ಬೆಂಗಳೂರು:ಹಿತ್ತಲ ಗಿಡ ಮದ್ದಲ್ಲವೆಂಬ ತಾತ್ಸಾರ ಧೋರಣೆಯಿಂದ ಹೊರಬಂದರೆ ಗುಣಪಡಿಸಲಾಗದ ಕಾಯಿಲೆಗಳೇ ಇಲ್ಲವೆಂಬ ವಿಶ್ವಾಸ ಜನರಲ್ಲಿ ಮೂಡುತ್ತದೆ. ಇದಕ್ಕಾಗಿ ಮನಸ್ಥಿತಿ, ಜೀವನ ಮತ್ತು ಆಹಾರ ಪದ್ಧತಿ ಬದಲಾಯಿಸಿಕೊಳ್ಳಬೇಕಾಗಿದೆ ಎಂದು ಮಿರಾಕಲ್ ಡ್ರಿಂಕ್ಸ್ ಸಂಸ್ಥೆ ಸಂಸ್ಥಾಪಕ, ಸಂಶೋಧಕ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಎಂ.ಎಸ್.ರಾಜು ಅಭಿಪ್ರಾಯ ವ್ಯಕ್ತಪಡಿಸಿದರು.
ಖಾಸಗಿ ಹೋಟೆಲ್​ನಲ್ಲಿ ಪವಾಡ ಪಾನೀಯ (ಮಿರಾಕಲ್ ಡ್ರಿಂಕ್ಸ್) ಕುರಿತು ಸೋಮವಾರ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ನಿತ್ಯದ ಆಹಾರದೊಂದಿಗೆ ಸೇವಿಸಬಹುದಾದ ಮದ್ದು ಮನೆಯಲ್ಲಿ ಕೈಗೆಟುಕುವ ದರದಲ್ಲಿ ಸಿಗುತ್ತದೆ. ಆ ಬಗ್ಗೆ ಜಾಗೃತಿ ಮೂಡಿದರೆ ರೋಗಗಳು ಬಾಧಿಸದಂತೆ ಮುನ್ನೆಚ್ಚರಿಕೆ ವಹಿಸಲು ಸಾಧ್ಯವಿದೆ ಎಂದರು.
ಆಹಾರ ಪೂರಕಗಳ ಆವಿಷ್ಕಾರ:ಆಯುರ್ವೆದ ಎಂದರೆ ಜೀವನ ವಿಧಾನವೇ ಹೊರತು ಮತ್ತೇನಲ್ಲ. ಪೂರ್ವಿಕರು ಮನುಕುಲದ ಒಳಿತಿಗೆ ನೀಡಿದ ಔಷಧೀಯ ಸಸ್ಯಗಳನ್ನು ಬಳಸಿಕೊಂಡು ವಿವಿಧ ಗಿಡಮೂಲಿಕೆ ಆಹಾರ ಪೂರಕಗಳನ್ನು ಆವಿಷ್ಕರಿಸಲಾಗಿದೆ. ಗುಣಪಡಿಸಲಾಗದ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಪ್ರಿಬಯಾಟಿಕ್ ಮತ್ತು ಪ್ರೊಬಯಾಟಿಕ್​ಗಳ ಮೂಲಕ ಪರಿಹಾರ ಕಂಡುಕೊಳ್ಳಲಾಗಿದೆ. ಈ ಉತ್ಪನ್ನಗಳ ಮತ್ತೊಂದು ವಿಶೇಷತೆ ಎಂದರೆ, ಆಯುರ್ವೆದ ಜತೆಗೆ ಆಲೋಪಥಿ ಔಷಧ ವಿಜ್ಞಾನ ತತ್ವವನ್ನು ಸಮ್ಮಿಳಿತಗೊಳಿಸಿರುವುದು. ಆಲೋಪಥಿ ಔಷಧ ಸಹಿತ ಮುಂದುವರಿಸುವುದಕ್ಕೂ ಅಭ್ಯಂತರವಿಲ್ಲ ಎಂದರು.
ವೆಚ್ಚದಾಯಕವಲ್ಲ:ಕಡು ಬಡವರಿಂದ ಆಗರ್ಭ ಶ್ರೀಮಂತರವರೆಗೆ ಮಿರಾಕಲ್ ಡ್ರಿಂಕ್ಸ್ ಉತ್ಪನ್ನಗಳು ಪ್ರಯೋಜಕಾರಿ. ಕೈಗೆಟುಕುವ ದರದಲ್ಲಿ ಲಭ್ಯ. ಕಿಣ್ವ, ಜೀವಕೋಶಗಳ ಬಲವರ್ಧನೆ, ಚಯಾಪಚಯ ಕ್ರಿಯೆ, ಉಸಿರಾಟ ಕ್ರಿಯೆಯನ್ನು ಸುಧಾರಿಸುವ ಮೂಲಕ ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ. ಧ್ಯಾನ, ಯೋಗ, ಪ್ರಾಣಾಯಾಮ ಜತೆಗೆ ದೇಹಕ್ಕೆ ಲಾಭದಾಯಕವಾದ ಆಹಾರ ಪದಾರ್ಥಗಳನ್ನು ಮಾತ್ರ ಸೇವಿಸಿದರೆ ಗಿಡಮೂಲಿಕೆ ಔಷಧ ಇನ್ನಷ್ಟು ಪರಿಣಾಮಕಾರಿ ಆಗುತ್ತದೆ. ಮಿರಾಕಲ್ಸ್ ಡ್ರಿಂಕ್ಸ್ ಸೇವಿಸಲಾರಂಭಿಸಿದ ಅನೇಕರಿಗೆ 10-15 ದಿನಗಳೊಳಗೆ ಫಲಿತಾಂಶ ಪಡೆದ ನಿದರ್ಶನಗಳಿವೆ ಎಂದು ಎಸ್.ಎಂ.ರಾಜು ತಿಳಿಸಿದರು. ಭಾರತದಲ್ಲಿ ಮಿರಾಕಲ್ ಡ್ರಿಂಕ್ಸ್ ಎಂದು 12 ಭಾಷೆಗಳಲ್ಲಿ ಮಾಹಿತಿ, ವಿವರಗಳನ್ನು ಒದಗಿಸಲಾಗಿದೆ. ವಿದೇಶಗಳಲ್ಲಿ ವೈದಿಕ್ ಡ್ರಿಂಕ್ ಎಂದು 6 ಭಾಷೆಗಳಲ್ಲಿ ಪರಿಚಯಿಸಲಾಗಿದೆ. ಉತ್ಪನ್ನಗಳ ಮಾಹಿತಿ, ಬಳಕೆ ವಿಧಾನವೂ ಸೇರಿ ಆನ್​ಲೈನ್ ಮೂಲಕ ಖರೀದಿಗೂ ಅವಕಾಶವಿದೆ ಎಂದರು.
ಮನೆಮದ್ದುಗಳನ್ನು ಮರೆಯಬಾರದುಕಾಯಿಲೆಗಳು ಹಾಗೂ ಅವುಗಳಿಗೆ ಪರಿಹಾರದ ಕುರಿತ ನಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳಬೇಕು. ಮರೆತುಹೋಗಿರುವ ಮನೆಮದ್ದುಗಳ ಬಳಕೆಯನ್ನು ಪುನರಾರಂಭಿಸಬೇಕು ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರು ಅಭಿಪ್ರಾಯಪಟ್ಟರು. ಕಳೆದ 200-300 ವರ್ಷಗಳಿಂದ ಪ್ರಚಲಿತಕ್ಕೆ ಬಂದ ಇಂಗ್ಲಿಷ್ ಔಷಧ ಪದ್ಧತಿ ಇಂದು ವಿಶ್ವಾದ್ಯಂತ ಪ್ರಸಿದ್ಧವಾಗಿದೆ. ಅದರ ಉತ್ಪಾದನೆ ಹಾಗೂ ಜನರಿಗೆ ತಲುಪಿಸುವ ವ್ಯವಸ್ಥೆ ಸಾಕಷ್ಟು ವಿಸ್ತಾರವಾಗಿದೆ. ಆದರೆ ಯಾರೂ ಸುಖವಾಗಿಲ್ಲ. ಜನರು ಈಗ ಅಳವಡಿಸಿಕೊಂಡಿರುವ ಜೀವನ ಶೈಲಿ ಹಾಗೂ ಮನೆಮದ್ದುಗಳನ್ನು ಮರೆತಿದ್ದೆ ಇದಕ್ಕೆ ಪ್ರಮುಖ ಕಾರಣ ಎಂದರು.
ಆರೋಗ್ಯ ಕ್ಷೇತ್ರದಲ್ಲಿ ಹುಡುಕಾಟದ ಕುತೂಹಲದಲ್ಲಿ ಅನೇಕ ತಜ್ಞರನ್ನು ಸಂರ್ಪಸಿ ವಿಚಾರ ತಿಳಿದುಕೊಳ್ಳುತ್ತಿರುತ್ತೇನೆ. ಮಧುಮೇಹದ ಮಟ್ಟ ಎಲ್ಲರಿಗೂ ಇಂತಿಷ್ಟೇ ಇರಬೇಕೆಂದು ಅಮೆರಿಕದಲ್ಲಿ ಕುಳಿತ 7-8 ಜನರು ನಿರ್ಧರಿಸುತ್ತಾರೆ. ವ್ಯಾಪಾರಕ್ಕೆ ಅನುಗುಣವಾಗಿ ಈ ಮಟ್ಟವನ್ನು ಬದಲಾಯಿಸಿ ಜನರಲ್ಲಿ ಗಾಬರಿ ಹುಟ್ಟಿಸಲಾಗುತ್ತದೆ. ಊಟದ ನಂತರ 750ರಿಂದ 1,300ರವರೆಗೆ ಮಧುಮೇಹ ಹೊಂದಿದವರೂ ಇದ್ದಾರೆ. ಡಾ.ಬಿ.ಎಂ. ಹೆಗ್ಡೆ ಅವರು ಹೇಳುವಂತೆ, 1,800ರ ಮಟ್ಟದ ಮಧುಮೇಹ ಹೊಂದಿದ್ದ ಅವರ ಮಿತ್ರರೊಬ್ಬರು 92 ವರ್ಷ ಜೀವಿಸಿದ್ದರು. ಪ್ರತಿಯೊಬ್ಬರಿಗೂ ಮಾನದಂಡಗಳು ಬೇರೆ ಬೇರೆಯಾಗುತ್ತವೆ. ಎಲ್ಲರಿಗೂ ಸಮಾನ ಮಟ್ಟ ನಿಗದಿ ಮಾಡಲಾಗದು. ಕರೊನಾ ಸಮಯದಲ್ಲೂ ಮನೆಮದ್ದುಗಳನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿದವರಿಗೆ ಹೆಚ್ಚಾಗಿ ಬಾಧಿಸಿಲ್ಲ. ಕಾಯಿಲೆಗಳ ಕುರಿತು ನಮ್ಮ ಆಲೋಚನೆಗಳನ್ನು ಬದಲಾಯಿಸಿಕೊಳ್ಳಬೇಕೆ ವಿನಾ ಭಯಪಡಬಾರದು. ಇಂಗ್ಲಿಷ್ ಪದ್ಧತಿಯ ವೈದ್ಯರೂ ರೋಗಿಗಳ ಕುರಿತು ಕಾಳಜಿಯಿಂದ ಚಿಕಿತ್ಸೆ ನೀಡುತ್ತಾರೆ. ಆದರೆ ಆಯುರ್ವೆದದಂತಹ ಪರ್ಯಾಯ ಪದ್ಧತಿಗಳನ್ನೂ ಬಳಕೆ ಮಾಡುವತ್ತ ಗಮನ ಹರಿಸಬೇಕು ಎಂದು ವಿಜಯ ಸಂಕೇಶ್ವರ ಅವರು ಹೇಳಿದರು.
ನನ್ನ ಸಂಪರ್ಕಕ್ಕೆ ಬಂದವರಿಗೆಲ್ಲರಿಗೂ ಒಂದಿಲ್ಲೊಂದು ವೈದ್ಯರ ಮಾಹಿತಿ ನೀಡಿ ಕಳುಹಿಸುತ್ತೇನೆ. ಗ್ಯಾಂಗ್ರಿನ್ ಸಮಸ್ಯೆಗೆ ಪರಿಣಾಮಕಾರಿ ಔಷಧ ನೀಡುವ ಸಾಂಗ್ಲಿಯ ಡಾ.ಉಗಾಣೆ ಅವರ ಬಳಿಗೆ ಐದು ನೂರಕ್ಕೂ ಹೆಚ್ಚು ಜನರನ್ನು ಕಳಿಸಿಕೊಟ್ಟಿದ್ದೇನೆ. ಅದೇ ರೀತಿ ಹುಬ್ಬಳ್ಳಿಯಲ್ಲಿ ಡಾ.ಹಬೀಬ್ ಅವರು ತೀವ್ರ ಹೃದ್ರೋಗ ಸಮಸ್ಯೆಗಳಿಗೆ ಚಿಲೇಷನ್ ಥೆರಪಿ ಮೂಲಕ ಪರಿಣಾಮಕಾರಿ ಚಿಕಿತ್ಸೆ ನೀಡುತ್ತಾರೆ. ಸಾಮಾನ್ಯ ಚಿಕಿತ್ಸೆ ಹೋಲಿಕೆಯಲ್ಲಿ ಅತ್ಯಂತ ಕಡಿಮೆ ಹಣದಲ್ಲಿ ಹಾಗೂ ಸರಳವಾಗಿ ಚಿಕಿತ್ಸೆ ನೀಡುವ ಇಂತಹ ವೈದ್ಯರ ಮೂಲಕ ಅಷ್ಟು ಜನರಿಗೆ ಸಹಾಯ ಮಾಡಿದ್ದೇನೆ ಎಂಬ ಸಂತೋಷ ನನಗಿದೆ. ಇದೇ ರೀತಿ ಪರ್ಯಾಯ ಔಷಧಗಳ ಹುಡುಕಾಟದಲ್ಲಿದ್ದಾಗ ಎಸ್.ಎಂ.ರಾಜು ಅವರು ಸಂಶೋಧಿಸಿರುವ ಮಿರಾಕಲ್ ಡ್ರಿಂಕ್ಸ್ ಬಗ್ಗೆ ಓದಿದೆ. ಅವರಿಗೆ ಕರೆ ಮಾಡಿ, ಹತ್ತಾರು ವರ್ಷಗಳಿಂದ ಬಾಧಿಸುತ್ತಿದ್ದ ವಾತದ ಸಮಸ್ಯೆ ಗುಣಪಡಿಸಲು ಬಳಸಿದೆ. ಕೇವಲ 15 ದಿನದಲ್ಲಿ ಶೇ.50 ಸಮಸ್ಯೆ ಕಡಿಮೆಯಾಗಿದೆ. ನನ್ನ ಸ್ನೇಹಿತರು ಹಾಗೂ ಸಂಬಂಧಿಕರಲ್ಲಿ ವಿವಿಧ ಸಮಸ್ಯೆಗಳಿರುವ 25 ಜನರಿಗೆ ಮಿರಾಕಲ್ ಡ್ರಿಂಕ್ಸ್ ನೀಡಿದ್ದೇನೆ. ಇಂದು ಅವರಲ್ಲಿ 15 ಜನರಿಗೆ ಕರೆ ಮಾಡಿ ಮಾತನಾಡಿಸಿದೆ. ಒಬ್ಬರಲ್ಲಿ ಔಷಧದಿಂದ ಯಾವುದೇ ಧನಾತ್ಮಕ ಹಾಗೂ ನಕಾರಾತ್ಮಕ ಪರಿಣಾಮ ಬೀರಿಲ್ಲ. ಉಳಿದ 14 ಜನರಲ್ಲಿ ಅರ್ಧದಷ್ಟು ಸಮಸ್ಯೆ ಗುಣಮುಖವಾಗಿದೆ ಎಂದು ವಿಜಯ ಸಂಕೇಶ್ವರ ಅವರು ಮಿರಾಕಲ್ ಡ್ರಿಂಕ್ಸ್ ಕುರಿತು ತಿಳಿಸಿದರು.
ನೇರವಾಗಿ ಕೆಲವರಿಗೆ ಮಾತ್ರ ಸಹಾಯ ಮಾಡಲು ಸಾಧ್ಯ. ಆದರೆ ನನ್ನ ಕುಟುಂಬದಂತಿರುವ ನಾಡಿನ ಆರೂವರೆ ಕೋಟಿ ಜನರಿಗೂ ಉತ್ತಮ ಆರೋಗ್ಯ ಸಿಗಬೇಕೆಂದರೆ ಎಲ್ಲೆಡೆ ಮಿರಾಕಲ್ ಡ್ರಿಂಕ್ಸ್ ದೊರಕಲಿ ಎಂದು ನನ್ನ ಕೈಲಾದ ಸೇವೆ ಮಾಡುತ್ತಿದ್ದೇನೆ. ನಮಗೆ ಮಾತ್ರವಲ್ಲ, ಎಲ್ಲರಿಗೂ ಉತ್ತಮ ಆರೋಗ್ಯ ಸಿಗಲಿ ಎಂಬ ನಿಟ್ಟಿನಲ್ಲಿ ಯಾವುದೇ ಲಾಭಾಕಾಂಕ್ಷೆ ಇಲ್ಲದೆ ಈ ಹಿಂದಿನಿಂದಲೂ ನಮ್ಮ ಕುಟುಂಬ ಕೆಲಸ ಮಾಡುತ್ತಿದೆ. ಬಾಬಾ ರಾಮದೇವ್ ಅವರ ಔಷಧಗಳ ಪ್ರಚಾರದಲ್ಲಿ ಅನೇಕ ವರ್ಷದಿಂದ ತೊಡಗಿದ ಪರಿಣಾಮ ಇದೀಗ ನಾಡಿನಾದ್ಯಂತ ರಾಮದೇವ್ ಅವರ ಔಷಧ ಉತ್ಪನ್ನಗಳು ದೊರಕುತ್ತಿವೆ. ಹೆಚ್ಚು ಜನರಿಗೆ ಈ ಔಷಧ ದೊರಕಲಿ ಎಂಬ ಉದ್ದೇಶದಲ್ಲಿ ಮುಂದೆಯೂ ನಮ್ಮ ಕುಟುಂಬ ಈ ಸೇವೆಯನ್ನು ಮುಂದುವರಿಸುತ್ತದೆ ಎಂದರು.
ಪದ್ಮಶ್ರೀ ವಿಜಯ ಸಂಕೇಶ್ವರ ಒತ್ತಾಸೆಕೇಂದ್ರ ಸರ್ಕಾರದ ಪರವಾನಗಿ ಪಡೆದು ಮಿರಾಕಲ್ ಡ್ರಿಂಕ್ಸ್​ನ 8 ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ರಾಜ್ಯದ ಪ್ರತಿ ತಾಲೂಕಿಗೆ ಕೈಗೆಟುಕುವ ದರದಲ್ಲಿ ಪರಿಣಾಮಕಾರಿ ಗಿಡಮೂಲಿಕೆ ಔಷಧ ಲಭ್ಯವಾಗಬೇಕು ಎಂಬ ಗುರಿ ಇದೆ. ಈ ಸಂಕಲ್ಪಕ್ಕೆ ವಿಆರ್​ಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ, ಪದ್ಮಶ್ರೀ ಡಾ.ವಿಜಯ ಸಂಕೇಶ್ವರ ಅವರು ಒತ್ತಾಸೆಯಾಗಿದ್ದಾರೆ ಎಂದು ಎಸ್.ಎಂ.ರಾಜು ತಿಳಿಸಿದರು.
ಸಸ್ಯ ಸಂಪತ್ತಿನ ರಾಜ!ಮೂಲತಃ ಕರ್ನಾಟಕದವರಾದ ಎಸ್.ಎಂ.ರಾಜು ಬಿಹಾರದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಮಾಡಿದ ಸಾಧನೆಯು ವಿಶ್ವದ ಮೆಚ್ಚುಗೆಗೆ ಪಾತ್ರವಾಗಿತ್ತು. ಬಡತನ ನಿಮೂಲನೆಗಾಗಿ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿ 2009ರ ಆಗಸ್ಟ್​ನಲ್ಲಿ ಒಂದೇದಿನ 1 ಕೋಟಿ ಸಸಿ ನೆಡುವಿಕೆಗೆ ಕಾರಣೀಭೂತರಾಗಿದ್ದರು. ‘ಸಸ್ಯ ಸಂಪತ್ತಿನ ರಾಜ’ ಎಂಬ ಅಭಿದಾನದಿಂದ ದೇಶ, ವಿದೇಶದಲ್ಲಿ ಹೆಸರುವಾಸಿಯಾಗಿದ್ದರು.
ಕುಟುಂಬವೇ ಪ್ರೇರಣೆ, ಯಶಸ್ಸಿನ ಗುಟ್ಟುದೇಹ ಮತ್ತು ಗಿಡವೇ ನೈಜ ದೇವರು. ವೃಕ್ಷಗಳು ಗಾಳಿಯನ್ನು ಶುದ್ಧೀಕರಿಸಿ ಮಾನವನ ಶರೀರವನ್ನು ಸ್ವಸ್ಥವಾಗಿಡಲು ನೆರವಾಗುತ್ತವೆ ಎನ್ನುವುದು ತಿಳಿದುಕೊಂಡ ಎಸ್.ಎಂ.ರಾಜು ಸಂಶೋಧನೆಗೆ ಇಳಿದಿದ್ದಾರೆ. ಅರಿಶಿನ ಪುಡಿ, ದಾಲ್ಚಿನ್ನಿ ಪುಡಿ, ಮೆಂತ್ಯ ಪುಡಿ, ಅಗಸೆ ಬೀಜಗಳ, ಕೊತ್ತಂಬರಿ, ಪುದಿನ, ಆಮ್ಲ, ಬೇವು, ಇಂಡಿಯನ್ ಬ್ಲಾಕ್ಬೆರ್ರಿ, ಅರ್ಜುನ ಇತ್ಯಾದಿ ಔಷಧೀಯ ಸಸ್ಯಗಳನ್ನು ಉಪಯೋಗಿಸಿ ಈವರೆಗೆ 14 ಗಿಡಮೂಲಿಕೆ ಪಾನೀಯಗಳನ್ನು ಅಭಿವೃದ್ಧಿಪಡಿಸಿದ್ದಾರೆ. ನಿರಂತರ 35 ವರ್ಷಗಳ ಸಂಶೋಧನೆ ಮತ್ತು ಪರಿಶ್ರಮದ ಫಲವಿದು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರ ತಂದೆ ಮುನಿಲಕ್ಕಪ್ಪ ಮತ್ತು ರಕ್ತಕ್ಯಾನ್ಸರ್​ಗೆ ಒಳಗಾಗಿದ್ದ 2ನೇ ಮಗ ಅವಿನಾಶ್ ರಾಜು ಈ ಗಿಡಮೂಲಿಕೆ ಔಷಧಗಳನ್ನು ಬಳಸಿ ಗುಣವಾಸಿಯಾಗಿದ್ದಾರೆ. ತಮ್ಮ ಕುಟುಂಬವೇ ಪ್ರೇರಣೆ, ಯಶಸ್ಸಿನ ಗುಟ್ಟು ಎನ್ನುವ ಎಸ್.ಎಂ.ರಾಜು, ಅದೇ ಕಾಲಕ್ಕೆ ಬಿಹಾರದ ನಳಂದ ವೈದ್ಯಕೀಯ ಕಾಲೇಜಿನ ಮಕ್ಕಳ ತಜ್ಞರ ವಿಭಾಗದ ಮುಖ್ಯಸ್ಥ ಡಾ.ಅರುಣ್​ಕುಮಾರ್ ಠಾಕೂರ್, ಕೇಂದ್ರ ಆಯುಷ್ ಸಚಿವಾಲಯದ ಡಾ.ಡಿ.ಸಿ.ಕಟೋಚ್ ಸಹಿತ ಹಲವರ ಮಾರ್ಗದರ್ಶನವನ್ನು ರಾಜು ಸ್ಮರಿಸುತ್ತಾರೆ.
ಜನಾರೋಗ್ಯದ ಕಾಳಜಿಯುಳ್ಳವರು ನೈಜ ಹಿತಚಿಂತಕರುದೇಶದ ಸಂಪತ್ತನ್ನು ಕೊಳ್ಳೆ ಹೊಡೆದು ವಿದೇಶದಲ್ಲಿ ನೆಲೆ ಕಂಡುಕೊಳ್ಳುವವರು ಹೆಚ್ಚಿರುವಾಗ ಜನ-ಸಾಮಾನ್ಯನ ಆರೋಗ್ಯದ ಬಗ್ಗೆ ಕಾಳಜಿಯುಳ್ಳವರು ನೈಜ ಹಿತ ಚಿಂತಕರು. ದೇಶ ಮತ್ತು ನಾಡಿನ ಶ್ರೇಯೋಭಿಲಾಷಿಗಳು ಎಂದು ಚಿತ್ರನಟ ಸುಂದರರಾಜ್ ಶ್ಲಾಘಿಸಿದರು. ಮಿರಾಕಲ್ ಡ್ರಿಂಕ್ಸ್ ಸಂಸ್ಥೆ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೀರ್ಘಕಾಲದ ಕಾಯಿಲೆಗಳನ್ನು ಗುಣಪಡಿಸಿ ಎಲ್ಲ ವರ್ಗದ ಜನರಿಗೆ ನೆಮ್ಮದಿ ಬದುಕು ಕಟ್ಟಿಕೊಡಬೇಕೆಂಬ ಸಂಸ್ಥೆಯ ಸಂಸ್ಥಾಪಕ ಎಸ್.ಎಂ.ರಾಜು ಕಳಕಳಿ, ಇಂತಹವರಿಗೆ ಬೆನ್ನೆಲುಬಾಗಿ ನಿಂತ ಯಶಸ್ವಿ ಉದ್ಯಮಿ ಪದ್ಮಶ್ರೀ ಡಾ.ವಿಜಯ ಸಂಕೇಶ್ವರ ಅವರ ನಿಸ್ವಾರ್ಥ ಸೇವೆಯು ಸಮಾಜಕ್ಕೆ ಮೇಲ್ಪಂಕ್ತಿಯಾಗಿದೆ ಎಂದರು. ಭೋಗ ಮತ್ತು ಸರಕು ಸಂಸ್ಕೃತಿಯ ಆಡಂಬರದಲ್ಲಿ ಜೀವನ ಶೈಲಿ ಮತ್ತು ಆಹಾರ ಪದ್ಧತಿಯು ಬದಲಾಗಿ ಅನೇಕ ರೋಗ-ರುಜಿನಗಳು ಕಾಡಲಾರಂಭಿಸಿವೆ. ಇಂತಹ ವಿಷಮ ಪರಿಸ್ಥಿತಿಯಲ್ಲಿ ಆಯುರ್ವೆದದ ಪ್ರಾಮುಖ್ಯತೆ ತಿಳಿಸಿಕೊಡಬೇಕಾದ ತುರ್ತು ಅಗತ್ಯವಿದೆ ಎಂದ ಸುಂದರರಾಜ್, ಆಯುರ್ವೆದ ಪದ್ಧತಿಯಡಿ ಗುಣಮುಖರಾಗುವುದು ನಿಧಾನವೇ ಆದರೂ ಶಾಶ್ವತವಾಗಿ ರೋಗ ವಾಸಿಯಾಗುತ್ತದೆ. ದೇಹ ಕಟ್ಟುಮಸ್ತಾಗಿ ಬೆಳೆಸಿಕೊಂಡರಷ್ಟೇ ಸಾಲದು, ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಎಚ್ಚರಿಕೆ ವಹಿಸಿದ್ದರೆ ನಮ್ಮ ಮನೆಯಲ್ಲಿ ದುಃಖದ ಘಟನೆಯನ್ನು ತಪ್ಪಿಸಲು ಸಾಧ್ಯವಿತ್ತು ಎಂದು ಭಾವುಕರಾದರು.
ಪಾನೀಯ ಪವಾಡರಾಜು ಅವರ ಸಂಸ್ಥೆಯ ಉತ್ಪನ್ನವು ನನ್ನ ಆರೋಗ್ಯ ಸುಧಾರಿಸಿ, ಮರೆಯಲಾಗದ ಪವಾಡ ಮಾಡಿಬಿಟ್ಟಿದೆ. ದೃಢಕಾಯ, ಜೀವನೋತ್ಸಾಹಿ ಯಾಗಿ ನಿಮ್ಮ ಮುಂದೆ ನಿಲ್ಲುವುದಕ್ಕೂ ಅದೇ ಕಾರಣ ವೆಂದು ಸ್ವಾನುಭವವನ್ನು ಸುಂದರ ರಾಜ್ ವಿವರಿಸಿದರು. ವೆರಿಕೋಸ್ ವೇನ್ಸ್ ಕಾಯಿಲೆಯಿಂದ ಬಳಲುತ್ತಿದ್ದೆ. ಕಳೆದ 3-4 ವರ್ಷಗಳಿಂದ ಮಿರಾಕಲ್ ಡ್ರಿಂಕ್ಸ್ ಸೇವಿಸುತ್ತಿದ್ದು, ಸುಸ್ತು-ದಣಿವು ಮಾಯವಾಗಿ ಹೊಸ ಚೈತನ್ಯ ತಂದಿದೆ ಎಂದರು.
ಗಂಭೀರ ಸಮಸ್ಯೆಗಳಿಗೆ ಪರಿಹಾರಗ್ಯಾಸ್ಟ್ರಿಕ್, ಥೈರಾಯ್್ಡ ಮತ್ತು ಶ್ವಾಸಕೋಶ, ರಕ್ತದೊತ್ತಡ, ವೆರಿಕೋಸ್ ವೇನ್, ಕ್ಯಾನ್ಸರ್, ಕೂದಲು ಮತ್ತು ಚರ್ಮರೋಗ, ಹೃದ್ರೋಗ, ಮೂಳೆ, ಮಹಿಳೆ ಹಾಗೂ ಪುರುಷರ ಆರೋಗ್ಯ ಸಮಸ್ಯೆಗಳು ಹಾಗೂ ಮಧುಮೇಹ, ಕಿಡ್ನಿ, ಮಿದುಳು, ಲೈಂಗಿಕ, ಲಿವರ್, ಕಣ್ಣಿನ ಸಮಸ್ಯೆಗಳಿಗೆ ಮಿರಾಕಲ್​ನಲ್ಲಿ ಚಿಕಿತ್ಸೆ ಲಭ್ಯ.
ಮಿರಾಕಲ್ ಡ್ರಿಂಕ್ಸ್ ಉತ್ಪನ್ನಗಳುಎಸ್ 1 ಆಂಟಿ ಏಜಿಂಗ್ (ವಯಸ್ಸು ನಿರೋಧಕ)ಎಸ್ 2 ಆರ್ಥೊ ಕೇರ್ (ಮೂಳೆ ಚಿಕಿತ್ಸೆ)ಎಸ್ 3 ಕಾರ್ಡಿಯೋ ವಸ್ಕುಲಾರ್ (ಹೃದ್ರೋಗ ಚಿಕಿತ್ಸೆ)ಎಸ್ 4 ಲಿವರ್ ಕೇರ್ (ಯಕೃತ್ ಚಿಕಿತ್ಸೆ)ಎಸ್ 5 ರೇನಲ್ ಕೇರ್ (ಕಿಡ್ನಿ ಚಿಕಿತ್ಸೆ)ಎಸ್ 6 ವಾತ ಚಿಕಿತ್ಸೆ (ಗ್ಯಾಸ್ಟ್ರೋ ಕೇರ್)ಎಸ್ 7 ಇಮ್ಯೂನ್ ಕೇರ್ (ರೋಗನಿರೋಧಕ ಶಕ್ತಿ)ಎಸ್10 ಶುಗರ್ ಕೇರ್ (ಮಧುಮೇಹ ಚಿಕಿತ್ಸೆ)
ಖರೀದಿಗೆ ಸಂರ್ಪಸಿ:ಮಳ್ಳೂರ್ ಫ್ಲೋರಾ ಆಂಡ್ಹಾಸ್ಪಿಟಾಲಿಟಿ ಪ್ರೖೆ.ಲಿ., ನಂ.55, 1ನೇ ಅಡ್ಡರಸ್ತೆ, 7ನೇ ಮುಖ್ಯರಸ್ತೆ, ಮೋರ್ ಸ್ಟೋರ್ ಹಿಂಭಾಗ, ಗಂಗಮ್ಮ ದೇವಸ್ಥಾನ ರಸ್ತೆ, ಗಂಗಾನಗರ, ಬೆಂಗಳೂರು-32ದೂ: 080 4748 2888, 78470 79999www.miracledrinks.in
ನೇತ್ರ ಚಿಕಿತ್ಸೆಯಲ್ಲಿ ಮಿರಾಕಲ್ ಡ್ರಿಂಕ್ಸ್ ಬಳಕೆ ಮಾಡುತ್ತಿದ್ದೇವೆ. ದೃಷ್ಟಿ ಕುರಿತ ಅನೇಕ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಅದೇ ರೀತಿ ಇಮ್ಯುನೊ, ಗ್ಯಾಸ್ಟ್ರೋ ಮುಂತಾದ ಔಷಧಗಳೂ ಉತ್ತಮ ಫಲ ನೀಡುತ್ತಿವೆ. ಈ ಎಲ್ಲ ಚಿಕಿತ್ಸೆಗಳನ್ನೂ ದಾಖಲೆ ಮಾಡುತ್ತಿದ್ದೇವೆ.| ಪ್ರೊ.ಬಿ.ಎನ್.ರಮೇಶ್ಕಟಿಜಿ ಆಯುರ್ವೆದಿಕ್ ಮೆಡಿಕಲ್ ಕಾಲೇಜು ಪ್ರಾಂಶುಪಾಲರು
ಮಾನವ ಪ್ರಯತ್ನದಿಂದ ಯಾವುದೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂಬುದಕ್ಕೆ ಎಸ್.ಎಂ.ರಾಜು ಅವರ ಈ ಸಂಶೋಧನೆಯೇ ಸಾಕ್ಷಿ. ತಮ್ಮ ತಂದೆಯವರ ಮೇಲಿನ ಪ್ರೀತಿ ಹಾಗೂ ಶ್ರದ್ಧೆಯಿಂದಾಗಿ ಈ ಔಷಧ ಹೊರಬಂದಿದೆ. ನಾನೂ ಈ ಔಷಧದ ಫಲಾನುಭವಿ. ನನ್ನ ಪರಿಚಿತರೊಬ್ಬರಿಗೆ ಕಿಡ್ನಿ ಸಮಸ್ಯೆಯಿದ್ದಾಗ ಈ ಔಷಧ ನೀಡಿದ್ದು, ಪರಿಣಾಮಕಾರಿ ಫಲಿತಾಂಶ ನೀಡುತ್ತಿದೆ.| ಗಿರಿರಾಜ್ ಸಿಂಗ್ಕೇಂದ್ರ ಸಚಿವರು
ಅನೇಕ ಜನರ ಅನಾರೋಗ್ಯವನ್ನು ಹೋಗಲಾಡಿಸಲು ಸಾಕ್ಷಾತ್ ಧನ್ವಂತರಿಯೇ ಎಸ್.ಎಂ.ರಾಜು ಅವರ ರೂಪದಲ್ಲಿ ಕರ್ನಾಟಕಕ್ಕೆ ಆಗಮಿಸಿರಬೇಕು. ಇಂತಹ ಒಂದು ಸಂಶೋಧನೆಯನ್ನು ಕೈಗೊಂಡು ಮಾನವ ಜನಾಂಗಕ್ಕೆ ಉಪಕಾರ ಮಾಡುತ್ತಿರುವ ಅವರಿಗೆ ಅಭಿನಂದನೆಗಳು.| ಡಾ.ಶ್ರೀಕೃಷ್ಣನ್ ಮಿಟ್ಠಲ್ಅನಿಮಲ್ ಹಸ್ಬೆಂಡರಿ ಬೋರ್ಡ್ ಉಪಾಧ್ಯಕ್ಷ
ಎಸ್. ಎಂ.ರಾಜು ಅವರ ಸಂಶೋಧನೆಯ ಫಲವನ್ನು ನಾನು ನೇರವಾಗಿ ಅನುಭವಿಸಿದ್ದೇನೆ. ಅತ್ಯುತ್ತಮ ರೋಗನಿರೋಧಕ ಶಕ್ತಿಯಾಗಿ ಪ್ರಯೋಜನಕಾರಿಯಾಗಿದೆ. ಈಗಿನ ಒತ್ತಡಮಯ ಜೀವನ ಶೈಲಿಯ ನಡುವೆ ಇದು ಅತ್ಯಂತ ಉಪಯೋಗಿಯಾಗಿದೆ.| ಶ್ರೀಪಾದ ನಾಯಕ್ಕೇಂದ್ರ ಸಚಿವರು
ಕೆಲವೇ ಇಂದ್ರಿಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ಜೀವನಶೈಲಿಯ ಕಾರಣಕ್ಕೆ ಅನೇಕ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಜನರ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಎಸ್.ಎಂ.ರಾಜು ಅವರ ಈ ಕಾರ್ಯದಲ್ಲಿ ಭಾಗಿಯಾಗುತ್ತೇನೆ.| ಎಸ್.ಕೆ. ರಾಮಚಂದ್ರಉಡುಪಿ ಎಸ್​ಡಿಎಂ ಆಯುರ್ವೆದ ಕಾಲೇಜಿನ ನಿವೃತ್ತ ಪ್ರಾಂಶುಪಾಲರು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × four =
Remember me
