ವಿಜಯಪುರ:ರಾಜ್ಯದಲ್ಲೀಗ ಕಾರು ನಿಲ್ಲಿಸಿ ಹೋಗುವುದಕ್ಕೂ ಭಯ ಎನಿಸುವಂಥ ವಾತಾವರಣ ಉಂಟಾದಂತಿದೆ. ಅದರಲ್ಲೂ ಒಂದೇ ದಿನ ಒಂದೇ ಥರದ ಎರಡು ಪ್ರಕರಣಗಳು ನಡೆದಿರುವುದು ಕಾರುಗಳ ಮಾಲೀಕರಲ್ಲಿ ಆತಂಕ ಉಂಟುಮಾಡಿದ್ದು, ಎಚ್ಚರ ವಹಿಸಬೇಕಾದ ಸೂಚನೆಯನ್ನೂ ಪರೋಕ್ಷವಾಗಿ ನೀಡಿದೆ.
ಬೆಳಗಾವಿಯ ಗೋಕಾಕ್​ನ ಸಬ್​ ಜೈಲ್ ಮುಂದೆ ನಿಲ್ಲಿಸಿದ್ದ ಇನ್ನೋವಾ ಕಾರಿನ ಗಾಜು ಒಡೆದ ಕಳ್ಳರು, ಮುತ್ತುನಂದಿ ಎಂಬವರ 10 ಲಕ್ಷ ರೂ. ದೋಚಿಕೊಂಡು ಹೋದ ಬೆನ್ನಿಗೆ ರಾಜ್ಯದಲ್ಲಿ ಅಂಥದ್ದೇ ಮತ್ತೊಂದು ಪ್ರಕರಣ ನಡೆದಿದೆ. ವಿಜಯಪುರ ನಗರದ ಅಥಣಿ ರಸ್ತೆ ಬಳಿ ಈ ಘಟನೆ ನಡೆದಿದೆ.
ಇದನ್ನೂ ಓದಿ:ಹಾಡಹಗಲೇ ಕಾರಿನ ಗಾಜು ಒಡೆದು 10 ಲಕ್ಷ ರೂ. ದೋಚಿದ ಕಳ್ಳರು!
ನಗರದ ವೈಭವ ಹೊಟೇಲ್ ಎದುರು ಕಾರು ನಿಲ್ಲಿಸಿ ಹೋದ ವೇಳೆ ಕಳ್ಳರು ಕಾರಿನ ಗಾಜು ಒಡೆದು ಹಾಕಿದ್ದಲ್ಲದೆ ಕಾರೊಳಗಿದ್ದ 3 ಲಕ್ಷ ರೂಪಾಯಿಯನ್ನು ದೋಚಿಕೊಂಡು ಹೋಗಿದ್ದಾರೆ.
ಕಾರಿನ ಡ್ರೈವರ್ ಸೀಟ್ ಬದಿಯ ಗ್ಲಾಸ್ ಒಡೆದು ಈ ಕೃತ್ಯ ಎಸಗಿದ್ದು, ನಿತೀನ್ ಗವಾರಿ ಎಂಬುವವರಿಗೆ ಸೇರಿದ್ದ ಹಣ ಕಳವಾಗಿದೆ. ಈ ಕುರಿತು ವಾರಸುದಾರರು ಗಾಂಧಿಚೌಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಬೇಸಿಗೆಯಲ್ಲಿ ವಾಹನದ ಪೆಟ್ರೋಲ್ ಟ್ಯಾಂಕ್ ಫುಲ್ ಮಾಡಿದ್ರೆ ಬ್ಲಾಸ್ಟ್​ ಆಗುತ್ತಾ?

5 ಮದ್ವೆ, 3 ಡೈವೋರ್ಸ್, ಸದ್ಯ ಇಬ್ರು ಹೆಂಡ್ತಿ; ಪತ್ನಿ ಬೇಗ ಮನೆಗೆ ಬರಲಿ ಎಂದೇ ಫ್ಲೈಓವರ್!; ಏನಿದು, ಯಾರ ಕಥೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
