ಕೋಲಾರ:ಶಾಲೆ, ಅಂಗಡಿ, ಪ್ರಾರ್ಥನಾ ಮಂದಿರಗಳಿಗೆ ಕಾಲಿಟ್ಟಿದ್ದ ಕೋಮುಸಂಘರ್ಷ ಇದೀಗ ಸ್ಮಶಾನಕ್ಕೂ ತಲುಪಿದ್ದು, ಹಿಂದು ರುದ್ರಭೂಮಿಯಲ್ಲಿನ ಸಮಾಧಿಗಳನ್ನು ವಿರೂಪಗೊಳಿಸಿ ವಿಕೃತಿ ಮೆರೆದ ಪ್ರಕರಣ ಕಂಡುಬಂದಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ನಗರದ ಗಣಿಗುಂಟೆಪಾಳ್ಯದಲ್ಲಿ ಇರುವ ಬಲಿಜ ಸ್ಮಶಾನದಲ್ಲಿ ಇಂಥ ದುಷ್ಕೃತ್ಯಗಳು ನಡೆದಿವೆ. ಇಲ್ಲಿನ ಸಮಾಧಿ ಮತ್ತು ನಾಮಫಲಕಗಳ ನಾಮಫಲಕಗಳನ್ನು ವಿರೂಪಗೊಳಿಸಲಾಗಿದೆ. ಕೆಲವು ಸಮಾಧಿಗಳ ಮೇಲೆ ಎಸ್​ಡಿಪಿಐ ಎಂದು ಬರೆಯಲಾಗಿದೆ.
ಹೀಗೆ ಸುಮಾರು 30 ಸಮಾಧಿಗಳನ್ನು ವಿರೂಪಗೊಳಿಸಲಾಗಿದ್ದು, ಈ ಕುರಿತು ಶ್ರೀ ರಾಮ ಯುವಕ ರೈತ ಸಂಘ ಪೊಲೀಸರಿಗೆ ದೂರು ನೀಡಿದೆ. ಕಿಡಿಗೇಡಿಗಳು ನಮ್ಮ ಪೂರ್ವಜರಿಗೆ ಅಗೌರವ ತೋರಿದ್ದಲ್ಲದೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ‌ ಉಂಟು ಮಾಡಿದ್ದಾರೆ. ಅಂಥವರನ್ನು ಪತ್ತೆ ಮಾಡಿ ಕಾನೂನುಕ್ರಮ ಜರುಗಿಸಬೇಕು ಎಂದು ಮುಳಬಾಗಲು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಬೆಂಗಳೂರು ಬಿಟ್ಟು ಹೈದರಾಬಾದ್​ಗೆ ಬನ್ನಿ ಎಂದ ತೆಲಂಗಾಣ ಸಚಿವ; ದಿಟ್ಟ ಉತ್ತರ ಕೊಟ್ಟ ಡಾ.ಕೆ.ಸುಧಾಕರ್

ಚಲಿಸುತ್ತಿದ್ದ ಆಟೋ ಮೇಲೆ ಬಿದ್ದ ಮರ; ಮಹಿಳೆಯ ಸಾವು, ಚಾಲಕನ ಸ್ಥಿತಿ ಚಿಂತಾಜನಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
