ಧ್ಯಾನ ಮಾಡಿದೆ. ಇವೆರಡೂ ಧಾನ್ಯಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಬೇಡಿಕೆಯನ್ನೂ ಕೇಂದ್ರ ಸರ್ಕಾರದ ಮುಂದಿಟ್ಟಿದೆ.ರಾಗಿ, ಜೋಳ ಮಾಲ್ದಂಡಿ ಹಾಗೂ ಜೋಳ ಹೈಬ್ರೀಡ್ ಕನಿಷ್ಠ ಬೆಂಬಲ ಬೆಲೆಯನ್ನು ಏರಿಕೆ ಮಾಡಿ ರೈತರ ಆದಾಯ ದ್ವಿಗುಣಗೊಳಿಸಲು ನೆರವಾಗಬೇಕು. ಜತೆಗೆ ಈ ಯೋಜನೆಯಡಿ ರಾಜ್ಯ ಸರ್ಕಾರ ಖರೀದಿ ಮಾಡುವ ಪ್ರಮಾಣವನ್ನು ಹೆಚ್ಚಿಸಬೇಕು ಎನ್ನುವುದು ರಾಜ್ಯದ ಮೊರೆಯ ಸಾರವಾಗಿದೆ.
ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್.ಮುನಿಯಪ್ಪ ದೆಹಲಿಯಲ್ಲಿದ್ದಾರೆ. ಇದೇ ವೇಳೆ ಕೇಂದ್ರದ ಗ್ರಾಹಕರ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಮಂತ್ರಿ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ, ಸಿರಿಧಾನ್ಯ ಬೆಳೆಗೆ ಉತ್ತೇಜನ ಹಾಗೂ ರಾಜ್ಯದ ರೈತರ ಹಿತರಕ್ಷಣೆಯ ಒಕ್ಕಣೆಯುಳ್ಳ ಸುದೀರ್ಘ ಮನವಿಪತ್ರವನ್ನು ಸಲ್ಲಿಸಿದ್ದಾರೆ.
ಪ್ರಸಕ್ತ ವರ್ಷ (2023-24)ದ ಮುಂಗಾರು ಹಂಗಾಮಿನ ಕೃಷಿ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ (ಪ್ರತಿ ಕ್ವಿಂಟಾಲ್)ಯನ್ನು ನಿಗದಿಪಡಿಸಿದೆ. ಈ ಪೈಕಿ ರಾಗಿ 3,846 ರೂ., ಜೋಳ ಮಾಲ್ದಂಡಿ- 3,225 ರೂ. ಜೋಳ ಹೈಬ್ರೀಡ್- 3,180 ರೂ.ಗಳೆಂದು ಪ್ರಕಟಿಸಿದೆ. ಆದರೆ ಉತ್ಪಾದನಾ ವೆಚ್ಚ, ಮುಕ್ತ ಮಾರುಕಟ್ಟೆ ದರಕ್ಕೆ ಹೋಲಿಸಿದಾಗ ಎಂಎಸ್‌ಪಿ ಅತ್ಯಂತ ಕಡಿಮೆಯಾಗಿದೆ.
ಆಹಾರ ಭದ್ರತಾ ಯೋಜನೆಯಡಿ ಮೊತ್ತಯುಕ್ತ, ವಿಷಮುಕ್ತ ಹಾಗೂ ಪೌಷ್ಟಿಕಯುಕ್ತ ಆಹಾರಧಾನ್ಯ ವಿತರಿಸಬೇಕೆಂಬ ಕೇಂದ್ರ ಸರ್ಕಾರದ ಆಶಯಕ್ಕೆ ತದ್ವಿರುದ್ಧ ನಿಲುವಾಗಿದೆ. ಸಿರಿಧಾನ್ಯ ಬೆಳೆಯಲು ರೈತರಿಗೆ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ನಿವೇದಿಸಿಕೊಂಡಿದ್ದಾರೆ.
ರಸಗೊಬ್ಬರ, ಕೀಟನಾಶಕ, ಕೂಲಿ ದರ ಏರಿಕೆಯಾಗಿ ಉತ್ಪಾದನಾ ವೆಚ್ಚವು ಹೆಚ್ಚಿದೆ. ವಾಸ್ತವಿಕ ಪರಿಸ್ಥಿತಿಗೆ ಅನುಗುಣವಾದ ಕನಿಷ್ಠ ಬೆಂಬಲ ಬೆಲೆ ನಿಗದಿ ಸೂಕ್ತವಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಜೋಳ ಮಾಲ್ದಂಡಿ ಪ್ರತಿ ಕ್ವಿಂಟಾಲ್‌ಗೆ ನಾಲ್ಕು ಸಾವಿರ ರೂ.ಗಳಿದೆ.
ಬೆಂಬಲ ಬೆಲೆ ಯೋಜನೆಯಡಿ ರೈತರು ತಾವು ಬೆಳೆದ ಧಾನ್ಯ ಮಾರಾಟ ಮಾಡಲು ಮುಂದೆ ಬರಬೇಕು. ಈ ಕಾರಣಕ್ಕೆ ಪ್ರತಿ ಕ್ವಿಂಟಾಲ್ ರಾಗಿಗೆ ಐದು ಸಾವಿರ ರೂ., ಜೋಳ ಮಾಲ್ದಂಡಿಗೆ 4,500 ರೂ.ಗಳಿಗೆ ಏರಿಸಬೇಕು. ಅಲ್ಲದೆ, ಎಂಎಸ್‌ಪಿಯಡಿ ರಾಗಿ ಎಂಟು ಲಕ್ಷ ಮೆಟ್ರಿಕ್ ಟನ್ ಹಾಗೂ ಜೋಳ ಮೂರು ಲಕ್ಷ ಟನ್ ಖರೀದಿಸಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಬೇಕು ಎಂದು ಮುನಿಯಪ್ಪ ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + eleven =
Remember me
