ಬೆಂಗಳೂರು:ಅತ್ಯಂತ ಸಾಮಾನ್ಯ ಜನರೂ ತಮ್ಮಆರೋಗ್ಯ ಸಮಸ್ಯೆಗಳನ್ನು ಕೈಗೆಟುಕುವ ದರದಲ್ಲಿ ಪರಿಹರಿಸಿಕೊಳ್ಳುವ ನಿಟ್ಟಿನಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಎಂ.ಎಸ್. ರಾಜು ಅವರು ಸಂಶೋಧಿಸಿರುವ ‘ಮಿರಾಕಲ್ ಡ್ರಿಂಕ್ಸ್’ ಅತ್ಯುಪಕಾರಿ ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್, ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ತಿಳಿಸಿದ್ದಾರೆ.
ಸೋಮವಾರ ನಗರದ ಖಾಸಗಿ ಹೋಟೆಲ್​ನಲ್ಲಿ ಆಯುರ್ವೆದ, ಯುನಾನಿ ಹಾಗೂ ಅಲೋಪಥಿ ವೈದ್ಯರ ಜತೆ ಮಿರಾಕಲ್ ಡ್ರಿಂಕ್ಸ್ ಕುರಿತು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಳೆದ ಹತ್ತಾರು ವರ್ಷಗಳಿಂದ ಬಾಧಿಸುತ್ತಿದ್ದ ವಾತ ಸಮಸ್ಯೆ ಮಿರಾಕಲ್ ಡ್ರಿಂಕ್ಸ್ ಸೇವನೆಯಿಂದ ಕೇವಲ 15 ದಿನದಲ್ಲಿ ಅರ್ಧದಷ್ಟು ಗುಣವಾಗಿದೆ. ಇಂದು ಮಾರಣಾಂತಿಕ ಕಾಯಿಲೆಗಳಿಗೆ ಔಷಧ ಹಾಗೂ ಚಿಕಿತ್ಸೆ ವೆಚ್ಚ ಭರಿಸಲು ಸಾಮಾನ್ಯ ಜನರಿಗೆ ಸಾಧ್ಯವಾಗದಂತಹ ಸ್ಥಿತಿ ಇದೆ. ಔಷಧಗಳ ಸೇವನೆ ಜತೆಗೆ ಮನೆಮದ್ದುಗಳ ಕುರಿತ ಜ್ಞಾನವನ್ನು ನಾವು ಪುನಃ ಅಳವಡಿಸಿಕೊಳ್ಳಬೇಕು. ಅಲೋಪಥಿ ವೈದ್ಯರೂ ಪರ್ಯಾಯ ಚಿಕಿತ್ಸೆಗಳ ಬಳಕೆ ಕುರಿತು ಆಸ್ಥೆ ವಹಿಸಬೇಕಿದೆ ಎಂದರು.
ನಮ್ಮ ಅತ್ಯಂತ ಆತ್ಮೀಯರಿಗೆ ಸಣ್ಣ ಪ್ರಮಾಣದ ಸಹಾಯ ಮಾಡಬಹುದೇ ವಿನಃ ನಾಡಿನ ಕೋಟ್ಯಂತರ ಜನರಿಗೆ ಕಡಿಮೆ ದರದಲ್ಲಿ ಪರ್ಯಾಯ ಚಿಕಿತ್ಸೆಗಳು ಲಭಿಸಬೇಕೆಂದರೆ ವಿಶೇಷ ಪ್ರಯತ್ನ ಆಗಬೇಕು. ರಾಜು ಅವರು ಅತೀವ ಆಸಕ್ತಿಯಿಂದ ಸಂಶೋಧಿಸಿದ ಔಷಧವನ್ನು ತಮ್ಮ ತಂದೆಯ ಕಿಡ್ನಿ ಸಮಸ್ಯೆ, ಪುತ್ರನ ಕ್ಯಾನ್ಸರ್ ಸಮಸ್ಯೆಯನ್ನು ಗುಣಪಡಿಸಲು ಬಳಕೆ ಮಾಡಿದ್ದಾರೆ. ಇದರ ಮೂಲಕ ಆರೂವರೆ ಕೋಟಿ ಕನ್ನಡಿಗರಿಗೂ ಅನಾರೋಗ್ಯಕ್ಕೆ ಪರಿಹಾರ ಸಿಗುವ ವಿಶ್ವಾಸವಿದೆ. ಯಾವುದೇ ಲಾಭದ ಉದ್ದೇಶವಿಲ್ಲದೆ, ಸೇವಾ ಮನೋಭಾವದಿಂದ ನಮ್ಮ ಇಡೀ ಕುಟುಂಬ, ಆಯುರ್ವೆದ ಸೇರಿದಂತೆ ಭಾರತೀಯ ವೈದ್ಯ ಪದ್ಧತಿಗಳಿಗೆ ಪ್ರೋತ್ಸಾಹ ನೀಡುವುದನ್ನು ಮುಂದುವರಿಸಲಿದೆ. ಮಿರಾಕಲ್ ಡ್ರಿಂಕ್ಸ್ ಪ್ರತಿ ತಾಲೂಕಿನಲ್ಲೂ ವೈದ್ಯರ ಮೂಲಕ ತಲುಪಿ ಜನರು ಕಡಿಮೆ ಹಣದಲ್ಲಿ ಉತ್ತಮ ಆರೋಗ್ಯ ಪಡೆಯುವಂತಾಗಲಿ ಎಂದು ಡಾ. ವಿಜಯ ಸಂಕೇಶ್ವರ ಆಶಿಸಿದರು.
ತಮ್ಮ ಸಂಶೋಧನೆ ಕುರಿತು ವಿವರಿಸಿದ ಕನ್ನಡಿಗ ಹಾಗೂ ಬಿಹಾರ ಕೇಡರ್​ನ ನಿವೃತ್ತ ಐಎಎಸ್ ಅಧಿಕಾರಿ ಎಸ್. ಎಂ. ರಾಜು, ‘1982ರಲ್ಲಿ ರುಮಟಾಯ್್ಡ ಆರ್ಥೈಟಿಸ್​ನಿಂದ ಬಳಲುತ್ತಿದ್ದ ನನಗೆ ವೈದ್ಯರು ನೀಡುತ್ತಿದ್ದ ಔಷಧ ಅಸಹನೀಯವಾಗಿದ್ದವು. ಇದರಿಂದ ಮುಕ್ತಿ ಪಡೆಯಲು ಪ್ರಾಚೀನ ಆಯುರ್ವೆದ ಪುಸ್ತಕಗಳನ್ನು ಹುಡುಕಾಡಲು ಪ್ರಾರಂಭಿಸಿದಾಗ ಇತರ ಅನೇಕ ಕಾಯಿಲೆಗಳಿಗೂ ಔಷಧ ಸಂಶೋಧಿಸಲು ಸಾಧ್ಯವಾಯಿತೆಂದರು.
ಸ್ನೇಹಿತರು, ಸಹೋದ್ಯೋಗಿ ಅಧಿಕಾರಿಗಳಿಗೆ ವಯಸ್ಸು ಪ್ರತಿರೋಧಕ (ಆಂಟಿ ಏಜಿಂಗ್), ವಾತ ಪ್ರತಿರೋಧಕ (ಗ್ಯಾಸ್ಟ್ರೋ ಕೇರ್) ಔಷಧ ನೀಡಿದಾಗ ಉತ್ತಮ ಪರಿಣಾಮ ತೋರಿದವು. ಮುಂದಿನ ದಿನಗಳಲ್ಲಿ ವಿವಿಧ ಕಾಯಿಲೆಗಳಿಗೆ 14 ಔಷಧ ಸಂಶೋಧಿಸಿ ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರು, ನ್ಯಾಯಾಧೀಶರು, ಕೇಂದ್ರ ಸಚಿವರು ಸೇರಿ ಅನೇಕ ಗಣ್ಯರಿಗೆ ನೀಡಿದಾಗ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಿತು. ಗುಣವಾಗದ ಕಾಯಿಲೆಗಳಿಂದಲೂ ಮುಕ್ತಿ ಪಡೆದ ಅನೇಕರು ತಮ್ಮ ಮೇಲೆ ‘ಮಿರಾಕಲ್’ (ಚಮತ್ಕಾರ) ಆಯಿತು ಎಂದರು. ಸಾಮಾನ್ಯ ಜನರಿಗೂ ಇದು ಸಿಗುವಂತೆ ಮಾಡಿ ಎಂದರು. ಅದಕ್ಕೆಂದೇ ‘ಮಿರಾಕಲ್ ಡ್ರಿಂಕ್ಸ್’ ಹೆಸರಿನಲ್ಲೇ ಸರ್ಕಾರದ ಅನುಮತಿ ಪಡೆದು ಔಷಧ ಮಾರುಕಟ್ಟೆಗೆ ತರಲಾಗಿದೆಂದು ರಾಜು ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
