ದೊಡ್ಡಬಳ್ಳಾಪುರ:ಎರಡನೇ ಬಾರಿಗೆ ಶನಿಮಹಾತ್ಮನ ದೇವಸ್ಥಾನಕ್ಕೆ ಮಾಂಸದ ಹಾರ ತಂದು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಲು ಯತ್ನಿಸಿದ ಕಿಡಿಗೇಡಿಗಳನ್ನು ದೇವಾಲಯದ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಈ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಇತಿಹಾಸ ಪ್ರಸಿದ್ದ ಚಿಕ್ಕ ಮಧುರೆ ದೇವಾಲಯದಲ್ಲಿ ನಡೆದಿದೆ. ದೇವಾಲಯವನ್ನು ಅಶುದ್ಧಿಗೊಳಿಸಲು ಕಿಡಿಗೇಡಿಗಳು ಪ್ರಯತ್ನಿಸಿದ್ದಾರೆ. ಮಾಂಸದ ಹಾರ ಇಟ್ಟು ಪರಾರಿ ಆಗಲು ಯತ್ನಿಸಿದಾಗ ದೇವಾಲಯದ ಸಿಬ್ಬಂದಿಯ ಕೈಗೆ ಕಿಡಿಗೇಡಿಗಳು ಮತ್ತು ಸಂಸ್ಕಾರಹೀನರು ಸಿಕ್ಕಿಬಿದ್ದಿದ್ದಾರೆ.
ಇದನ್ನೂ ಓದಿ:ತಂದೆ CBI ಅಧಿಕಾರಿಯಾದ್ರೂ ಬಸ್​ ಚಾಲಕಿಯಾಗಿ ಪಾರ್ಟ್​ ಟೈಂ ಕೆಲ್ಸ! ಈಕೆ ಬಗ್ಗೆ ತಿಳಿದ್ರೆ ಶಹಬ್ಬಾಸ್​ ಅಂತೀರಾ….
ತಲೆಯಲ್ಲಿ ಮೆದುಳು ಹೊಂದಿರದ ಅವಿವೇಕಿಗಳು ಗುಲಾಬಿ‌ ಹಾರದಲ್ಲಿ ಮಾಂಸ‌ದ ತುಂಡುಗಳನ್ನು ಇಟ್ಟುಕೊಂಡು ದೇವಸ್ಥಾನಕ್ಕೆ ಬಂದಿದ್ದರು. ಅಂದಹಾಗೆ ಆ ಬುದ್ಧಿಗೇಡಿಗಳು ಯಾರೆಂದರೆ, ಹೊಸಕೋಟೆ ಸಮೀಪದ ಕಂಬಲಹಳ್ಳಿಯ ರಾಜು ಮತ್ತು ವೈಟ್ ಫೀಲ್ಡ್ ಮೂಲದ ಆಟೋ ಚಾಲಕ ಸೋಮಶೇಖರ್. ಇಂತಹ ದುರ್ಜನರಿಂದಲೇ ಶಾಂತಿ ನೆಲೆಸಿರುವ ಸಮಾಜದಲ್ಲಿ ಅಂಶಾಂತಿ ಉಂಟಾಗುವುದು.
ಈ ಆರೋಪಿಗಳ ಕೃತ್ಯ ಇದೇ ಮೊದಲೇನಲ್ಲ. ಈ ಹಿಂದೆಯು ಇದೆ ರೀತಿ ಕೃತ್ಯ ಎಸಗಿದ್ದರು. ಈ ಪುಂಡರ ಉದ್ಧಟತನಕ್ಕೆ ಏನೆನ್ನಬೇಕೋ ಕಾಣೆ. ದೇವಾಲಯದ ಒಳಗೆ ಮಾಂಸದ ಹಾರ ಇಟ್ಟು ಬಂದರೆ ಮೂರು ಸಾವಿರ ಹಣ ನೀಡುತ್ತೇವೆ ಎಂದು ಕಳಿಸಿದ್ದರು ಎಂದು ಸಮರ್ಥಿಸಿಕೊಂಡಿದ್ದಾರೆ. ಹಣದಾಸೆಗೆ ಈ ಕೃತ್ಯ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಆದರೆ, ಇದರಿಂದ ಸಮಾಜದ ಮೇಲೆ ಬೀರುವ ಪ್ರಭಾವವನ್ನು ಈ ಬುದ್ಧಿಗೇಡಿಗಳು ಕೊಂಚವೂ ಯೋಚಿಸಿಲ್ಲ. ಮೆದುಳು ಇದ್ದರೆ ತಾನೇ ಯೋಚಿಸುತ್ತಾರೆ.
ಇದನ್ನೂ ಓದಿ:ತನ್ನನ್ನು ತಾನೇ ಮದ್ವೆಯಾಗಿ 24 ಗಂಟೆಗಳಲ್ಲೇ ಡಿವೋರ್ಸ್​ ಪಡೆದುಕೊಂಡ ಯುವತಿ! ಆಕೆ ಕೊಟ್ಟ ವಿಚಿತ್ರ ಕಾರಣವಿದು…
ಶನಿವಾರ (ಮಾ.11) ಸಂಜೆ ಇದೇ ರೀತಿ ದೇವಾಲಯಕ್ಕೆ ಮಾಂಸದ ಹಾರ ತಂದು ದುಷ್ಕರ್ಮಿಗಳು ಸಿಕ್ಕಿಬಿದ್ದಿದ್ದಾರೆ. ಕೂಡಲೇ ಅವರನ್ನು ಹಿಡಿದು ದೊಡ್ಡ ಬೆಳವಂಗಲ ಪೊಲೀಸರಿಗೆ ದೇವಾಲಯದ ಸಿಬ್ಬಂದಿ ಒಪ್ಪಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕಮಧುರೆ ಶನಿ ಮಹಾತ್ಮ ದೇವಾಲಯ ಈ ವಿಲಕ್ಷಣ ಘಟನೆಗೆ ಸಾಕ್ಷಿಯಾಗಿದೆ. ಇಂತಹ ಕಿಡಿಗೇಡಿಗಳಿಗೆ ಸೂಕ್ತ ಶಿಕ್ಷೆ ನೀಡಬೇಕೆಂದು ಜನರು ಆಗ್ರಹಿಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಮುಟ್ಟಿನ ರಕ್ತ ಸಂಗ್ರಹಿಸಿ 50 ಸಾವಿರ ರೂ.ಗೆ ಮಾರಾಟ! ಗಂಡನ ಮನೆಯ ಕರಾಳತೆ ಬಿಚ್ಚಿಟ್ಟ ವಿವಾಹಿತೆ

ದುಬೈನಲ್ಲಿ ನರೇಶ್​-ಪವಿತ್ರಾ ಲೋಕೇಶ್​ ಮೋಜು ಮಸ್ತಿ: ಹನಿಮೂನ್ ಮುಗಿಸಿ ಬಂದ್ರಾ ಸ್ಟಾರ್​ ಜೋಡಿ​?

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:3 × 2 =
Remember me
